21 ಮೇ 2008

ಇದು ಒಡಲ ನುಡಿ....



ನಿಜಕ್ಕೂ ನನಗೆ ಆ ವಿಷಯ ಅಂತರಂಗದೊಳಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತು.ಮನಸ್ಸಿನೊಳಗೆ ಮಂಥನ ನಡೆಸಿತು.ಕೊನೆಗೆ ಅವರು ಹೇಳಿದ್ದು ಹೌದು ಅಂತ ಅನಿಸಿತು. ಆ ವಿಷ್ಯ ಏನು ಅಂತ ಒಂದ್ಚೂರು ಇಲ್ಲಿ ದಾಖಲಿಸಿಡಬೇಕು ಅಂತ ಅನ್ನಿಸಿತು.

ಮೊನ್ನೆ ನಾನು ನಮ್ಮೂರಿನ ಹಿರಿಯ ಕೃಷಿಕರೊಬ್ಬರ ಮನೆಗೆ ಹೋಗಿದ್ದೆ.ಕಾರಣ ಅವರಿಗೊಂದು ಕೃಷಿ ವಿಭಾಗದಲ್ಲಿ ಸನ್ಮಾನವನ್ನು ನೀಡುವ ಬಗ್ಗೆ ಸುದ್ದಿ ಪ್ರಸ್ತಾಪವಾಗಿತ್ತು. ಆ ಬಗ್ಗೆ ಅವರಲ್ಲಿ ಮಾತನಾಡಿ ಒಂದಿಷ್ಟು ಆಹಾರವಾದೀತು ಅಂತ ನಂಬಿಕೊಂಡು ಅವರ ಮನೆಗೆ ಹೋಗಿದ್ದೆ.ಆದರೆ ಅವರು ಪ್ರಶಸ್ತಿಗೆ ಒಪ್ಪಲಿಲ್ಲ.ಕಾರಣ ಹಲವಾರು ಹೇಳಿದ್ದರು.ಯುವಕರಿಗೆ ಕೊಡಿ ಅವರನ್ನು ಪ್ರೋತ್ಸಾಹಿಸಲು ಅನ್ನುವುದು ಅವರ ಹಲವು ಕಾರಣಗಳಲ್ಲಿ ಒಂದು.ಮತ್ತೆ ಅವರು ಹೇಳಿದ ಮಾತುಗಳನ್ನು ಇಲ್ಲಿ ಹಾಗೆಯೇ ದಾಖಲಿಸುತ್ತೇನೆ.

