ರಾಹುಲ್ ದ್ರಾವಿಡ್‌ಗೆ ನಾಗದೋಷವಿದೆಯೇ?.ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಇದಕ್ಕೆ ಪುಷ್ಠಿ ನೀಡುವಂತೆ ದ್ರಾವಿಡ್ ಕುಟುಂಬವು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗದೋಷ ನಿವಾರಣೆಗೆ ಪೂಜೆ ಸಲ್ಲಿಸಿದ್ದಾರೆ.ಸದ್ದಿಲ್ಲದೆ ಆಗಮಿಸಿದ ದ್ರಾವಿಡ್ ಕುಟುಂಬವು ಪೂಜೆ ನಡೆಸಿ ತೆರಳಿದೆ.
ಟೀಂ ಇಂಡಿಯಾದ ಆಟಗಾರ ರಾಜ್ಯದ ಹೆಮ್ಮೆಯ ಕ್ರೀಡಾಪಟು ರಾಹುಲ್ ದ್ರಾವಿಡ್ ಅವರಿಗೆ ನಾಗದೋಷವಿದೆಯೇ ಎನ್ನುವ ಪ್ರಶ್ನೆ ಈಗ ಎದ್ದಿದೆ. ರಾಹುಲ್ ಅವರಿಗೆ ಕ್ರಿಕೆಟ್ ರಂಗದಲ್ಲಿನ ಸಾಧನೆಗೆ ನಾಗದೋಷ ಅಡ್ಡಿಯಾಗಿದೆಯಂತೆ.ಈ ನಾಗದೋಷ ನಿವಾರಣೆಗೆ ರಾಹುಲ್ ಕುಟುಂಬವು ಕುಕ್ಕೆಗೆ ಆಗಮಿಸಿದ ಶ್ರೀ ದೇವಳದಲ್ಲಿ ತುಲಾಭಾರ ಸೇವೆ , ಆಶ್ಲೇಷ ಬಲಿ ಸೇರಿದಂತೆ ವಿವಿಧ ಸೇವೆಯನ್ನು ನಡೆಸಿದೆ.1 ದಿನದ ಕಾಲ ಸುಬ್ರಹ್ಮಣ್ಯದಲ್ಲೆ ಉಳಿದಿದ್ದ ರಾಹುಲ್ ಕುಟುಂಬವು ಈ ವಿಚಾರವನ್ನು ಗುಪ್ತವಾಗಿಟ್ಟಿತ್ತು.ಮುಂದೆ ರಾಹುಲ್ ದ್ರಾವಿಡ್ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಖುದ್ದಾಗಿ ಆಗಮಿಸಿ ಇನ್ನೊಮ್ಮೆ ಸೇವೆ ಸಲ್ಲಿಸಲಿದ್ದಾರೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ. ಹಿಂದೆ ಸಚಿನ್ ತೆಂಡೂಲ್ಕರ್ ಅವರಿಗೆ ನಾಗದೋಷವಿದ್ದಾ ಗ ಅವರು ಕುಟುಂಬ ಸಮೇತರಾಗಿ ಕುಕ್ಕೆಗೆ ಆಗಮಿಸಿ ಸರ್ಪಂಸ್ಕಾರ ಸೇವೆಯನ್ನು ಮಾಡಿದ್ದರು.ಹೀಗಾಗಿ ನಂತರದ ಅವರ ಕ್ರಿಕೆಟ್ ಜೀವನವು ಉತ್ತಮವಾಗಿತ್ತು ಎನ್ನುವ ನಂಬಿಕೆಯಿದೆ.ಅಂತೆಯೇ ರಾಬಿನ್ ಉತ್ತಪ್ಪ ಕೂಡಾ ಕುಕ್ಕೆಗೆ ಆಗಮಿಸಿ ಪೂಜೆ ಸಲ್ಲಿಸಿದ್ದರು.ಅದೇ ರೀತಿ ಈಗ ರಾಹುಲ್ ಅವರಿಗೂ ನಾಗದೋಷದ ಕಾಟ ಆರಂಭವಾದ ಹಿನ್ನೆಲೆಂiಲ್ಲಿ ಅವರ ಕುಟುಂಬವು ಈಗ ಪ್ರಾರಂಭಿಕ ಹಂತದಲ್ಲಿ ಆಗಮಿಸಿ ಸೇವೆ ಸಲ್ಲಿಸಿದೆ.ಬೆಂಗಳೂರಿನ ಜ್ಯೊತಿಷಿಯೊಬ್ಬರ ಅಣತಿಯಂತೆ ಅವರ ಕುಟುಂಬ ಸುಬ್ರಹ್ಮಣ್ಯಕ್ಕೆ ಆಗಮಿಸಿದೆ.
