04 ಮಾರ್ಚ್ 2008

ಮಿತ್ರನ ಮನೆಯಂಗಳದಿ ಒಂದು ಸಂಜೆ



ಮಾರ್ಚ್ ಮೊದಲ ಭಾನುವಾರ.

ವಿಶಿಷ್ಠವೆನಿಸಿದ ಕಾರ್ಯಕ್ರಮಕ್ಕೆ ಮಿತ್ರ ಹರೀಶ ಆದೂರರ ಮನೆಗೆ ಹೋಗಿದ್ದೆ.ಅಂದು ಅಲ್ಲಿ "ಮನೆಯಂಗಳದಲ್ಲೊಂದು ಸಾಹಿತ್ಯ " ಎಂಬ ಕಾರ್ಯಕ್ರಮ ನಡೆಯತ್ತಿತ್ತು.

ಪ್ರಸಾರಭಾರತಿಯ ಮಾಜಿ ಅಧ್ಯಕ್ಷ ಎಂ.ವಿ.ಕಾಮತ್ ಅವರು "ಭಾರತಾಯಣ"ದ ಬಗ್ಗೆ ಉಪನ್ಯಾಸ ನೀಡುವವರಿದ್ದರು.ಆಳ್ವಾಸ್ ನ ಮೋಹನ್ ಆಳ್ವಾ ಸಭಾಧ್ಯಕ್ಷತೆ ವಹಿಸಿದ್ದರು.ಮಿತ್ರ ಹರೀಶಣ್ಣ ವೇದಿಕೆಯಲ್ಲಿದ್ದರು. ಮನೆಯಂಗಳವಿಡೀ ತುಂಬಿ ಹೋಗಿತ್ತು. ಕಾಲೇಜು ವಿಧ್ಯಾರ್ಥಿಗಳೂ ಇದ್ದರು.

ಸಮಯ ಅಪರಾಹ್ನ ೨.೩೦.

ಕಾರ್ಯಕ್ರಮ ಆರಂಭಗೊಂಡಿತು.ಸಭಾ ಮರಿಯಾದೆಗಳ ಬಳಿಕ ಎಂ.ವಿ.ಕಾಮತ್ "ಭಾರತಾಯಣ" ಶುರುಮಾಡಿದರು.ಅವರು ಮಾತನಾಡುತ್ತಿದ್ದಂತೆಯೇ ಆಸಕ್ತಿ, ಕುತೂಹಲ ಹೆಚ್ಚಾಗುತ್ತಿತ್ತು.ಅದರ ಕೆಲವು ಸಾರಾಂಶಗಳು ಹೀಗಿವೆ.....


1947 ರ ವರೆಗೆ ಭಾರತ ಹಾಗೂ ನಾವು ಸ್ವತಂತ್ರರಾಗುವೆವೆಂಬ ಕಲ್ಪನೆ ಕೂಡಾ ಇದ್ದಿರಲಿಲ್ಲವಂತೆ. 1947 ರ ಆಗಸ್ಟ್ 14 ರ ಮಧ್ಯರಾತ್ರಿ ಇಡೀ ದೇಶದಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ದನ್ನು ಅವರು ಅತ್ಯಂತ ಭಾವುಕರಾಗಿ ವಿವರಿಸಿದರು.ಆಗ ಅವರು ಮಾಡಿದ್ದ ವರದಿಯನ್ನು ನೆನಪಿಸಿ ಗಾಂಧೀಜಿ ,ಅಂಬೆಡ್ಕರ್ ಸೇರಿದಂತೆ ಹಲವಾರು ಮುಖಂಡರ ಸಂದರ್ಶನದ ಬಗ್ಗೆಯೂ ಅವರು ತಿಳಿಸಿದರು.

ಅಖಂಡ ಭಾರತವನ್ನು ಸ್ಥಾಪಿಸಲು ಶಂಕರಾಚಾರ್ಯರು ಕಾಲ್ನಡಿಗೆಯ ಮೂಲಕ ಸಾಗಿದ್ದನ್ನು ನೆನಪಿಸಿಕೊಂಡ ಎಂ.ವಿ.ಕಾಮತ್ ಇಂದಿನ ಮೆಕಾಲೆ ಶಿಕ್ಷಣ ಪದ್ದತಿಯು ಶಂಕರಾಚಾರ್ಯರಂತಹ ಮಹಾನುಭಾವರ ಹೆಸರನ್ನು ನಮ್ಮ ವಿಧ್ಯಾರ್ಥಿಗಳಿಗೆ ತಿಳಿಸುವಂತೆ ಮಾಡಿಲ್ಲ ಎಂದು ವಿಷಾದಿಸಿದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯಷ್ಟೇ ಇನ್ನೂ ಅನೇಕರು ಭಾಗಿಯಾಗಿದ್ದರು ಆದರೆ ಬಹುತೇಕ ಮಂದಿಯ ಹೆಸರು ಇತಿಹಾಸದಲ್ಲಿ ದಾಖಲಿಸದೆ ಈಗಿನ ಯುವ ಪೀಳಿಗೆಗೆ ಅದರ ಅರಿವೆಯೇ ಇಲ್ಲ ಎಂದರು.ಇತಿಹಾಸ ಅರಿವು ಕೂಡಾ ಇಲ್ಲ ಹೆಚ್ಚೇಕೆ ಎಂ.ಕೆ.ಗಾಂಧಿ ಯಾರು ಎಂದು ಕೇಳಿದರೆ ಹೆಚ್ಚಿನ ಯುವ ಜನತೆಗೆ ಗೊತ್ತಿಲ್ಲ ಎಂಬುದನ್ನು ಸಭೆಯಲ್ಲಿ ಸ್ಪಷ್ಟವಾಗಿ ತಿಳಿಸಿದರು.

