
ಸೆಕ್ಸ್ ಎನ್ನುವುದು ವ್ಯಕ್ತಿಯ ಇಚ್ಚೆಗೆ ಬಿಟ್ಟ ವಿಚಾರ.ಅದನ್ನು ಇನ್ನೊಬ್ಬ ಹೇರಿದರೆ ಅದು ಅತ್ಯಾಚಾರ.ಅದು ಮುಕ್ತವಾದರೆ ಸಹಜಕ್ರಿಯೆ.ಇಂತಹ ಸೆಕ್ಸ್ ಬಗ್ಗೆ ಆಗೊಮ್ಮೆ ಈಗೊಮ್ಮೆ ಚರ್ಚೆಯಾಗುತ್ತದೆ.ಅದೆಲ್ಲವನ್ನೂ ಟೀನೇಜ್ ಗಂಬೀರವಾಗಿ ಕೇಳಿಸಿಕೊಳ್ಳುತ್ತದೆ.ಈ ವಿಚಾರಗಳಿಗೆ ಹೇಗೆ ಸ್ಪಂದಿಸಬೇಕೆಂದು ತಿಳಿಯದೆ ಒಳಗೊಳಗೇ ಮಾತನಾಡಿಕೊಳ್ಳುತ್ತದೆ.ಹೊರಗೆ ಮಾತನಾಡುವುದದಕ್ಕಾಗದೇ ಸಮಾಧಾನದ ಮಾತುಗಳಿಗೆ ಹೃದಯ ತೆರೆದಿರುತ್ತದೆ.ಈಗಲೂ ಅಂತಹದ್ದೇ ಚರ್ಚೆಯೊಂದು ಎದ್ದಿದೆ.ವಿವಾಹಪೂರ್ವ ಲೈಂಗಿಕತೆ ಅಪರಾಧವಲ್ಲ ಎಂಬ .. ಸಂಗತಿಯ ಬಗ್ಗೆ..
ವಿವಾಹಪೂರ್ವ ಲೈಂಗಿಕತೆ ತಪ್ಪಲ್ಲ . . . ಹೀಗೆಂಬ ತೀರ್ಪೊಂದು ಸುಪ್ರೀಂಕೋರ್ಟ್‌ನಿಂದ ಹೊರಬರುತ್ತಿದ್ದಂತೆಯೇ ಸಂಪ್ರದಾಯಸ್ಥ ಸಮಾಜದಲ್ಲಿ ತೀವ್ರ ಸಂಚಲನ ಮೂಡಿಸಿದೆ.ಇದೊಂದು ತಪ್ಪು ದಾರಿಗೆ ಕಾರಣವಾಗಲಿದೆ ಎಂಬ ವ್ಯಾಖ್ಯಾನ ಈಗ ಎಲ್ಲೆಡೆ ಕೇಳಿಬರುತ್ತಿದೆ.ಯಾವ ಹೆತ್ತವರು ತಾನೆ ಭಾರತದಲ್ಲಿ ತನ್ನ ಮಗ-ಮಗಳು ಮುಕ್ತ ಸೆಕ್ಸ್‌ನಲ್ಲಿ ಭಾಗಿಯಾಗಲಿ ಅಂತ ಆಶಿಸಬಹುದು ಹೇಳಿ.ಸೆಕ್ಸ್ ಎನ್ನುವುದು ಮೆಜೋರಿಟಿಗೆ ಬಂದ ಮನುಷ್ಯನ ಆಯ್ಕೆಯಾದರೂ ಕೂಡಾ ಹೆತ್ತವರಿಗೆ ಅದೊಂದು ಮುಜುಗರದ ಸಂಗತಿ.ಹಾಗಾಗಿ ಈ ಸಂಗತಿ ಮಾತನಾಡುವುದೇ ಒಂದು ಅಪಚಾರವಾಗುವ ಈ ಕಾಲದಲ್ಲಿ ವಿವಾಹಪೂರ್ವ ಸೆಕ್ಸ್ ತಪ್ಪಲ್ಲ ಎಂಬುದು ಮನೆಮಂದಿಯ ಒಳ ಆತಂಕ್ಕೆ ಕಾರಣವಾಗಿದೆ.
