02 ಅಕ್ಟೋಬರ್ 2010

"ಚೊಕ್ಕ"ಡಿಗೆ ಕೊಡುಗೆ . .

ಕೆಲವು ಸಂಘಟನೆಗಳಿವೆ ಪ್ರಚಾರವಿಲ್ಲದೆ ಕಾಯ್ರಕ್ರಮವೇ ಇಲ್ಲ. ಆ ನಂತ್ರ ಆ ಯೋಜನೆ ಬಿದ್ದು ಹೋದ್ರೂ ಪರವಾಗಿಲ್ಲ. ಅಂತೂ ಪ್ರಚಾರ ಬೇಕು. ಅಲ್ಲಿಗೆ ಕೊಡುಗೆ , ಇಲ್ಲಿಗೆ ಕೊಡುಗೆ , ಅಲ್ಲಿ ಶಾಲೆ ,ಇಲ್ಲಿ ಗೋಶಾಲೆ ಹೀಗೇ. . ಅದಕ್ಕೆಲ್ಲಾ ಪ್ರಚಾರ ಬೇಕು. ಆದ್ರೆ ಪ್ರಚಾರ ಆದ ಮೇಲೆ ಏನು ಕತೆ? ಗೊತ್ತಿಲ್ಲ. ಆದರೆ ಅಂತಹದ್ದರಲ್ಲಿ ಇವತ್ತು ನನ್ನ ಸಂಬಂಧಿಕರೊಬ್ಬರು ಒಂದು ಕಾರ್ಯಕ್ರಮವಿದೆ ನೀನು ಬಾ ಅಂದಿದ್ದರು. ಸುಮ್ಮನೆ ಹೋಗಿದ್ದೆ. .ಹೋಗಿ ನೋಡಿದಾಗ ಅಲ್ಲಿ ಒಂದಷ್ಟು ಜನ ಇದ್ರು. ಆ ಬಳಿಕ ಮಾತನಾಡಿದಾಗ ವಿಚಾರ ತಿಳೀತು.ಇಲ್ಲಿ ಯಾವೊಬ್ಬ ಮೀಡಿಯಾದವರಿಗೂ ಹೇಳಿರಲಿಲ್ಲ. ಅದರ ಪಾಠ ಇಲ್ಲಿದೆ.

* * * * * * * * * * * * * * * * * * * * * * *



ರಾಜ್ಯದ ವಿವಿದ ಕಡೆ ಗಾಂಧಿ ಜಯಂತಿ ಕಾರ್ಯಕ್ರಮ ನಡೆಯುತ್ತಿರಬೇಕಾದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹಳ್ಳಿ ಪ್ರದೇಶದ ಚೊಕ್ಕಾಡಿಯ ಕಾಲನಿಯೊಂದರಲ್ಲಿ ತೀರಾ ಭಿನ್ನವಾಗಿ ಗಾಂಧಿಜಯಂತಿ ನಡೆಯುತ್ತಿತ್ತು.ಆದರೆ ಇದಕ್ಕೆ ಅಂತಹದ್ದನೂ ಪ್ರಚಾರವಿರಲೇ ಇಲ್ಲ. ಅದು ಬಿಡಿ, ಆಮಂತ್ರಣ ಪತ್ರಿಕೆಯೂ ಮುದ್ರಣಗೊಂಡಿರಲಿಲ್ಲ.ಅಲ್ಲಿದ್ದವರೇ ಉದ್ಘಾಟಕರು , ಅಲ್ಲಿಗೆ ಬಂದವರೇ ಗೆಸ್ಟ್‌ಗಳು. ಆ ಕಾಲನಿ ಜನರೇ ಸಭಿಕರು.ಅದೇನು ಅಂತಹ ವಿಶಿಷ್ಠ ಕಾರ್ಯಕ್ರಮ?. ಬೇರೇನೂ ಅಲ್ಲ ಕಾಲನಿಗೆ ಉಚಿತವಾಗಿ ಶೌಚಾಲಯದ ವಿತರಣೆ.






