11 ಫೆಬ್ರವರಿ 2009

ಒಂದೇ ದಿನದಲ್ಲಿ

ಇಂದು ಬಹುದೊಡ್ಡ ಚರ್ಚೆ ನಡೆಯುತ್ತಿದೆ. ಅವರು ನಾರಿಯರಿಗೆ ಸೀರೆ ಕೊಡ್ತಾರಂತೆ , ನಾರಿಯರು ಒಳ ಉಡುಪನ್ನು ನೀಡುತ್ತಾರಂತೆ.ಅವರು ಮಾನ ಮುಚ್ಚಿದರೆ ಇವರು ಮಾನ ತೆಗೀತಾರಂತೆ.... ಇದು ಚರ್ಚೆಯಾಗುವ ಸಂಗತಿ. ಅಸಲಿಗೆ ಇದು ಪ್ರತಿಭಟನೆಯೋ ಅಲ್ಲ ಮನರಂಜನೆಯೋ ಗೊತ್ತಿಲ್ಲ.ಆದರೂ ಸುದ್ದಿಯಾಗುತ್ತಿದೆ.

ಒಂದು ವರ್ಷದ ಹಿಂದೆ ಇದೇ ಸೇನೆಯಿಂದ ಫೆ.14 ಸುಮಾರಿಗೆ ಪ್ರೇಮಿಗಳ ದಿನಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದರು.ಈ ಬಾರಿಯೂ ಅದೇ ಹೇಳಿಕೆ.. ಆದರೆ ಈಗಿನ ಹೇಳಿಕೆಯಲ್ಲಿ ಕೊಂಚ ಬದಲಾವಣೆಯಿತ್ತು ಪ್ರೇಮಿಗಳು ನಮಗೆ ಸಿಕ್ಕರೆ ತಾಳಿ ಕಟ್ಟಿಸುತ್ತೇವೆ ಅಂತಾರೆ.. ಹಾಗಾಗಿ ಸುದ್ದಿಯಾಯಿತು ಅಂತ ಹೇಳಲು ಸಾಧ್ಯವಿಲ್ಲ. ಏಕೆಂದರೆ ಅವರ ಅಂತಹ ಹೇಳಿಕೆಗಳಿಗೆ ಅಂದು ಅಷ್ಟು ಮಹತ್ವವೇ ಇದ್ದಿರಲಿಲ್ಲ ಮಾತ್ರವಲ್ಲ ಸುದ್ದಿಯಾಗುತ್ತಿರಲಿಲ್ಲ. ಯಾವಾಗ ಅದೇ ಸೇನೆಯ ಮುಖ್ಯಸ್ಥರು ಎರಡೆರಡು ಬಾರಿ ಬಂಧನವಾಗಿ ಮೂರ್‍ನಾಕು ಘಟನೆಗಳು ದೇಶ ಮಟ್ಟದಲ್ಲಿ ಪ್ರಚಾರ ಪಡೆದ ನಂತರ ಆ ಸೇನೆಯು ದೇಶದ ಗಮನ ಸೆಳೆಯಿತು.ಅಷ್ಟು ದೊಡ್ಡ ಮಟ್ಟದ ಪ್ರಚಾರ ಈ ಸೇನೆಗೆ ಸಿಕ್ಕಿದೆ.ಹಾಗಾಗಿ ಇಂದು ಆ ಸಂಘಟನೆಯ ಹೇಳಿಕೆಯೂ ಅಷ್ಟೇ ಸೀರಿಯಸ್ಸಾಗಿ ಕಂಡಿದೆ. ಆದುದರಿಂದ ಮಂಗಳೂರಿನಲ್ಲಿ ಜೈಲಿನಿಂದ ಹೊರಬಂದ ಸಂಘಟನೆಯ ನಾಯಕನೊಬ್ಬ ಹೇಳಿದ್ದು ಮಾಧ್ಯಮಗಳಿಗೆ ಕೃತಜ್ಞತೆ ಎಂದು.ಆದರೆ ಅದು ಎಂತಹ ಪ್ರಚಾರ ಎಂದು ಎಲ್ಲರಿಗೂ ತಿಳಿದಿದೆ. ಅದಲ್ಲ ಪ್ರಚಾರ ಎಂತಹುದೇ ಇರಲಿ ಇಂದು ಆ ಸಂಘಟನೆ ಪತ್ರಿಕಾಗೋಷ್ಠಿ ಕರೆದು ಪ್ರೇಮಿಗಳ ದಿನಾಚರಣೆಗೆ ನಮ್ಮ ವಿರೋಧವಿದೆ ಎಂದ ಹೇಳಿಕೆಗೆ ದೇಶದ ಮಧ್ಯ ಭಾಗದಿಂದಲೇ ಪ್ರತಿಕ್ರಿಯೆ ಬರುತ್ತದೆ ಎಂದಾದರೆ ಆ ಸಂಘಟನೆಗೆ ಸಿಕ್ಕ ಪ್ರಚಾರದ ಮತ್ತು ಪವರ್ ಬಗ್ಗೆ ಆಲೋಚನೆ ಮಾಡಬೇಕು. ಕಳೆದ ವರ್ಷ ಇದೇ ಸಮಯದಲ್ಲಿ ಹಾಗೆಯೇ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಮಾತು ಆಚರಣೆ ಬಂದಿರಲಿಲ್ಲ.ಸಿಂಗಲ್ ಕಾಲಂನಲ್ಲಿ ಮುಗಿದಿತ್ತು. ಆದರೆ ಈಗಂತೂ ಭಾರೀ ಸುದ್ದಿಯಾಗಿದೆ.ಇದರ ಅರ್ಥ 2 ರೀತಿಯಲ್ಲಿದೆ.ಒಂದು ಅದೇ ಸೇನೆ ಮಂಗಳೂರಿನಲ್ಲಿ ಮಾಡಿದ ದಾಳಿಯಿಂದ ಜನ ಹೆದರಿ ಹೋಗಿದ್ದಾರೆ. ಅಥವಾ ಆ ಸೇನೆಯ ಹೇಳಿಕೆಗಳಿಗೆ ಈಗ ಮಹತ್ವ ಬಂದಿದೆ, ಬೆಲೆ ಬಂದಿದೆ ಅದರ ಹಿಂದೆ ಜನ ಬೆಂಬಲವಿದೆ.... ಇದರಲ್ಲಿ ಯಾವುದು ಸರಿ ಎಂಬುದನ್ನು ನಾವು ವಿಮರ್ಶಿಸಿಕೊಂಡರಾಯಿತು.

ಅದು ಮಾತ್ರವಲ್ಲ ಈ ಎಲ್ಲಾ ಘಟನೆಗಳಿಂದ ಪ್ರೇಮಿಗಳಂತೂ ಹೆದರಿದ್ದು ನಿಜ.ಅವರು ಈ ದಿನವನ್ನು ಬೇರೆ ದಿನಕ್ಕೆ ವರ್ಗಾಯಿಸಿದರೆ ಹೇಗೆ ಅಂತ ಯೋಚಿಸುತ್ತಿದ್ದಾರಂತೆ. ಈ ಗಲಾಟೆಯ ಉಸಾಬರಿಯೇ ಬೇಡ ಮೌನವಗಿ ಬೇರೆ ದಿನ ನಿಗದಿ ಮಾಡೋಣ ಅಂತ ಗುಸುಗುಸು ಶುರುವಾಗಿದೆ.

ಈಗ ನೋಡಿ ಅಂದು ಅದು ನಮ್ಮ ಸಂಘಟನೆ ಅಂತಿದ್ದವರೆಲ್ಲಾ ಈಗ ಅದು ನಮ್ಮದಲ್ಲ... ನಮ್ಮದಲ್ಲ ಅಂತಾರೆ. ಅದು ಬಿಡಿ ಮಂಗಳೂರು ತಾಲಿಬಾನ್ ಆಗಿದೆ ಎಂದು ಸಚಿವೆ ನೀಡಿದ ಹೇಳಿಕೆಗೆ ಪ್ರತಿಭಟನೆ ಮಾಡಲೂ “ಹಿಂದು” ಮುಂದು ನೋಡುತ್ತಿದ್ದಾರೆ. ಒಂದು ವೇಳೆ ಪ್ರತಿಭಟನೆ ಮಾಡಿದರೆ ನಾವು ಸೇನೆ ಸಪೋರ್ಟ್ ಇದ್ದೇವೆ ಎಂದಾಗುತ್ತದೆ... ಅವರವರಿಗೆ ಸ್ವಾತಂತ್ರ್ಯವಿದೆ ಎಂಬ ರಾಗ, ಸೇನೆಯ ಸಹ ಸಂಘಟನೆಗಳಿಂದ ಈಗ ಬರುತ್ತಿದೆ.

2 ಕಾಮೆಂಟ್‌ಗಳು:

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

ವಿವಾದಗಳೇ ವಿವಾದಗಳು. ಉಸಿರಾಡಿದ್ರೂ ವಿವಾದ, ಹೆಸರೇಳಿದ್ರೂ ವಿವಾದ. ಯಾವುದಕ್ಕೆ ಹೆಚ್ಚು ಗಮನ ಕೊಡಬಾರದೊ ಅದಕ್ಕೇ ಪ್ರಾಶಸ್ತ್ಯ. ತುಂಬಾ ಬೇಜಾರಾಗುತ್ತೆ.
ನಿಮ್ಮ ಲೇಖನ ಸಕಾಲಿಕ.

ಸಿರಿರಮಣ ಹೇಳಿದರು...

ದರಿದ್ರ ದಿಲ್ಲಿ ಮೀಡಿಯಾಗಳಿಗೆ ಮಾನ ಮರ್ಯಾದೆ ಒಂದೂ ಇಲ್ಲ. ಅವುಗಳಿಗೆ ನಿಯಂತ್ರಣ ಬೇಕಾಗಿದೆ. ಮಂಗಳೂರು ಭಾಗದಲ್ಲೇ ಅದೆಷ್ಟೋ ಕೊಲ ಅತ್ಯಾಚಾರಗಳಾಗಿವೆ. ಅವುಗಳ ಕಡೆ ಕ್ಯಾಮರಾವೇ ಇಲ್ಲ.ಕಾಶ್ಮೀರದ ಪಂಡಿತರ ಗೋಳಿಗೆ ಇವರ ಕ್ಯಾಮರಾಕಣ್ಣು ಕುರುಡು. ಎಲ್ಲಾ ಟಿ.ಪಿ.ಆರ್‍. ಮಹಿಮೆ.