ಇಂದು ಕೃಷಿಯಲ್ಲಿ ವಿದ್ಯಾವಂತರು ತೊಡಗಿಕೊಳ್ಳಬೇಕಾಗಿದೆ.ಅಂತಹ ಅನಿವಾರ್ಯತೆ ನಮಗೆ ಬಂದಿದೆ.ಒಂದು ವೇಳೆ ವಿದ್ಯಾವಂತರು ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ ಎಂದಾರೆ ದೇಶದ ಭವಿಷ್ಯದ ಬಗ್ಗೆ ಚಿಂತಿಸಬೇಕಾಗಿದೆ ಎನ್ನುತ್ತಾ ಪೀಠಿಕೆ ಹಾಕಿದ ಅವರು ಇಲ್ಲಿ ಸಮಸ್ಯೆ ಇದೆ ಅಂತ ಪಲಾಯನವಾದ ಮಾಡುವುದಲ್ಲ ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಸಮಸ್ಯೆಯನ್ನು ಮುನ್ನುಗ್ಗಬೇಕು ಹಾಗಾದ್ರೆ ಮಾತ್ರಾ ಭವಿಷ್ಯ ಗಟ್ಟಿ.ನೀವು ಗಮನಿಸಿ ಯಾವುದೇ ಒಬ್ಬ ವಿದ್ಯಾರ್ಥಿಯಿರಲಿ ಅಥವಾ ಇಂಜಿನಿಯರೇ ಇರಲಿ ಅವರು ಉತ್ತೀರ್ಣರಾಗಲು ಕೇವಲ 35-40 ಅಂಕ ಪಡೆದರೆ ಸಾಕು.ಆದರೆ ಕೃಷಿಕ 100 ರಲ್ಲಿ 99 ಅಂಕ ಪಡೆದಿರಬೇಕು .ಏಕೆ ಗೊತ್ತಾ ಇಂದು ಯಾವುದೇ ವಿಭಾಗದವರನ್ನು ಗಮನಿಸಿ ಸಾಫ್ಟವೇರ್ ಇಂಜಿನಿಯರ್ ,ಮೆನೇಜರ್ ,ಡಾಕ್ಟರ್ ಅಥವಾ ಇನ್ನಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅವರ ವಿಭಾದಲ್ಲಿ ಮಾತ್ರಾ ಪರಿಪೂರ್ಣರಾದರೆ ಸಾಕು.ಆದರೆ ಕೃಷಿಕ?.ಕೇವಲ ಕೃಷಿಯಲ್ಲಿ ಮಾತ್ರಾ ಪರಿಪೂರ್ಣನಾದರೆ ಸಾಕಾಗುವುದಿಲ್ಲ.ಆತ ವಿಜ್ಞಾನಿಯಾಗಿಯೂ ,ವೈದ್ಯನಾಗಿಯೂ ,ಮೆನೇಜರನಾಗಿಯೂ,ಇಂಜಿನಿಯರನಾಗಿಯೂ,ಚಿಂತಕನಾಗಿಯೂ ಇರಬೇಕಾಗುತ್ತದೆ ಹಾಗಾಗಿ ಆತ ಎಲ್ಲಾ ಕ್ಷೇತ್ರಗಳನ್ನೂ ಅಭ್ಯಸಿಸಿರಬೆಕಾಗುತ್ತದೆ.ನೀವು ಗಮನಿಸಿ ಕೃಷಿಕನಿಗೆ ಗೋಸಾಕಾಣೆ ಅನಿವಾರ್ಯ ಹಾಗಾಗಿ ಒಂದು ವೇಳೆ ಹಸುವಿಗೆ ಅನಾರೋಗ್ಯ ಕಾಡಿದರೆ ತಕ್ಷಣದ ಔಷಧದ ಮಾಹಿತಿ ಆತನಿಗೆ ಗೊತ್ತಿರಬೇಕಾಗುತ್ತದೆ ,ಮನೆಯ ವಿದ್ಯುತ್ ಅಥವಾ ಪಂಪಿನ ವಿದ್ಯುತ್ ದೋಷವಾದರೆ ಕೊಂಚ ದುರಸ್ಥಿ ತಿಳಿದಿರಲೇಬೇಕು,ಮನೆಯ ವ್ಯವಹಾರವನ್ನು [ವಿವಿಧ ಕ್ಷೇತ್ರಗಳನ್ನು ಸರಿದೂಗಿಸಿ] ಸುಸಜ್ಜಿತವಾಗಿ ಮಾಡಿಕೊಳ್ಳಬೇಕು,ಮನೆಗೆ ಅಗತ್ಯವಾಗಿರುವ ಕಟ್ಟಡಗಳ ಬಗ್ಗೆ ಆತನೇ ರೂಪರೇಷೆ ತಯಾರಿಸಬೇಕು..... ಮಾತ್ರವಲ್ಲ ತನ್ನ ಜಮೀನಿನಲ್ಲಿರುವ ಗಿಡಗಳ ಬಗ್ಗೆ ಕೊಂಚವಾದರೂ ಮಾಹಿತಿ ಇರಲೇಬೇಕು ಅವುಗಳ ಫಸಲು ಇತ್ಯಾದಿಗಳ ಬಗ್ಗೆ ಗೊತ್ತಿರಬೇಕು.ಇದೆಲ್ಲದರ ನಡುವೆಯೂ ಆತ ಭಾವನಾತ್ಮಕವಾದ ಸಂಬಂಧಗಳ ನಡುವೆ ಇರಬೇಕಾಗುತ್ತದೆ.ಅದಕ್ಕಾಗಿಯೇ ಕೃಷಿಕರು ಪಾಸಾಗಲು ಅಷ್ಟು ಅಂಕ ಬೇಕೇ ಬೇಕು .. ಕೇವಲ ಉದ್ಯೋಗವಿಲ್ಲದ ಉದ್ಯೋಗ ಅದಲ್ಲ.ಹಾಗಾಗಿ ಇನ್ನು ಅಲ್ಲಿ ವಿದ್ಯಾವಂತರೇ ಬೇಕು ಎಂದು ಮಾತನಾಡುತ್ತಾ ಸಾಗಿದರು. ನಾನು ಸುಮ್ಮನೆ ಕೇಳಿದೆ , ಆದರೆ ಇಂದು.....?. ತಕ್ಷಣವೆ ಅವರು ಹೇಳಿದ್ದು ಇಂದಿನ ಪರಿಸ್ಥಿತಿ ಬಿಡಿ .ಅದು ಹಣದ ಹಿಂದಿನ ಓಟ... ಹಾಗಾಗಿ ಆ ಬಗ್ಗೆ ಹೆಚ್ಚು ಮಾತನಾಡುವ ಅವಶ್ಯವಿಲ್ಲ ಅಂದರು.

