11 ಜೂನ್ 2008

ಆರೋಗ್ಯ ಸಚಿವರು 68 ಕೆ ಜಿ...!!??



ಚಿಕೂನ್ ಗುನ್ಯಾ ಪೀಡಿತ ಪ್ರದೇಶಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಬುಧವಾರದಂದು ಆಗಮಿಸಿ ಸರಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಜನರ ಆರೋಗ್ಯದ ಬಗ್ಗೆ ಮಾಹಿತಿ ಕೇಳಿದರು.ವೈದ್ಯರ ಸಮಸ್ಯೆಗಳ ಬಗ್ಗೆ ವಿಚಾರಿಸಿದರು.

ಹೀಗೆ ಸಾಗುವ ವೇಳೆ ಕುಕ್ಕೆ ಸುಬ್ರಹ್ಮಣ್ಯಕ್ಕೂ ಭೇಟಿ ನೀಡಿದರು. ಚಿಕೂನ್ ಗುನ್ಯಾ ಮಾರಿ ಹೋಗಲೆಂದು ದೇವರ ಮೊರೆ ಹೋದರೋ ಗೊತ್ತಿಲ್ಲ. ಮಾಧ್ಯಮದವರೊಂದಿಗೆ ಮಾತನಾಡುತ್ತಾ ಅನೇಕ ಕಾರ್ಯಗಳ ಬಗ್ಗೆ ತಿಳಿಸಿದರು.

ಚಿಕೂನ್ ಗುನ್ಯಾದ ಬಗ್ಗೆ ಸರಕಾರವು ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಿದೆ ಎಂದರು.ಆರೋಗ್ಯ ಅಧಿಕಾರಿಗಳು ಮಾತ್ರಾ ಸಚಿವರ ದಾರಿ ತಪ್ಪಿಸಿದ್ದು ಇಲ್ಲಿ ಕಂಡುಬಂದಿತ್ತು.ಜಿಲ್ಲೆಯಲ್ಲಿ ಒಟ್ಟಾರೆಯಾಗಿ 9800 ಮಂದಿಗೆ ಮಾತ್ರಾ ಚಿಕೂನ್ ಗುನ್ಯಾ ಬಂದಿದೆ , ಯಾರೂ ಕೂಡಾ ಅದರಿಂದಾಗಿ ಸತ್ತಿಲ್ಲ ಎಂದು ಹೇಳಿ ವರದಿ ಒಪ್ಪಿಸಿತ್ತು. ಮಾಧ್ಯಮದ ಮಂದಿ ಮತ್ತೆ ಮತ್ತೆ ಕೇಳಿದಾಗಲೂ ಸಚಿವರು ಹೇಳಿದ್ದು ಅದನ್ನೆ.

ಹೀಗೆ ಅಲ್ಲಲ್ಲಿ ಆಸ್ಪತ್ರೆಗೆ ಬೇಟಿ ನೀಡುತ್ತಿರುವ ವೇಳೆ ಸುಬ್ರಹ್ಮಣ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತೂಕದ ಯಂತ್ರವನ್ನು ಕಂಡಾಗ ಸಚಿವರಿಗೆ ಏನು ಮನಸಾಯಿತೋ ತಮ್ಮ ತೂಕವನ್ನು ನೋಡಿಕೊಂಡರು. ಸಚುವರು ತೂಗಿದ್ದು 68 ಕೆ.ಜಿ. ಅವರ ಪ್ರಕಾರ ಅದು ಕಡಿಮೆಯಾಗಿತ್ತಂತೆ....

ಹೀಗೆ ಸಚಿವರ ಪ್ರಯಾಣದಲ್ಲಿ ಒಂದಷ್ಟು ಮಜವೂ ಇತ್ತಂತೆ ಹಾಗೆಂದು ಅಧಿಕಾರಿಯೊಬ್ಬರು ಪಿಸುಗುಟ್ಟುತ್ತಿದ್ದರೆ, ಪೊಲೀಸರಿಗೆ ದಾರಿ ತಪ್ಪಿತ್ತು.ಸಚಿವರು ಒಮ್ಮೆ ಒಂದು ದಾರಿ ಹೇಳಿದರೆ ಇನ್ನೊಮ್ಮೆ ಬೇರೆ ದಾರಿಯ ಮೂಲಕ ಹೋಗಲು ಹೇಳುತ್ತಿದ್ದರು. ಸಚಿವರಿಗೆ ದಾರಿ ಹೇಳುವವರು ಶಾಸಕರು...!

ಕಾಮೆಂಟ್‌ಗಳಿಲ್ಲ: