16 ಜುಲೈ 2010

ಜಲಪಾತವಿದೆ , . . ಬನ್ನಿ . . .



ನಮ್ಮೂರಲ್ಲೊಂದು ಚಂದದ ಜಲಪಾತವಿದೆ. ನೋಡುತ್ತಾ ನಿಂತರೆ ಮನಸ್ಸು ತಣಿಯುತ್ತದೆ. ಒಂದೇ ಕಡೆ ಎರಡು ಜಲಪಾತ ಧುಮುಕುತ್ತದೆ. ಇದುವರೆಗೆ ದೊಡ್ಡ ಪ್ರಚಾರ ಈ ಜಲಪಾತಕ್ಕೆ ಸಿಕ್ಕಿಲ್ಲ. ಈ ಫಾಲ್ಸ್ ಗೆ ಹೆಸರಿಲ್ಲ. ಹಾಗಾಗಿ ನಾವೇ ಇದನ್ನು ಕಲ್ಲಾಜೆ ಜಲಪಾತ ಅಂತ ಕರೀತಾ ಇದೀವಿ. ಜೂನ್ ನಿಂದ ಸುಮಾರು ನವೆಂವರ್ ವರೆಗೆ ಈ ಜಲಪಾತದಲ್ಲಿ ನೀರು ಇರುತ್ತದೆ.

- ಇಲ್ಲಿಗೆ ಹೋಗಬೇಕೆಂದರೆ , ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಅಲ್ಲಿಂದ ಸುಳ್ಯ ಮಾರ್ಗವಾಗಿ ಸುಮಾರು 12 ಕಿಲೋ ಮೀಟರ್ ಬಂದಾಗ ನಡುಗಲ್ಲು ಎಂಬೊಂದು ಊರು ಸಿಗುತ್ತದೆ. ಅಲ್ಲಿಂದ ತಿರುಗಿ ಕಲ್ಲಾಜೆ ಎಂಬ ಹಳ್ಳಿಗೆ ಸುಮಾರು 2 ಕಿಲೋ ಮೀಟರ್ ಮಡ್ ರೋಡ್ನಲ್ಲಿ ಹೋಗಬೇಕು.ಮತ್ತೆ ಸ್ವಲ್ಪ ಕಾಲ್ನಡಿಗೆ. ಹಾಗೆ ಈ ಊರಲ್ಲಿ ಕಲ್ಲಾಜೆ ಜಲಪಾತ ಎಲ್ಲಿ ಅಂದ್ರೆ ಯಾರೂ ಬೇಕಾದ್ರೂ ಹೇಳ್ತಾರೆ. ಆದ್ರೆ ಒಂದು ಎಚ್ಚರ ಇಲ್ಲಿ ತಿನ್ನೋದಕ್ಕೆ ಏನಾದ್ರೂ ನೀವು ತರ್ಲೇ ಬೇಕು. ಯಾಕಂದ್ರೆ ಇಲ್ಲಿ ಏನೂ ಸಿಗೋದೇ ಇಲ್ಲ. ಎಲ್ಲಾ ರೆಡಿಯಾಗಿ ಬನ್ನಿ. . . .

3 ಕಾಮೆಂಟ್‌ಗಳು:

ರಾಜೇಶ್ ನಾಯ್ಕ ಹೇಳಿದರು...

ಧನ್ಯವಾದ ದಾರಿ ತಿಳಿಸಿದ್ದಕ್ಕೆ. ಒಂದೆರದು ವಾರಗಳ ಮೊದಲು ತಾವು ಈ ಜಲಧಾರೆಯ ಚಿತ್ರವನ್ನು ತಮ್ಮ ಬ್ಲಾಗಿನಲ್ಲಿ ಹಾಕಿದಾಗ ಸೇವ್ ಮಾಡಿಟ್ಟುಕೊಂಡಿದ್ದೆ, ನಂತರ ನಿಮ್ಮಲ್ಲಿ ಕೇಳಿದರಾಯಿತೆಂದು. ಈಗ ನೀವಾಗಿಯೇ ತಿಳಿಸಿದಿರಿ. ತುಂಬಾ ಧನ್ಯವಾದ. ಸುಮಾರು ಎಷ್ಟು ಅಡಿ ಎತ್ತರವಿರಬಹುದು?

shivu.k ಹೇಳಿದರು...

ದಾರಿ ತೋರಿಸಿದ್ದಕ್ಕೆ ಥ್ಯಾಂಕ್ಸ್...

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಈ ಜಲಪಾತ ಸುಮಾರು 70 ರಿಂದ 80 ಅಡಿ ಎತ್ತರ ಇರಬಹುದು. ಇನ್ನೊಂದು ಖುಷಿ ಎಂದರೆ ಕಾನನದ ಒಳಗಡೆ ಸುಪ್ತವಾಗಿದೆ ಈ ಝರಿ. ಹಾಗಾಗಿ ಪ್ರಕೃತಿಯ ಒಳಗಡೆ ಇರೋ ಈ ಫಾಲ್ಸ್ ನೋಡೋದೇ ಒಂದು ಥ್ರಿಲ್. .