ಮತ್ತೆ ನನಗೆ ನೆನಪಾಯಿತು.

ಅಂದು ನನ್ನ ಸಂಬಂಧಿಕರೊಬ್ಬರು ಹೇಳಿದ್ದರು.ಅವರು ಕಂಪೆನಿಯೊಂದರಲ್ಲಿ ಹಲವು ವರ್ಷಗಳಿಂದ ಉದ್ಯೋಗಿಯಾಗಿದ್ದರಂತೆ.ಅವರಿಗೆ ಎ.ಟಿ.ಎಂ ಸೆಂಟರಿನಿಂದ ಹಣ ಡ್ರಾ ಮಾಡುವ ಸಂಗತಿಯೇ ತಿಳಿದಿರಲಿಲ್ಲವಂತೆ.ಹಣ ಬೇಕಿದ್ದರೆ ಬ್ಯಾಂಕಿಗೆ ಹೋಗಿ ಅಲ್ಲಿಯೇ ಡ್ರಾ ಮಾಡುತ್ತಿದ್ದರಂತೆ....!. ಇನ್ನು ಬ್ಯಾಂಕ್ ವ್ಯವಹಾರದಲ್ಲಿ ಅವರಿಗೆ ಗೊತ್ತಿದ್ದದ್ದು ಹಣ ಡ್ರಾ ಮಾಡಲು ಮತ್ತು ಡಿಪೊಸಿಟ್ ಮಾಡಲು ಮಾತ್ರವಂತೆ.

ನಿಜವಾಗಲೂ ಎಂಥಾ ಅವಸ್ಥೆ ಮಾರಾಯ್ರೆ...? ಅಂತ ನನಗೆ ಅನ್ನಿಸಿತು.

4 ಕಾಮೆಂಟ್‌ಗಳು:

Chamaraj Savadi ಹೇಳಿದರು...

ಪುಚ್ಚಪ್ಪಾಡಿ ಅವರೇ,

ಕೃಷಿ ಬಗ್ಗೆ ನೀವು ಬರೆದಿರುವ ಸಂಗತಿ ಸತ್ಯ. ವಿದ್ಯಾವಂತರು ಕೃಷಿಗೆ ಇಳಿಯುವುದು ಸೂಕ್ತ. ಏಕೆಂದರೆ, ಅದಕ್ಕೆ ಹೊಸ ರಕ್ತ ಬರಲು ಆಗ ಮಾತ್ರ ಸಾಧ್ಯ.

