29 ಡಿಸೆಂಬರ್ 2008

ಇಲ್ಲಿ ನೋವಿದೆ....




ಇದು ನಾವಿಬ್ಬರೇ ನಮಗಿಬ್ಬರೇ ಯ ಜಾಹೀರಾತಲ್ಲ... ಈ ಚಿತ್ರದ ಹಿಂದೆ ಆಳವದ ನೋವಿದೆ... ದು:ಖವಿದೆ... ನಗುವೆಂಬ ಅಕ್ಷರ ಇಲ್ಲಿ ಸಿಗದು... ಏನಿದು..?

ಅಬ್ಬಾ ನಾವು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದೇವೆ.


ನಮಗೆ ದಿನ ಬೆಳಗಾದರೆ ,ನಮ್ಮ ಪ್ರತಿಷ್ಠೆ, ದುಡ್ಡು ... ಬಿಟ್ಟರೆ ಅದರಾಚೆಗೆ ಗೊತ್ತಿಲ್ಲ. ಈ ಜಗತ್ತಿನಲ್ಲಿ ಏನೆಲ್ಲ ಸಂಕಟವನ್ನು ಅನುಭವಿಸುವ ಜನ ಇದ್ದಾರೆ..? ನನಗೆ ಅನ್ನಿಸುತ್ತದೆ ,ನಾವು ಅನುದಿನವೂ ನಮ್ಮ ಬಗ್ಗೆಯೇ ಚಿಂತಿಸಿವುದರ ಜೊತೆಗೆ ಇನ್ನೊಬ್ಬನನ್ನು ದೂರುವುದರ ಬದಲು ನಮ್ಮ ನಡುವಿನ ಆರ್ತರಿಗೆ ಸ್ವಲ್ಪ ಸ್ಪಂದಿಸಿದರೆ ಏನು ಕಮ್ಮಿಯಾಗುತ್ತದೆ. ?? ಆದರೆ ಹಾಗೆ ಮಾಡುತ್ತಿಲ್ಲ.. ..ಮಾಡುವುದೂ ಇಲ್ಲ. ..


ನನಗೆ ಹೀಗೆ ಅನ್ನಿಸಲು ಕಾರಣವಿದೆ. ಈ ಚಿತ್ರದಲ್ಲಿ ಕಾಣಿಸುತ್ತಿದ್ದಾರಲ್ಲಾ.. ಇವರು ಪುತ್ತೂರು ಬಳಿಯ ಕಲ್ಲಮೆ ಪ್ರದೇಶದ ಬಡ , ಕೂಲಿ ಮಾಡಿ ಬದುಕುವ ಕುಟುಂಬ. ದಿನಕ್ಕೆ ಹೆಚ್ಚೆಂದರೆ 200 ರೂ ಸಂಬಳ.. ಇವರಿಗೆ 4 ಜನ ಮಕ್ಕಳು ಇದ್ದರು. ಆದರೆ ಈಗ ಇರುವುದು 2 ಮಂದಿ ಮಾತ್ರಾ. ಇಬ್ಬರು ಮಕ್ಕಳು ತೀರಿಕೊಂಡದ್ದು ತಲಸ್ತೇನಿಯಾ ಎನ್ನುವ ರೋಗದಿಂದ. ಅಂದರೆ ದೇಹದಲ್ಲಿ ಕೆಂಪನೆಯು ರಕ್ತ ಕಡಮೆಯಾಗುವುದು. ಇದಕ್ಕಾಗಿ ತಿಂಗಳಿಗೋ ಅಥವಾ ಎರಡು ತಿಂಗಳಿಗೊಮ್ಮೆ ಹೊಸ ರಕ್ತ ನೀಡಬೇಕು.ಅದಲ್ಲದೆ ಆ ಮಕ್ಕಳ ರಕ್ತವು ಅಪರೂಪದ್ದು.ಹೀಗಾಗಿ 2 ಜನ ಮಕ್ಕಳು ಸತ್ತಿದ್ದಾರ್. ಉಳಿದ 2 ಜನರಿಗೆ ಆ ಕಾಯಿಲೆ ಇದೆ. ತುಂಬ ನಿತ್ರಾಣ, ವಾಂತಿ.. ,ನಿಲ್ಲಲಾಗದೇ ಇರುವುದು ,ಈ ರೋಗದ ಪ್ರಾರಂಭದ ಕ್ಷಣ. ಒಮ್ಮೆ ರಕ್ತ ನೀಡಿದರೆ ಕೆಲ ಸಮಯದವರೆಗೆ ನೆಮ್ಮದಿ ಆದರೆ ಯಾವಾಗ ಬೇಕಾದರೂ ಮತ್ತೆ ಕಾಣಿಸಬಹುದು. ಇಲ್ಲಿ ಒಬ್ಬ ಅಜ್ಜಿಯೂ ಮಕ್ಕಳ ಆರೈಕೆಗೆ ಇದ್ದಾರೆ. ತಂದೆ ತಾಯಿ ಕೂಲಿಗೆ ಹೋದರೆ ಮಕ್ಕಳ ಆರೈಕೆ ಅಜ್ಜಿಗೆ. ಹಾಗೆಂದು ಹೆತ್ತವರು ಕೂಲಿಗೆ ಹೋದರೂ ಮಕ್ಕಳ ಚಿಂತೆ. ಯಾವಾಗ ಬೇಕಾದರೂ ರೋಗ ಉಲ್ಪಣಿಸಬಹುದು.ಈಗಾಗಲೇ ಲಕ್ಷಗಟ್ಟಲೆ ವ್ಯಯಿಸಿದ್ದಾರೆ. ಅದೂ ಸಾಲ ಮಾಡಿ. ಆದರೂ ಮಕ್ಕಳಿಬ್ಬರೂ ಬದುಕುಳಿದಿಲ್ಲ. ಈಗ ಇರುವ ಮಕ್ಕಳ ಜೀವ ಉಳಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಭವಿಷ್ಯ ಬಲ್ಲವರಾರು?.

ಈ ವಿಚಾರ ತಿಳಿದ ನಮ್ಮ ಜನಪ್ರತಿನಿಧಿಗಳು ಅಲ್ಲಿಗೆ ತೆರಳಿ ಕಿಂಚಿತ್ ಪರಿಹಾರ ನೀಡಿದರು.ಭರವಸೆಗಳ ಮಹಾಪೂರ ಹರಿಸಿ ಬಡವನಿಗೆ ಆಶಾಗೋಪುರವನ್ನು ಕಟ್ಟಿಸಿದರು. ಈ ಬಡ ಕುಟುಂಬಕ್ಕೆ ಈ ಭರವಸೆ ಭಗವಂತನೇ ಒಲಿದಂತೆ ಕಂಡುಬಂತು.. ಮಾಧ್ಯಮಗಳಲ್ಲೂ ಅದು ಪ್ರಕಟವಾಯಿತು. ಆದರೆ ಜನ ನೋಡಿ ಎಂಥಾ ಕುತ್ಸಿತರಿರುತ್ತಾರೆ ಅಂತ . ಪತ್ರಿಕೆಗಳಲ್ಲಿ ಜನಪ್ರತಿನಿಧಿಗಳು ಸಹಾಯ ಮಾಡಿದ್ದು ಸುದ್ದಿ ಬಂದದ್ದು ಅರಿತದ್ದೇ ತಡ ಸಾಲ ಹಿಂದಿರುಗಿಸಲು ಒತ್ತಾತಿಸಿದರು. ಅವರು ನೀಡಿದ್ದು ಕಿಂಚಿತ್.. ಆದರೆ ಜನ ನಂಬಿದ್ದು ತುಂಬಾ...!!. ಸರಿ .. ಜನಪ್ರತಿನಿಧಿಗಳಾದರೂ ಸರಿಯಾಗಿ ಸ್ಪಂದಿಸಿದ್ದಾರಾ?. ಅದೂ ಇಲ್ಲ. ಆಸ್ಪತ್ರೆಗೆ ಕರೆದೊಯ್ದಿಲ್ಲ...ಔಷಧಿಯೂ ಆಗಿಲ್ಲ. ..ಈಗ ಪರದಾಟ ನಡೆಸುತ್ತಿದೆ ಈ ಕುಟುಂಬ.
ನಾವೂ ಅವರ ಭೇಟಿಗೆ ಹೋಗಿದ್ದೆವು. ಅದೂ ಬೇರೆ ಬೇರೆಯಾಗಿ. ಆ ಅಳುವಿನ , ನೋವಿನ ನಡುವೆ ನಮ್ಮ ಲೋಗೋ ನಿಂತಿತು.. ಮನಕಲಕುವ ಮಾತುಗಳು ... ಮಹಿಳೆಯ ... ಹೆತ್ತಕರುಳಿನಿಂದ ಬಂದಿತ್ತು.... ಒಂದೆರಡು ಮಾತು ಬಂದಾಕ್ಷಣ ನನ್ನ ಕ್ಯಾಮಾರಾ ಬಂದ್ ಆಗಿತ್ತು. ಕೊನೆಗೆ ಬರುವ ವೇಳೆ ನಾನು ಹಾಗೂ ನನ್ನ ಮಿತ್ರ ಜೊತೆಯಾಗಿ ಒಂದಿಷ್ಟು ಸಹಾಯವನ್ನು ನೀಡಿಬಂದೆವು. ಆದರೆ ಅದು ಅವರ ಮಟ್ಟಿಗೆ ಅಂದರೆ ಅವರು ಮಾಡಿದ ಖರ್ಚಿಗೆ ಪುಡಿಗಾಸು ... ಆದರೆ ನಮ್ಮ ಕೈಲಾದ ಸಹಾಯ ಮಾಡಿದ್ದೇವಲ್ಲಾ ಎನ್ನುವ ಸಂತೃಪ್ತಿ ನಮಗಿತ್ತು. ಎಲ್ಲೋ ಕಾಣಿಕೆ ಹುಂಡಿಯಲ್ಲಿ ಹಾಕಿದ್ದಕ್ಕಿಂತ ಹೆಚ್ಚಿನ ನೆಮ್ಮದಿ ಇಲ್ಲಿ ಸಿಕ್ಕಿತ್ತು..

ಆ ಮಕ್ಕಳು ಬದುಕಲಿ.... ರೋಗ ವಾಸಿಯಾಗಲಿ... ಎಂದು ಕಾಣದ ದೇವರಲ್ಲಿ ಬೇಡುವೆ.

ನಿಮಗೆಲ್ಲಾದರೂ ಇವರಿಗೆ ಸಹಾಯ ಮಾಡಬೇಕು ಅನ್ನಿಸಿದರೆ ನನಗೆ Email ಮಾಡಿ ನಾನು ವಿಳಾಸ ನೀಡುವೆ. ಅಥವಾ ಸಾಂತ್ವಾನವನ್ನಾದರೂ ಹೇಳಿ... ನೊಂದ ಹೃದಯಗಳಿಗೆ ಅದುವೇ ದೊಡ್ಡ ಗ್ಲುಕೋಸ್....


puchhappady@yahoo.co.in

5 ಕಾಮೆಂಟ್‌ಗಳು:

shivu.k ಹೇಳಿದರು...

