29 ಆಗಸ್ಟ್ 2009

ಒಂದು ಘಟನೆಯ ಹಿಂದೆ. . . .

ನಿಜಕ್ಕೂ ಈ ಘಟನೆ ನನ್ನನ್ನು ಒಂದು ಕ್ಷಣ ವಿಚಲಿತನಾಗುವಂತೆ ಮಾಡಿತ್ತು.ಮತ್ತು ಹತ್ತಾರು ಅನುಭವಕ್ಕೆ ಕಾರಣವಾಯಿತು. ಅಷ್ಟಕ್ಕೂ ಈ ಘಟನೆ ಒಂದರ್ಥದಲ್ಲಿ ಕ್ಷುಲ್ಲಕ. ಆದರೆ ಅಲ್ಲಿಯ ವರ್ತನೆ ಮಾತ್ರಾ ಹಾಗೆ ಹೇಳಲು ಸಾಧ್ಯವರಲಿಲ್ಲ. ಯಾಕೆಂದರೆ ಆತ ಒಬ್ಬ ಸೆಕ್ಯುರಿಟಿ ಗಾರ್ಡ್. ಆತನ ಕೆಲಸ ನಿಜಕ್ಕೂ ಸೆಕ್ಯರಿಟಿಯೇ. ಆದರೆ ಎಲ್ಲಿ ಎಚ್ಚರ ವಹಿಸಬೇಕಾಗಿತ್ತೋ ಅಲ್ಲಿ ವಹಿಸಿಲ್ಲ.ಮತ್ತ ಹೇಗೆ ಆತ ನಡೆದುಕೊಳ್ಳಬೇಕಿತ್ತೋ ಹಾಗೆ ಆತ ನಡೆದುಕೊಳ್ಳಲಿಲ್ಲ.

ಇಂದು ನಮ್ಮ ರಾಜ್ಯದ ಅತ್ಯಂತ ಶ್ರೀಮಂತ ಹಾಗೂ ಪ್ರಸಿದ್ದ ದೇವಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷವಾದ ಪೂಜಾ ಕಾರ್ಯಕ್ರಮವಿತ್ತು.ಬಹುಶ: ಇಂತಹ ಕಾರ್ಯಕ್ರಮ ಇತರ ಯಾವ ದೇವಸ್ಥಾನದಲ್ಲೂ ನಡೆಯುವುದಿಲ್ಲ.ಹಾಗಾಗಿ ಈ ಬಗ್ಗೆ ಸಾರ್ವಜನಿಕರ ಮಾಹಿತಿ ಮತ್ತು ಅವರ ಕರೆಯ ಮೇರೆಗೆ ಆಸಕ್ತಿಯಿಂದ ವಿಶೇಷವಾದ ವರದಿಯನ್ನು ತಯಾರಿಸುದಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬೆಳಗ್ಗೆ 7.30 ರ ಸುಮಾರಿಗೆ ಹೋಗಿದ್ದೆ ಅವಾಗಿನಿಂದಲೇ ದೇವಸ್ಥಾನದ ಹೊರ ಆವರಣದಲ್ಲಿ ಅಗತ್ಯ ಚಿತ್ರಗಳ್ನು ದಾಖಲಿಸುತ್ತಲಿದ್ದೆ.ಹಾಗೇ ಸುಮಾರು 9.30 - 10 ರ ಸುಮಾರಿಗೆ ಅಲ್ಲೇ ಹೊರ ಆವರಣಕ್ಕೆ ಬಂದಂತಹ ಒಬ್ಬ ಸೆಕ್ಯುರಿಟಿ ಗಾರ್ಡ್ ಪ್ರಶ್ನಿಸಿದ್ದೇ ಹೀಗೆ ... ನೀವ್ಯಾರು...? ನೀವ್ಯಾಕೆ ... ಫೋಟೋ ತೆಗೀತೀರಿ...?? ನಿಮ್ಗೆ ಪರ್ಮಿಶನ್ ಕೊಟ್ಟೋರ್‍ಯಾರು...?? ಹಾಗೆಲ್ಲ ಇಲ್ಲಿ ಆಗಲ್ಲ... ಎಂದು ಹೇಳುತ್ತಾ ದರ್ಪದಿಂದ ಬಂದ ... ನಾನು ಎಲ್ಲದಕ್ಕೂ ಒಂದೇ ಉತ್ತರ ಕೊಟ್ಟೆ ನಾನು ಪರ್ಮೀಶನ್ ತೆಗೆದೇ ಚಿತ್ರೀಕರಣ ಮಾಡುತ್ತಿದ್ದೇನೆ... ಅಷ್ಟಕ್ಕೂ 15 ವರ್ಷಗಳಿಂದ ಕುಕ್ಕೆಗೆ ಆಗಮಿಸುತ್ತಿದ್ದೇನೆ.. ದೇವಳದ ಹೊರಾಂಗಣದಲ್ಲಿ ಯಾರು ಬೇಕಾದ್ರೂ ಫೋಟೋ ತೆಗೀ ಬಹುದಲ್ಲಾ ಎಂದು ಹೇಳಿದೆ ಮಾತ್ರವಲ್ಲ ಇಲ್ಲೂ ತೆಗೀಬಾರ್‍ದು ಅಂತಾದ್ರೆ ಇಲ್ಲೊಂದು ಬೋರ್ಡ್ ಹಾಕ್ಬೇಕು ಎಂದೆ... ಆತ ಅಷ್ಟರಲ್ಲಿ ನನ್ನ ಕ್ಯಾಮಾರಾ ಕಸಿದುಕೊಂಡ... ನಂತರ ನಾನು ಮಾಧ್ಯಮದ ಪ್ರತಿನಿಧಿ ಅಂತ ಆತನಿಗೂ ತಿಳೀತು ಕ್ಯಾಮಾರ ಕೊಟ್ಟ.... ಆ ಬಳಿಕ ನಾನು ಆತ ಕ್ಯಾಮಾರ ಕಸಿದುಕೊಂಡ ಬಗ್ಗೆ ಏನು ಮಾಡಬೇಕೋ ಅದನ್ನು ಮಾಡಿದೆ.

ನೋಡಿ ಆತ ಕೆಲಸ ಮಾಡುವುದು ದೇವಸ್ಥಾನದಲ್ಲಿ ಆತನೇ ಪೊಲೀಸರ ಮುಂದೆ ಒದರಿದ್ದು ಸುಳ್ಳುಗಳ ಕಂತೆ.... ಆತನ ವಿರುದ್ದ ನಾನೇ ರ್‍ಯಾಶ್ ಆದೆನಂತೆ... ಆತನ ಮೈಮೇಲೆ ಕೈಮಾಡಿದೆನಂತೆ... ನಾನು ದೇವಳದ ಒಳಾಂಗಣಕ್ಕೆ ನುಗ್ಗಲು ಯತ್ನಿಸಿದೆನಂತೆ..... ಕಳೆದ ಒಂದೂವರೆ ವರ್ಷಗಳಿಂದ ಅಲ್ಲಿ ಕೆಲಸ ಮಾಡುವ ಆತನಿಗೆ ನನ್ನ ಪರಿಚಯವೇ ಇಲ್ಲವಂತೆ... ಹೀಗೆ ಹೇಳುತ ಸಾಗಿದ... ಆದರೆ ನನ್ನ ಆತ್ಮಸಾಕ್ಷಿ ಹೇಳಿದ್ದೇನೆಂದರೆ ಇಂದು ಸತ್ಯಕ್ಕೆ ಬೆಲೆ ಇಲ್ಲದ ... ನಮ್ಮ ಮೌನಕ್ಕೆ ಬೆಲೆ ಇಲ್ಲದ ಇದನ್ನೇ ದೌರ್ಬಲ್ಯ ಎಂದು ತಿಳಿಯುವ ಈ ಸಮಾಜದಲ್ಲಿ ಇದನ್ನೆಲ್ಲಾ ಸಮರ್ಥಿಸ ಹೊರಟರೆ ಹೇಗೆ..? ನಮ್ಮ ಆಯಸ್ಸಿನ ಬಹುಪಾಲು ಇಲ್ಲೇ ಕಳೆದುಹೋಗಬಹುದು. ಅದೂ ಯಾವನೋ ಒಬ್ಬ ದೇವರ ಹಣವನ್ನು ರಕ್ಷಣೆಯ ಹೆಸರಿನಲ್ಲಿ ಹೊಟ್ಟೆಯುರೆಯಲು ಉಪಯೋಗಿಸಿಕೊಳ್ಳುತ್ತಿರುವವನ ಜೊತೆ ಕಾಲಹರಣ ಮಾಡಿದರೆ ಹೇಗೆ ಆಂತ ಅನಿಸಿತು. ಇಂತಹ ಕ್ಷೇತ್ರಕ್ಕೆ ಹೆಚ್ಚು ಪ್ರಚಾರವನ್ನು ನೀಡಿ ಇನ್ನಷ್ಟು ಜನ ಇಲ್ಲಿಗೆ ಬರುವಂತಾಗಿ ಹೊಟ್ಟೆ ಹೊರೆಯುವ ಮಂದಿ ಅಮಾಯಕ ಭಕ್ತರನು ವಂಚಿಸಿ ಅವರಿಗೂ ದರ್ಪ ತೋರಿ ತಮ್ಮ ಪೌರುಷವನ್ನು ತೋರುವಂತೆ ಮಾಡುತ್ತೇವಲ್ಲಾ ನಿಜಕ್ಕೂ ನಾವು ಮೂರ್ಖರು ಅಂತ ನನಗೆ ಅನ್ನಿಸಿದ್ದು ಸತ್ಯ. ದೇವರ ಮುಂದೆ ನಾವೆಲ್ಲಾ ಸಣ್ಣವರು ಅಂತ ಹಿರಿಯರು ಹೇಳಿದ್ದನು ನಾವು ಕೇಳಿದರೆ ಇವರಿಗೆಲ್ಲಾ ದೇವರಿಗಿಂತ ನಾವೇ ದೊಡ್ಡವರು ಎಂಬುದನ್ನು ಕಲಿಯಬೇಕಾಗಿದೆ. ಹಾಗಾಗಿ ದೇವರು ಸರ್ವಾಂತರ್ಯಾಮಿ ಅಂತಲೂ ನಮಗೆ ಹಿರಿಯರು ಹೇಳಿದ್ದಾರಲ್ಲಾ ನಿಜಕ್ಕೂ ಇಂದು ಇದುವೇ ಸತ್ಯ.ಇಂದಿಗೆ ಇದುವೇ ಉತ್ತಮ.

