07 ಮೇ 2009

ಸತ್ಯವು ಕಹಿಯಂತೆ....

ನಾವು ಅಂದುಕೊಂಡಂತೆ ಜಗತ್ತು ಇರುವುದಿಲ್ಲ. ಹಾಗೆಂದು ಯೋಚಿಸುವುದು ಕೂಡಾ ತಪ್ಪು ಅಂತ ನನ್ನ ಮಿತ್ರನೊಬ್ಬ ಹೇಳುತ್ತಾ ಇರುತ್ತಿದ್ದ . ಅದು ಹೌದು ಕೂಡಾ. ಅಂತಹ ಅದೆಷ್ಟೂ ಘಟನೆಗಳು ನಮ್ಮ ಮುಂದೆಯೇ ನಡೆಯುತ್ತದೆ. ಆದರೂ ನಾವು ಆ ಬಗ್ಗೆ ಯೋಚಿಸುವುದಿಲ್ಲ . ಆದರೆ ಅದು ನಮಗೇ ಅನುಭವಾದಾಗ ಮಾತ್ರಾ ಅರಿವಾಗುತ್ತದೆ.

ಇತ್ತೀಚೆಗೆ ಒಬ್ಬ ವೈದ್ಯರೊಬ್ಬರು ನಮ್ಮನ್ನು ಹುಡುಕಿಕೊಂಡು ಬಂದಿದ್ದರು...ಬಳಿಕ ಅವರು ವಿವರಿಸಿದ ಕತೆ ಹೀಗಿದೆ. ಅದಕ್ಕೂ ಮೊದಲು ಇದರ ಸಾರಾಂಶ ಹೀಗಿದೆ. ಸತ್ಯ ಹೇಳಬಾರದು.. ಸತ್ಯ ಹೇಳಿದರೆ ಅದನು ಜಗತ್ತು ಮತ್ತು ವ್ಯಕ್ತಿಗಳು ಒಪ್ಪುವುದಿಲ್ಲ.. ಸುಳ್ಳೇ ಹೇಳಬೇಕು.. ಎನ್ನುವುದು ಇದರ ಮೊದಲ ಪ್ಯಾರಾ...

ಅವರು ಒಂದು ಪುಸ್ತಕ ಬರೆದಿದ್ದರು. ಅದರಲಿ ಕೆಲ ವಿಚಾರಗಳು ನೇರವಾಗಿದ್ದವು ಮತ್ತು ವಾಸ್ತವವನ್ನು ಬಿಂಬಿಸುತ್ತಿದ್ದವು. ಇದು ಬಿಡುಗಡೆಯಾದ್ದೇ ತಡ. ಹಿರಿಯರಿಂದ ಬಂತು ಕಿರಿ ಕಿರಿ.. ಹಾಗಾಗಿ ಕ್ಷಮೆಯನ್ನು ಕೇಳಿದರು.. ನಂತರ ಯೋಚಿಸಿದ ಅವರು ಮಾತನಾಡಿದ್ದು ಹೀಗೆ.. ಈ ಸಮಾಜ ಹೀಗೂ ಇರುತ್ತೆ.. ಆ ಪುಸ್ತಕದಲ್ಲಿ ನಾನು ಸತ್ಯವನ್ನು ಪ್ರತಿಪಾದಿಸಿದೆ.. ಜಗತ್ತು ಸತ್ಯವನ್ನು ಹೇಳಬೇಕು ಅಂತ ಹೇಳುತ್ತೆ.... ಹಾಗೆ ಒಂದು ವೇಳೆ ಸತ್ಯವನ್ನೇ ಬರೆದರೆ ಇಡೀ ಜಗತ್ತು ಒಂದಾಗಿ ಕ್ಷಮೆ ಕೇಳಬೇಕು ಅಂತಲೂ ಒತ್ತಾಯಿಸುತ್ತದೆ ಎನ್ನುತ್ತಾ ಮಾತನ್ನು ಮುಂದುವರಿಸುತ್ತಾರೆ...ಇದು ಯುವ ಸಾಹಿತಿಯೊಬ್ಬರ ಮಾತು ಕೂಡಾ ಹೌದು.. ಇದೆಂಥಾ ವಿಪರ್ಯಾಸ ಎಂದು ಅವರು ಹಲುಬುತ್ತಿದ್ದರು...