ನೀವು ಒಪ್ತಿರೋ ಬಿಡ್ತಿರೋ ಗೊತ್ತಿಲ್ಲ.ಕಾಲೇಜು ವಿದ್ಯಾರ್ಥಿಗಳಿಬ್ಬರು ದಿನಪತ್ರಿಕೆ ನೋಡಿ ಇನ್ನೇನು ಪರವಾಗಿಲ್ಲ ಯಾವುದೇ ಕಾರಲ್ಲಿ ಎಲ್ಲಿಗೂ ಹೋದರೂ ಕೇಳೋರ್‍ಯಾರು ಇಲ್ಲ ಎಂಬರ್ಥದಲ್ಲಿ ಹರಟುತ್ತಿದ್ದರು. ಇಂತಹ ಪರಿಸ್ಥಿತಿಗಾಗಿ ಭಾರತದ ಸಂಪ್ರದಾಯಸ್ಥ ಸಮಾಜ ಇಂತಹ ಲೈಂಗಿಕತೆಯನ್ನು ವಿರೋಧಿಸುತ್ತದೆ.ಇಷ್ಟಕ್ಕೂ ಈ ತೀರ್ಪು ಬರುವುದಕ್ಕೆ ಒಂದೆರಡು ವರ್ಷಗಳ ಹಿಂದೆ ಚಿತ್ರ ನಟಿ ಖುಷ್ಬೂ ನೀಡಿದ ಹೇಳಿಕೆಯೇ ಇಂದು ಈ ಹೊಸ ಇಶ್ಯೂ ಆರಂಭವಾಗಲು ಕಾರಣವಾಗಿದೆ.
ಹಾಗೆ ನೋಡಿದರೆ ವಿದೇಶಗಳಲ್ಲಿ ವಿವಾಹ ಪೂರ್ವ ಸೆಕ್ಸ್‌ನ್ನು “ಲಿವಿಂಗ್ ಟುಗೆದರ್” ಎಂಬ ಹೆಸರಲ್ಲಿ ಕರೆಯುತ್ತಿದ್ದರು.ಈ ಕೂಡಾ ಸಂಪ್ರದಾಯ ಹಿಂದೆಯೇ ಬೆಳೆದುಕೊಂಡು ಬಂದಿತ್ತು.ಹಾಗಾಗಿ ಸಂಗಾತಿಗಳು ಬದಲಾಗುತ್ತಲೇ ಇದ್ದರು. ಆದರೆ ಭಾರತದಲ್ಲಿ ಹಾಗಲ್ಲ.ಇಲ್ಲಿ ಕುಟುಂಬ ಪದ್ದತಿ.ಒಬ್ಬನೇ ಸಂಗಾತಿ.ನೋವು ನಲಿವು ಎಲ್ಲವೂ ಅದೇ ಕುಟುಂಬದಲ್ಲಿ.ಆದರೆ ಈ “ಲಿವಿಂಗ್ ಟುಗೆದರ್” ಸಂಪ್ರದಾಯ
ಇತ್ತೀಚೆಗೆ ನಗರ ಕೇಂದ್ರಿತವಾಗಿ ನಮ್ಮಲ್ಲೂ ಅದು ಕಾಣಿಸಿಕೊಂಡಿದೆ.ಹಾಗೆ ನೋಡಿದರೆ ಈ ಸಿಸ್ಟಂ ಒಪ್ಪಿಕೊಂಡವರು ಕೇವಲ ಶೇಕಡಾ 5 ರಿಂದ ಶೇಕಡಾ 10 ರಷ್ಟು ಜನ ನಮ್ಮಲ್ಲಿದ್ದಾರೆ.ಇದೆಲ್ಲವೂ ಕೂಡಾ ತಾತ್ಕಾಲಿಕವಾದ ದೈಹಿಕ ಸಂಬಂಧಗಳು ಮಾತ್ರಾ.ಯಾವುದೇ ಕಾರಣಕ್ಕೂ ಅವುಗಳು ಮಾನಸಿಕವಾದ ಸಂಬಂಧಗಳಿಗೆ ಕಾರಣವಾಗುವುದಿಲ್ಲ.ಇಂತಹ ಪರಿಸ್ಥಿತಿ ಬಹುಕಾಲ ಮುಂದುವರಿದರೆ ಜೀವನ ಪೂರ್ತಿ ಒಂಟಿಯಾದರೂ ಅಚ್ಚರಿ ಪಡಬೇಕಿಲ್ಲ.ಅದರಲ್ಲಿ ಮಹಿಳೆ ತೀರಾ ಕೊರಗಬೇಕಾದ ಸಂದರ್ಭವೇ ಇರುತ್ತದೆ. ಅದಕ್ಕೂ ಕಾರಣವಿದೆ.