22 ಅಕ್ಟೋಬರ್ 2008

ಮೌನದಿಂದ ....

ಇಂದು ಭಾರತ ಹೆಮ್ಮೆ ಪಡುವ ದಿನ.ನಮ್ಮ ವಿಜ್ಞಾನಿಗಳು ಚಂದ್ರನಂಗಳಕ್ಕೆ ಉಪಗ್ರಹದ ಮೂಲಕ ಇಳಿದಿದ್ದಾರೆ. ಮುಂದೆ ಮಾನವ ಸಹಿತವಾಗಿ ಇಳಿಯಲಿದ್ದಾರೆ. ಬೆಳಗ್ಗೆ 6.20 ಕ್ಕೆ ಬಹುತೇಕ ಮಂದಿ ಟಿ.ವಿ ಪರದೆಯ ಮೇಲೆ ಕಾತರದಿಂದ ನೋಡುತ್ತಿದ್ದರು.ಆಗಸಕ್ಕೆ ಉಪಗ್ರಹವು ಚಿಮ್ಮುತ್ತಿದ್ದಂತೆ ಮೇರಾ ಭಾರತ್ ಮಹಾನ್ ಎನ್ನುವ ಒಳಭಾವವು ಹೆಚ್ಚಿತ್ತು.

ನಮ್ಮ ವಿಜ್ಞಾನಿಗಳ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ಬಂದಿದೆ.
....................................................................................

ಮೌನಿಯಾದೆ...

ಹಾಗೇ ನನಗೆ ಯಾಕೋ ಮೌನಿಯಾಗಬೇಕು ಎನಿಸಿತು. ನನ್ನ ಪ್ರಕಾರ ಮೌನಿಯಾದಾಗ ಇನ್ನಷ್ಟು ಸಂಗ್ರಹ ಸಾಧ್ಯ. ಅಲ್ಲದೆ ಇಂದಿನ ಕಾಲೆಳೆಯುವ ಕಾಲದಲ್ಲಿ, ಅದೇ ಹೆಚ್ಚು ಸೂಕ್ತ. ಒಂದು ಸಂದರ್ಭದಲ್ಲಿ ಅಹಂ,ಮದ,ಮತ್ಸರಾದಿಗಳ ಬಗ್ಗೆ ನನಗದಾಗದು ,ಅದು ನನ್ನ ಬಳಿ ಸುಳಿಯುವುದೂ ಬೇಡ ಅಂತ ಅಂದುಕೊಂಡಿದ್ದೆ. ಅದು ನನ್ನ ಮಟ್ಟಿಗೆ ಯಶಸ್ವಿಯಾಗಿತ್ತು. ಒಂದೊಂದು ಸಂದರ್ಭವನ್ನು ಬಿಟ್ಟೂ. ಆದರೆ ನನಗೆ ಈಗ ಅನಿಸುತ್ತದೆ ಅಂತಹದಿಲ್ಲದ ಜೀವವೊಂದಿದೆಯಾ?. ಒಬ್ಬ ವ್ಯಕ್ತಿ ಕೊಂಚ ಮೇಲೆರಿದ ಅಥವಾ ಸ್ವಲ್ಪ ಹೆಚ್ಚು ಪರಿಣಿತನಾದ ಅಂದಾಕ್ಷಣ ಏನೆಲ್ಲಾ ಮಾಡುತ್ತಾರೆ ಆತನನ್ನು ಕೆಳಗಿಳಿಸಲು. ಏಡಿಗಳ ಸಾಲಿಗೆ ಈ ಮನುಷ್ಯ ಸೇರುತ್ತಾನಲ್ಲಾ. ಮತ್ಸರ ಅವನಲ್ಲಿ ತಾಂಡವವಾಡುತ್ತವಲ್ಲಾ?. ಹಾಗಾಗಿ ನನಗನಿಸಿದ್ದು ಇದೆಲ್ಲವೂ ಜಗದ ನಿಯಮ....

ಈಗ ನಾನು ಮೌನಿಯಾಗಿದ್ದೇನೆ. ಇದು ವಿಷಾದವಲ್ಲ ಹೊಸ ನೋಟ... ಭಾವನೆಗಳನ್ನು ಹಂಚಿಕೊಳ್ಳುತ್ತಾ ಮುಂದೆ ಸಾಗುವ..... ಹೊಸಲೋಕವ ಸೃಷ್ಟಿಸಲಾಗುತ್ತಾ ನೋಡೋಣ.....

2 ಕಾಮೆಂಟ್‌ಗಳು:

ಸಂದೀಪ್ ಕಾಮತ್ ಹೇಳಿದರು...

ಬದುಕಿನಲ್ಲಿ ಕೆಟ್ಟದು ಅಂತ ಒಂದಿದ್ರೇನೆ ಒಳ್ಳೆಯದು ಏನು ಅಂತ ಗೊತ್ತಾಗೋದು.
ಕತ್ತಲೆ ಅನ್ನೋದು ಇಲ್ಲದೇ ಇದ್ದಿದ್ರೆ ಬೆಳಕಿನ ಮಹತ್ವವೇ ಗೊತ್ತಿರ್ತಿರ್ಲಿಲ್ಲ ನಮಗೆ ಅಲ್ವ?

ಎಲ್ಲವ್ರೂ ಒಳ್ಳೆಯವರಿದ್ರೆ ಏನಾಗ್ತಾ ಇತ್ತು ಗೊತ್ತಾ?? BMTC ಬಸ್ ಹತ್ತೋಕೆ ಹೋಗ್ತೀರಾ ಅಂದುಕೊಳ್ಳಿ. ಮತ್ತೊಬ್ಬ ಪ್ರಯಾಣಿಕ ’ಸಾರ್ ನೀವು ಮೊದಲು ಹೋಗಿ’ ಅಂತಾನೆ ಅದಿಕ್ಕೆ ನೀವು ’ಇಲ್ಲ ದಯವಿಟ್ಟು ನೀವು ಮೊದಲು ಹೋಗಿ ’ ಅಂತೀರ ನೀವು ನೀವು ಅಂತಾನೆ ಇರ್ತೀರ ನೀವುಗಳು ಬಸ್ ಝುಂಯ್ ಅಂತ ಹೋಗೇ ಬಿಡುತ್ತೆ!!!
ಅದಕ್ಕಿಂತ ಅವರಿರವರನ್ನು ತಳ್ಳಿ ಬಸ್ ಒಳಗೆ ನುಗ್ಗಿ ಸೀಟ್ ಹಿಡಿಯೋದರ ಮಜಾ ನೇ ಬೇರೆ!!!!
.
.
.
.
.
ಸುಮ್ನೆ ತಮಷೆಗಂದೆ ಸ್ಯಾಡಿಸ್ಟ್ ಅಂದುಕೋಬೇಡಿ ನನ್ನ:)

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಹೌದು ಅದೂ ನಿಜಾನೇ ಅನ್ನಿ. ಅದು ಜಗದ ನಿಯಮ ಹಾಗೆಂದೂ ನಾವು ಸುಮ್ಮನಾಗುವುದು ಒಳ್ಳೆಯದಲ್ವಾ?. ಜೊತೆ ಜೊತೆಯಾಗಿ ಸಾಗುವುದು ಉತ್ತಮವಲ್ಲಾ...

ಉತ್ತಮ ಕಮೆಂಟಿಗಾಗಿ ಥ್ಯಾಂಕ್ಯೂ....