ಆದರೆ, ಇನ್ನೊಂದು ದುರಂತ ಗಮನಿಸಿದ್ದೀರಾ? ಕೃಷಿಯಲ್ಲಿ ಈಗ ಸಾಕಷ್ಟು ವಿದ್ಯಾವಂತರು ಸಾವಯವ-ನೈಸರ್ಗಿಕ-ಸಹಜ ಇತ್ಯಾದಿ ಹೆಸರಿನಲ್ಲಿ ಬರುತ್ತಿದ್ದಾರೆ. ತಮ್ಮದೇ ಲಾಬಿಗಳನ್ನು, ಸೆಮಿನಾರುಗಳನ್ನು, ಪತ್ರಿಕೆಗಳನ್ನು ಮಾಡಿಕೊಂಡು ಗುಂಪುಗಾರಿಕೆ ನಡೆಸುತ್ತಿದ್ದಾರೆ. ನೈಸರ್ಗಿಕ ವಿಧಾನಗಳಿಂದ ಕೃಷಿ ಖರ್ಚು ಕಡಿಮೆಯಾಗುತ್ತದೆ ಎಂಬುದು ಇವರ ಪ್ರಚಾರ. ಆದರೆ, ಆ ವಿಧಾನದಲ್ಲಿ ಬೆಳೆದ ಕೃಷಿ ಉತ್ಪನ್ನಗಳಿಗೆ ಇವರು ದುಪ್ಪಟ್ಟು ಬೆಲೆ ಏಕೆ ಇಡುತ್ತಾರೋ! ಕೇಳಿದರೆ, ನಿಮ್ಮನ್ನು ದೂರ ಇಡುತ್ತಾರೆ.

ಇವರಂಥ ವಿದ್ಯಾವಂತರು ಬಂದರೆ, ಕೃಷಿ ಖುಷಿಯಾಗುವುದು ಖಂಡಿತ ಸಾಧ್ಯವಿಲ್ಲ. ಇಂತಹ ವ್ಯಾಪಾರಿಗಳಿಂದ ದೂರವಾದ, ಮಣ್ಣಿನ ಮೇಲೆ ಪ್ರೀತಿ ಹೊಂದಿರುವ ವಿದ್ಯಾವಂತರು ಈ ಕ್ಷೇತ್ರಕ್ಕೆ ಬರಲಿ.

ಅಂತಹ ಆಶಯ ಎಲ್ಲರಲ್ಲೂ ಉಂಟಾಗುವಂತೆ ನಿಮ್ಮ ಲೇಖನ ಪ್ರೇರೇಪಿಸಲಿ.

- ಚಾಮರಾಜ ಸವಡಿ

ಬಡಗಿ ಹೇಳಿದರು...

Dear Mahesh,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends.

ಅನಾಮಧೇಯ ಹೇಳಿದರು...

ಪುಚ್ಚೆಪ್ಪಾಡಿ ಲಾಯ್ಕಿದ್ದು ಲೇಖನ. ಆನು ಇದರ ಇಂಚರಕ್ಕೆ ಬಳಸಿಕೊಳ್ತೆ. ಮಂಗಳವಾರ ಬತ್ತು. ನೋಡು ಆತ.

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಚಾಮರಾಜ ಸವಡಿಯವರೇ ಧನ್ಯವಾದಗಳು.ನೀವು ಹೇಳಿದ್ದು ಸತ್ಯ.

ಸಾಹಿತ್ಯ ಸಂಜೆಯ ಮಿತ್ರ ಹರೀಶಣ್ಣ , ನಮಸ್ಕಾರ
ಖಂಡಿತಾ ಬಳಸಿಕೊಳ್ಳಿ.

ಇತೀ ಪ್ರೀತಿಯ
ಮಹೇಶ್