ಸುಮಾರು 20 ವರ್ಷದಿಂದ 30 - 35 ವರ್ಷದ ಕಾಲ “ಲಿವಿಂಗ್ ಟುಗೆದರ್” ಅಥವಾ ವಿವಾಹವಾಗದೇ ಇದ್ದರೆ ಒಬ್ಬ ಮಹಿಳೆಯ ನಿಜವಾದ ಮೌಲ್ಯಯುತವಾದ ದಿನಗಳು ಮುಗಿಯುವ ಹಂತಕ್ಕೆ ಬಂದಿರುತ್ತದೆ.ಆಗ ನಿಜವಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕಾಗುವುದಿಲ್ಲ , ಭಾರತೀಯ ಸಂಸ್ಕೃತಿಯಲ್ಲಿ ಅದಕ್ಕೆ ಅವಕಾಶವೂ ಇರುವುದಿಲ್ಲ.ಒಂದು ವೇಳೆ ಈ ಸಂಪ್ರದಾಯವನ್ನು ಧಿಕ್ಕರಿಸಿ ಮದುವೆಯಾದರೂ ಮಾನಸಿಕವಾಗಿ ಗಂಡುಹೆಣ್ಣು ಹತ್ತಿರವಾಗುವುದಕ್ಕೆ ಕಷ್ಟ. ಹಾಗಾಗಿ ಅವರು ಒಂಟಿಯಾಗಿಬಿಡುತ್ತಾರೆ. ವಯಸ್ಸಾದಂತೆ ಒಂಟಿತನ ಸಹಿಸುವುದು ಕಷ್ಟ.ಇಂದಿನ ಸಮಾಜ “ನಾನು” ಕೇಂದ್ರಿತವಾಗಿರುವಾಗ ಈ “ಲಿವಿಂಗ್ ಟುಗೆದರ್” ಕೂಡಾ ಸ್ವಾರ್ಥದಿಂದಲೇ ಕೂಡಿರುತ್ತದೆ.ಹಾಗಾಗಿ ಅದೊಂದು ಟೈಂಪಾಸ್‌ಗೆ ಅವಕಾಶವಾಗಿ ಬಿಡುತ್ತದೆ.ವಿದ್ಯಾರ್ಥಿಗಳಿಗೆ ಇಂತಹ ಟೈಂಪಾಸ್‌ಗಳತ್ತಲೇ ಹೆಚ್ಚು ಆಸಕ್ತಿ ಇದೆ ಎಂಬುದನ್ನು ಮೊರಲ್ ಪೊಲೀಸಿಂಗ್ ತೋರಿಸಿಕೊಡುತ್ತದೆ.ಇದೆಲ್ಲವೂ ಕೂಡಾ ವಿದೇಶಿ ಕೇಂದ್ರಿತವಾದ ಸಂಸ್ಕ್ರತಿಯ ಬಳುವಳಿ.ಇದರ ಜೊತೆಗೆ ಇಂದು ಭಾರತದಲ್ಲಾಗುತ್ತಿರುವ ವಿವಾಹ ವಿಚ್ಚೇದನ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿರುವುದು ಆತಂಕವೇ ಸರಿ.
ಇದಕ್ಕೆ ಇಂದು ಭಾರತದ ಬದಲಾದ ಕುಟುಂಬ ಪದ್ದತಿ ಕೂಡಾ ಕಾರಣವಾಗಬಹುದು.ಮನೆಯಲ್ಲಿ ಆಲೋಚನೆಗಳನ್ನು , ಅಭಿಪ್ರಾಯಗಳನ್ನು ಹಂಚಿಕೊಳ್ಳುವುದಕ್ಕೆ ವ್ಯಕ್ತಿಗಳು ಸಿಗದೇ ಇದ್ದಾಗ ಇಂತಹ ಅಭ್ಯಾಸಗಳು ಹೆಚ್ಚು ಮಾನಸಿಕವಾದ ನೆಮ್ಮದಿಯನ್ನು ಕೊಡುತ್ತದೆ.ಹಾಗಾಗಿ ಇಲ್ಲಿನ ಮೌಲ್ಯಗಳ ಬದಲಾವಣೆಗಳಿಗೆ ಕಾರಣವಾಗಿದೆ.ಹಾಗಾಗಿ ಎಚ್ಚರಿಕೆ ಅಗತ್ಯ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