ಭಾರತದ ಇಂದಿನ ಸಾಮಾಜಿಕ ವ್ಯವಸ್ಥೆಗೂ ಹಿಂದಿನ ವ್ಯವಸ್ಥೆಗೂ ಅಜಗಜಾಂತರವಿದೆ.ಇಂದು ಸುಧಾರಿತ ಸಮಾಜವಿದೆ ಎಂದರು.

ಮೋಹನ್ ಆಳ್ವ ಮಾತನಾಡಿ ನಾವು ಆಶಾವಾದಿಗಳಾಗಬೇಕು ಸಂಘರ್ಷದ ಬದುಕಿನಲ್ಲಿ ಧನಾತ್ಮಕ ಅಂಶಗಳಿಗೆ ಒತ್ತು ನೀಡಿದಾಗ ಅಬಿವೃದ್ಧಿ ಸಾಧ್ಯ ಎಂದ ಅವರು ನಂಬಿಕೆ ಮೂಢನಂಬಿಕೆಗಳ ವ್ಯತ್ಯಾಸವನ್ನು ಅರಿತಾಗ ದಾರಿ ಸುಗಮವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಎಂ.ವಿ.ಕಾಮತ್ ಅವರೊಂದಿಗೆ ಸಂವಾದ ನಡೆಯಿತು.ಸಂವಾದದಲ್ಲಿ ಗಂಭೀರ ಪ್ರಶ್ನೆಗಳಿದ್ದವು.ಇಷ್ಟೊಂದು ಸಮಸ್ಯೆಗಳ ನಡುವೆಯೂ ಭಾರತ ಮುಂದುವರಿಯಬಹುದೇ ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದಾಗ ಕಾಮತ್ ಅವರು ಖಂಡಿತಾ ಭಾರತ ಬೆಳೆಯಬಲ್ಲುದು ಎಂದು ಹೇಳಿದರು.ನಮ್ಮ ಪರಂಪರೆ , ಪೂರ್ವಜರ ದಾರಿಗಳು ಚೆನ್ನಾಗಿವೆ ಹಾಗಾಗಿ ಭಾರತಕ್ಕೆ ಹೆದರಿಕೆಯ ಅವಶ್ಯಕತೆಯಿಲ್ಲ.ನಮ್ಮ ಬದುಕಿನ ದಾರಿಯನ್ನು ನಾವು ಆ ದಿಸೆಯಲ್ಲೇ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.

4 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಗೆಳೆಯ ನಿನಗಿದೋ ನಮ್ಮ ಕೃತಜ್ಞತೆಗಳು...
ದೂರದ ಊರಿಂದ ಪುಟ್ಟಕಾರ್ಯಕ್ರಮಕ್ಕೆ ಆಸಕ್ತಿಯಿಂದ ಬಂದಿದ್ದೂ ಅಲ್ಲದೆ `ಜಗದ ತಾಣದಲ್ಲೊಂದು ' ಅವಕಾಶವನ್ನೂ ನೀಡಿದ್ದಕ್ಕೆ... ಪ್ರೀತಿಯಿಂದ ಪ್ರೋತ್ಸಾಹದ ನುಡಿಗಳನ್ನಾಡಿದುದಕ್ಕೆ.... ಪ್ರೀತಿ...ಸ್ನೇಹ ಮುಂದುವರಿಯಲಿ.
ಶುಭಾಶಯಗಳು...ಧನ್ಯೋಸ್ಮಿ.
ಹರೀಶ್ ಕೆ. ಆದೂರು.

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಹರೀಶಣ್ಣ ಅದು ಪುಟ್ಟ ಕಾರ್ಯಕ್ರಮವಲ್ಲ. ಮೌಲ್ಯಯುತವಾದ ಕಾರ್ಯಕ್ರಮ. ನನಗೆ ಅತ್ಯಂತ ಹಿಡಿಸಿದ ಕಾರ್ಯಕ್ರಮಗಳಲ್ಲಿ ಸಾಹಿತ್ಯ ಸಂಜೆಯೂ ಒಂದು. ಅಲ್ಲಿ ಸದ್ದು ಗದ್ದಲಗಳಿಲ್ಲ ಕೇವಲ ಸಾಹಿತ್ಯ ಮನಸ್ಸುಗಳು ಮಾತ್ರಾ ಇದ್ದುವಲ್ಲ ಹಾಗಾಗಿ ಕಾರ್ಯಕ್ರಮ ಸಂಪೂರ್ಣ ಯಶಸ್ವಿ.

ಮನೋರಮಾ.ಬಿ.ಎನ್ ಹೇಳಿದರು...

tumba chenda ide....hareeshana blog moolaka nimma blogege pravesha egashte padede...I'll read ur articles in my free time..

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಮನೋರಮಾ ಅವರೇ ಧನ್ಯವಾದಗಳು.ಮೊದಲ ಬಾರಿಗೆ ಬ್ಲಾಗ್ ಗೆ ಭೇಟಿ ನೀಡಿದ್ದೀರಿ. ಆಗಾಗ ಬನ್ನಿ.