ಆದರೆ ನಿಜಕ್ಕೂ ಇಂದು ಜಗತ್ತು ಸತ್ಯವನ್ನು ಒಪ್ಪಿಕೊಳ್ಳುತ್ತಿಲ್ಲ. ಮತ್ತು ಅದು ಕಹಿಯೂ ಆಗುತ್ತೆ.. ಅದು ಪಥ್ಯವೂ ಆಗುವುದಿಲ್ಲ.. ನಾನು ಕೂಡಾ ವೈದ್ಯರ ಆ ಮಾತನ್ನು ನನ್ನ ಇದುವರೆಗಿನ ಬದುಕಿನ ಅನಭವದ ಆಧಾರದಲ್ಲಿ ಕೊನೆಗೆ ಒಪ್ಪಿಕೊಂಡೆ... ಇಲ್ಲಿ ಅನುಭವ ಹಾಗೂ ಮುಕ್ತವಾದ ಸತ್ಯ ಮುಖ್ಯವಾಗುವುದಿಲ್ಲ... ಮುಕ್ತವಾದ ಮನ .. ಬರಹ ಮುಖ್ಯವಾಗುವುದಿಲ್ಲ... ಇಲ್ಲಿ ಮುಖ್ಯವಾಗುವುದು ಮನೆ.. ಹಣ... ಅಂತಸ್ತು... ಅಧಿಕಾರ... ಮತ್ತು.. ದರ್ಪ.. ಹಾಗಾಗಿ ವೈದ್ಯರು ಹೇಳುತ್ತಿದ್ದರು ಇಲ್ಲಿ ಸಜ್ಜನಿಕೆಗೆ.. ನಿರ್ಮಲ ಮನಸ್ಸಿಗೆ , ಬೆಳೆಯುವ ಮನಸ್ಸುಗಳಿಗೆ ಅವಕಾಶವಿಲ್ಲ ಅಂತ.ಆದರೂ ಮತ್ತೆ ಮಾತನಾಡುತ್ತಾ....... ನಾವು ಸತ್ಯದ ಪ್ರತಿಪಾದನೆಯಿಂದ ಬರುವ ಮಾತುಗಳನ್ನು ಕೇಳಿ ಸುಳ್ಳನ್ನು ಪ್ರತಿಪಾದನೆ ತೊಡಗುವುದರಿಂದ ಯಾವುದೇ ಪ್ರಯೋಜನವಿಲ್ಲ.... ನಾವು ಬೆಳೆಯುತ್ತಾ ಟೀಕಿಸುವವರಿಗೆ ಮತ್ತು ನಮ್ಮನ್ನು ಇಷ್ಟಪಡದವರಿಗೆ ಅಸೂಯೆಯಾಗುವಂತೆ ಬರೆಯಬೇಕು ಮತ್ತು ಬದುಕಬೇಕು..... ಅಂತ ಹೇಳಿದ್ದು ನಿಜಕ್ಕೂ ಹೊಸತೊಂದು ತಿರುವು ಕಂಡಿತು.. ಒಂದು ಸುದ್ದಿಯೂ ಆಯಿತು...

4 ಕಾಮೆಂಟ್‌ಗಳು:

ಬಾನಾಡಿ ಹೇಳಿದರು...

ಸತ್ಯವನ್ನು ಅರಿಯಲು ಬಹಳಷ್ಟು ಮಂದಿ ಬಹಳಷ್ಟು ವರ್ಷ ಕಾದಿದ್ದಾರೆ.
ಗೆಲಿಲಿಯೋ, ಸಾಕ್ರೆಟಿಸ್ ನೆನಪಾಗುತ್ತಾರೆ.

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಇಂದು ಸತ್ಯದ ಹುಡುಕಾಟದ ದಾರಿ ಸರಿಯಿಲ್ವೇ...?? ಯಾಕೆಂದ್ರೆ ತಕ್ಷಣದ , ವಿಶ್ಲೇಷಣಾ ರಹಿತವಾದ ಹುಡುಕಾಟವೇ ಇಂದು ನಡೆಯುತ್ತಿದೆ... "ಸತ್ಯ"ದ ಶೋಧನೆ ನಡೆಯುತ್ತಿಲ್ಲ.. ಅಲ್ವೇ..?

ಹರೀಶ ಮಾಂಬಾಡಿ ಹೇಳಿದರು...

Satyameva jayate

sagarts ಹೇಳಿದರು...

Illi sathyakintha sakshige bele jasthi...

sakshi illa andre sathya sullagutta...