ಮಹೇಶಣ್ಣ ,

ಈ ಕತೆ ಕೇಳಿ ಮನಸ್ಸಿಗೆ ನೋವಾಯಿತು. ದು:ಖ ಉಮ್ಮಳಿಸಿ ಬಂತು. ಇಲ್ಲಿ ನಾನು ಹೆಚ್ಚೇನು ಹೇಳಲು ಇಷ್ಟಪಡುವುದಿಲ್ಲ. ನಿಮ್ಮ ಇಮೇಲ್ ಕೊಡಿ ನಾನು ನನ್ನ ಕೈಲಾದ ಸಹಾಯ ಮಾಡುತ್ತೇನೆ. ಮತ್ತು ನನ್ನ ಗೆಳೆಯರಿಗೆ ತಿಳಿಸುತ್ತೇನೆ...

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

ಸರ್,
ಮನಕಲಕುವ ವಿಷಯ. ನನ್ನ email: malli7997@gmail.com
Blog: http://www.dgmalliphotos.blogspot.com
ದಯವಿಟ್ಟು ಅವರ ವಿಳಾಸ ಕೊಡಿ. ನಾನು ನನ್ನ ಸ್ನೇಹಿತರು ಕೈಲಾದ ಅಳಿಲು ಸೇವೆ ಮಾಡುತ್ತೇವೆ.

Ashok Uchangi ಹೇಳಿದರು...

ಪ್ರಿಯರೇ
ರಾತ್ರಿ ೧೧:೪೦ರಲ್ಲಿ ಶಿವು ನಿಮ್ಮ ಬ್ಲಾಗಿನ ಗಮನ ಸೆಳೆದರು.
ಈ ಪೋಸ್ಟ ನಲ್ಲಿಯೆ ಅವರ ವಿಳಾಸ ಹಾಗು ನಿಮ್ಮ ಇ-ವಿಳಾಸ ನೀಡಿದರೆ ಶೀಘ್ರ ಪ್ರತಿಕ್ರಿಯಿಸಲು ಸಾಧ್ಯವೆನಿಸುತ್ತೆ.
ಅಶೋಕ ಉಚ್ಚಂಗಿ
http://mysoremallige01.blogspot.com/

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಗೆಳೆಯರೇ ಧನ್ಯವಾದ.ನಿಮ್ಮ ಸಹೃದಯಕ್ಕೆ. ನನ್ನ Email ವಿಳಾಸ puchhappady@yahoo.co.in.

ಈ ಬಡ ಕುಟುಂಬಕ್ಕೆ ಯಾವುದೇ ರೀತಿ ದೂರವಾಣಿಯಿಲ್ಲ. ನಿಮಗೆ ಅವರೊಂದಿಗೆ ಮಾತನಾಡಬೇಕೆಂದಿದ್ದರೆ ಅವರು ಕೂಲಿ ಕೆಲಸ ಮಾಡುವ ಮನೆಗೆ ಪೋನಾಯಿಸಿ ಅಲ್ಲಿನ ಸಂಖ್ಯೆ .. 08251-271320

ಈ ಕುಟುಂಬ್ದ್ ವಿಳಾಸ

ವಸಂತ ,ಕುತ್ತಿಗದ್ದೆ ಕೊಂಬಳ್ಳಿ ಮನೆ, ಕಲ್ಲಮೆ , ಪುತ್ತೂರು.

ಚಿತ್ರಾ ಸಂತೋಷ್ ಹೇಳಿದರು...

ಮುರಾನಿ ಊರುಗ್ ಬನ್ನಗ ಯಾನ್ಲ್ಲ ಕುಂಟಿನಿಲಾ ಮುಕ್ಲೆ ಇಲ್ಲಾಗೆ ಪೋದಿತ್ತಾ..,.ಬೇಜಾರ್ ವಿಷಯ. ನಮನ ಪ್ರೆಸ್ ಕ್ಲಬ್ ಗಲಾ ಬತ್ತಿತ್ತ...ಈರ್ ಬೈದಿಜರ್ ಗೆ..
ಪೊಸ ವರುಷದ ಶುಭಾಶಯ
-ಚಿತ್ರಾ