ಅದು ಚೊಕ್ಕಾಡಿಯ ಅಕ್ಕೋಜಿಪಾಲ್ ಕಾಲನಿ.ಅಲ್ಲಿ 22 ಮನೆಗಳಿವೆ.ಇದುವರೆಗೆ ಈ ಇಡೀ ಕಾಲನಿಗೆ ಎರಡೇ ಎರಡು ಶೌಚಾಲಯ ಇತ್ತು.ಈಗ ಎಲ್ಲಾ ಮನೆಗಳಿಗೆ ಒಂದೊಂದು ಶೌಚಾಲಯ ಒದಗಿದೆ.ಇದಕ್ಕೆ ಕಾರಣವಾದ್ದು ಕರ್ನಾಟಕದ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು.ಈ ಎಲ್ಲಾ ಶೌಚಾಲಯಗಳನ್ನು ಗಾಂಧಿಜಯಂತಿಯಂದು ಕಾಲನಿ ಜನರಿಗೆ ಹಸ್ತಾಂತರಿಸಿದರು.


ಕರ್ನಾಟಕದ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ವತಿಯಿಂದ ಸತ್ಯಸಾಯಿಬಾಬಾ ಅವರ ೮೮ ನೇ ಹುಟ್ಟುಹಬ್ಬದ ಪ್ರಯುಕ್ತ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಸಾಯಿಬಾಬಾ ಅವರ ೮೮ ನೇ ಹುಟ್ಟುಹಬ್ಬದ ಅಂಗವಾಗಿ ಗ್ರಾಮೀಣ ನೈರ್ಮಲ್ಯ ಯೋಜನೆಗಾಗಿ ಸತ್ಯಸಾಯಿ ಸೇವಾ ಸಮಿತಿಯು ರಾಜ್ಯದಲ್ಲಿ ೧೦೮ ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದು ಅವುಗಳ ಪೈಕಿ ಚೊಕ್ಕಾಡಿಯಲ್ಲಿ ಪ್ರಥಮವಾಗಿ ಸತ್ಯಸಾಯಿ ಗ್ರಾಮೀಣ ಸಮಗ್ರತಾ ಯೋಜನೆಯಡಿಯಲ್ಲಿ ೨೨ ಶೌಚಾಲಯಗಳನ್ನು ಸುಮಾರು 2 ಲಕ್ಷ ಸಾವಿರ ರುಪಾಯಿ ವೆಚ್ಚದಲ್ಲಿ ನಿರ್ಮಿಸಿತ್ತು. ಈ ಯೋಜನೆಗೆ ರಾಜ್ಯದ ಸತ್ಯಸಾಯಿ ಸೇವಾ ಟ್ರಸ್ಟ್ 1.5 ಲಕ್ಷ ರುಪಾಯಿ ನೀಡಿದ್ದು ಜಿಲ್ಲಾ ಹಾಗೂ ಚೊಕ್ಕಾಡಿಯ ಸತ್ಯಸಾಯಿ ಭಕ್ತರು ಉಳಿದ ವೆಚ್ಚವನ್ನು ಭರಿಸಿ ಅಕ್ಕೋಜಿ ಪಾಲ್ ಕಾಲನಿಯಲ್ಲಿ ಶೌಚಾಲಯವನ್ನು ನಿರ್ಮಿಸಿದ್ದಾರೆ.ಒಂದು ಶೌಚಾಲಯಕ್ಕೆ ೯ ಸಾವಿರ ರುಪಾಯಿ ವೆಚ್ಚ ತಗಲಿದ್ದು ಇದಕ್ಕೆ ಬಳಸಿದ ಉತ್ಪನ್ನಗಳೆಲ್ಲವೂ ಪರಿಸರ ಸ್ನೇಹಿಯಾಗಿದೆ. ಈ ಯೋಜನೆಯು ಮುಂದೆ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆಯಾಗಲಿದೆ. ಈಗಾಗಲೇ ಈ ಸೇವಾ ಸಂಸ್ಥೆಯು ಕುಡಿಯುವ ನೀರಿನ ಯೋಜನೆ , ವಸತಿ ಸೇರಿದಂತೆ ಇನ್ನಿತರ ಯೋಜನೆಗಳನ್ನು ಹಮ್ಮಿಕೊಂಡಿದೆ. ದೇಶದಾದ್ಯಂತ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.