ಕುಕ್ಕೆಯಲ್ಲಿ ನಿಜ್ಕಕೂ ಸೆಕ್ಯರಿಟಿ ಗಾರ್ಡ್‌ಗಳು ಬೇಕಾ ಬೇಡವಾ ಅಂತ ಯೋಚಿಸುವುದು ಇಂದಿನ ಅನಿವಾರ್ಯತೆ. ನಿಜಕ್ಕೂ ಅಲ್ಲಿ ಆ ಬಗ್ಗೆ ಜನ ಮಾತನಾಡುತ್ತಿದ್ದರು, ಅಲ್ಲಿ ಅಮಾಯಕ ಭಕ್ತರನ್ನು ಗದರಿಸುವುದಕ್ಕೆ ಮಾತ್ರಾ ಈ ಸೆಕ್ಯರಿಟಿ ಗಾರ್ಡ್‌ಗಳನ್ನು ನೇಮಕ ಮಾಡಿದಂತಾಗಿದೆ... ಭದ್ರತೆ ಹೆಸರಿಗೆ ಮಾತ್ರಾ ಎಂಬ ಮಾತು ಇಲ್ಲಿ ಕೇಳುತ್ತಿತ್ತು...

ಅದಿರಲಿ ದೇವಸ್ಥಾನಗಳೆಲ್ಲವೂ ಹೀಗೆಯಾ...?? ಅಲ್ಲಿ ದೇವರ ಹೆಸರಿನಲ್ಲಿ ದೇವರಾಗುವವರೇ ಹೆಚ್ಚಾ ಅಲ್ಲ ಭೂತಗಳಾಗುವವರು ಹೆಚ್ಚಾ ಎಂಬುದೇ ಒಂದು ಪ್ರಶ್ನೆ..??. ನಿಜಕ್ಕೂ ದೇವರಿದ್ದರೆ ಇದೆಲ್ಲಾ ಆತನಿಗೆ ಏಕೆ ಗೊತ್ತಾಗುತ್ತಿಲ್ಲ. ..?

4 ಕಾಮೆಂಟ್‌ಗಳು:

ಹರೀಶ ಮಾಂಬಾಡಿ ಹೇಳಿದರು...

ur last line indicates everything
(ದೇವಸ್ಥಾನಗಳೆಲ್ಲವೂ ಹೀಗೆಯಾ...?? ಅಲ್ಲಿ ದೇವರ ಹೆಸರಿನಲ್ಲಿ ದೇವರಾಗುವವರೇ ಹೆಚ್ಚಾ ಅಲ್ಲ ಭೂತಗಳಾಗುವವರು ಹೆಚ್ಚಾ ಎಂಬುದೇ ಒಂದು ಪ್ರಶ್ನೆ..??. ನಿಜಕ್ಕೂ ದೇವರಿದ್ದರೆ ಇದೆಲ್ಲಾ ಆತನಿಗೆ ಏಕೆ ಗೊತ್ತಾಗುತ್ತಿಲ್ಲ.)

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಹೌದು ಹರೀಶರೇ, ನಾವು ಅಂದುಕೊಂಡಿರುತ್ತೇವೆ ದೇವಸ್ಥಾನ ಎಂದ್ರೆ ಅದು ಪುಣ್ಯ ಸ್ಥಳ. ಅಲ್ಲಿ ನಾವಗಿ ತಪ್ಪು ಮಾಡಬಾರದು ಅಂತ. ಆದ್ರೆ ಅಲ್ಲಿಯ ವಿಷಯ ನೋಡಿದ್ರೆ... ಅಲ್ಲಿರುವವರೇ ಕಾಲು ಕೆರೆದು ಜಗಳಕ್ಕೆ ಬರುವಂತಿರುತ್ತದೆ.ಹಾಗಾಗಿ ನನಗೆ ಆ ಮಾತು ನೆನಪಾಗಿತ್ತು....

ವಿ.ರಾ.ಹೆ. ಹೇಳಿದರು...

ನಿಜಕ್ಕೂ ದೇವರಿದ್ದರೆ ಇದೆಲ್ಲಾ ಆತನಿಗೆ ಏಕೆ ಗೊತ್ತಾಗುತ್ತಿಲ್ಲ. ..?

ಹ್ಮ್. ನಿಜ. ಆದರೆ ಮನುಷ್ಯರ ವರ್ತನೆಯ ಮೇಲೆ ದೇವರನ್ನು ಅಳೆಯುವ ಕೆಲಸ ಎಷ್ಟು ಸರಿ.? ದೇವರ ಹೆಸರು ಹಾಳು ಮಾಡುವವರೂ ಮನುಷ್ಯರೇ.

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಹೌದು ನಿಜಕ್ಕೂ ದೇವರ ಹೆಸರನ್ನು ಹಾಳು ಮಾಡುವವರು ಮನುಷ್ಯರೇ,ನಾವು ಭಕ್ತಿಯಿಂದ್ ಅಲ್ಲಿಗೆ ಹೋಗುತ್ತೇವೆ.ಆದರೆ ಅಲ್ಲೇ ದೇವರ ಎದುರಲ್ಲಿ ಇರುತ್ತಾರಲ್ಲಾ ಕೆಲವೊಮ್ಮೆ ಅವರೇ ದೇವರಂತೆ ಮಾಡುತ್ತಾರೆ.ಹೀಗಾಗಿಯೇ ದೇವಸ್ಥಾನಗಳ ಮೇಲೆ ಕೆಟ್ಟ ಹೆಸರು ಬರುತ್ತದೆ.