ಸುಳ್ಯದ ಚೊಕ್ಕಾಡಿಯ ಅಕ್ಕೋಜಿ ಪಾಲ್ ಕಾಲನಿಯಲ್ಲಿ ಇದುವರೆಗೆ ಶೌಚಾಲಯದ ವ್ಯವಸ್ಥೆ ಇಲ್ದದೆ ಮಹಿಳೆಯರು ಹಾಗೂ ಮಕ್ಕಳು ತೀರಾ ತೊಂದರೆ ಪಡುತ್ತಿದ್ದರು. ಸ್ಥಳೀಯ ಪಂಚಾಯತ್ ವತಿಯಿಂದಲೂ ಯಾವುದೇ ವ್ಯವಸ್ಥೆ ಆಗಿರಲಿಲ್ಲ.ಈಗ ಸತ್ಯಸಾಯಿ ಸೇವಾ ಸಂಸ್ಥೆಯು ತನ್ನ ಯೋಜನೆಯ ಮೂಲಕ ಶೌಚಾಲಯ ಹಸ್ತಾಂತರಿಸಿದ್ದು ಕಾಲನಿ ಜನರಿಗೆ ಖುಷಿ ನೀಡಿದೆ.ಮುಂದೆ ಈ ಶೌಚಾಲಯವನ್ನು ಚೆನ್ನಾಗಿ ನಿರ್ವಹಣೆ ಮಾಡುವುದಾಗಿ ಅವರು ಹೇಳುತ್ತಾರೆ.

ಸರಕಾರ ವಿವಿದ ಯೋಜನೆಗಳನ್ನು ಹಮ್ಮಿಕೊಂಡರೂ ಅದು ಜಾರಿಹಂತದಲ್ಲಿ ಅನೇಕ ಬಾರಿ ಎಡವಿಕೊಳ್ಳುತ್ತದೆ.ಆದರೆ ಇಂತಹ ಸ್ವಯಂಸೇವಾ ಸಂಸ್ಥೆಗಳು ಹಾಕಿಕೊಳ್ಳುವ ಯೋಜನೆಗಳು ಅತ್ಯಂತ ಪರಿಣಾಮಜಕಾರಿಯಾಗಿ ಯಶಸ್ವಿತಾಗಿ ಜಾರಿಗೊಳ್ಳುತ್ತವೆ ಮತ್ತು ಬಡಜನರನ್ನು ತಲಪುವುದರಲ್ಲಿ ಸಂದೇಹವೇ ಇಲ್ಲ.ಹೀಗಾಗಿ ಸರಕಾರದ ಯೋಜನೆಗಳನ್ನು ಇಂತಹ ಸಂಸ್ಥೆಗಳ ಮೂಲಕ ಜಾರಿ ಮಾಡುವಲ್ಲಿ ಚಿಂತಿಸಿದರೆ ಉತ್ತಮವಲ್ಲವೇ?. ಸತ್ಯಸಾಯಿ ಸೇವಾ ಸಂಸ್ಥೆಗಳು ,ವಿದ್ಯಾಸಂಸ್ಥೆ, ಆಧ್ಯಾತ್ಮಿಕ ಹಾಗೂ ಇನ್ನಿತರ ಸೇವೆಗಳ ಮೂಲಕ ಈಗಾಗಲೇ ಅನೇಕ ಬಡಜನರನ್ನು ತಲಪಿದೆ.ಈಗ ಮೂಲಭೂತ ವ್ಯವಸ್ಥೆಗಳ ಮೂಲಕವೂ ಜನರನ್ನು ತಲಪುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲವೇ . .?.