ಇನ್ನು ಇನ್ನೊಂದು ಪ್ರಶ್ನೆ ಎದ್ದಿದೆ.ಯಾಕೆ ಈ ನಾಗದೊಷ ಪ್ರಸಿದ್ಧ ಕ್ರೀಡಾಪಟುಗಳನ್ನು ಹಿಡಿದುಕೊಳ್ಳುತ್ತದೆ. ಇನ್ನೊಂದು ಸಮಾಧಾನ. ಬಡವರಿಗೆ ಮಾತ್ರವಲ್ಲ ದಿಗ್ಗಜರನ್ನೂ ಕಾಡುತ್ತದೆ ಇಂತಹ ಸಮಸ್ಯೆಗಳು ಅಂತಾಯಿತು.ಇಂತಹ ಸಮಸ್ಯೆಗಳನ್ನು ಹೇಳಲು ಅಂತಲೇ ಜನ ಇರುತ್ತಾರೆ. ಅವರಿಗೆ ಕೆಲಸವೇ ಅದು. ನಿಮಗೆ ಆ ದೋಷ ... ಈ ದೊಷ... ಅಂತ ಹೇಳುತ್ತಾ.... ಎಣಿಸುತ್ತಾರ್.ಜನಕ್ಕೆ ಮೊದಲೇ ಮಾನಸಿಕವಾದ ನೆಮ್ಮದಿಯಿಲ್ಲ. ಅತ್ತಿಂದಿತ್ತ ಇನ್ನಿಲ್ಲದ ಕ್ಷೇತ್ರಗಳಿಗೆ ಅಲೆದಾಟ ಮಾಡುತ್ತಾರೆ.ಹರಕೆಯನ್ನು ತೀರಿಸುತ್ತಾರೆ.ಅಲ್ಲಿಯೂ ವ್ಯಾಪಾರ ನಡೆಯುತ್ತದೆ. ಅದಕ್ಕೆಂದೇ ಅಲ್ಲಿ ಇರುವವರು ದೋಚುತ್ತಾರೆ.
ಈಗ ಇಂತಹ ಕ್ಷೇತ್ರಗಳಿಗೆ ವಿವಿಐಪಿಗಳು ಬಂದರೆ ಅವರ ಕುಟುಂಬವು ಬಂದರೆ ಅನೇಕರಿಗೆ ಲಾಭವಿದೆ. ಮಾಧ್ಯಮಗಳಿಗೆ ಬ್ರೇಕಿಂಗ್ ನ್ಯೂಸ್ , ಮುಖಪುಟ ವರದಿ, ಅಲ್ಲಿನ ಅರ್ಚಕರಿಗೆ ದುಡ್ಡಿನ ಮರ, ಇತರರಿಗೆ ಕಾಣಿಕೆ, ಹೋಟೇಲ್ ಗಳಿಗೆ ಹೊಸರುಚಿ, ಅಭಿಮಾನಿಗಳಿಗೆ ಮುಖ ದರ್ಶನ......
1 ಕಾಮೆಂಟ್:
ಮಹೇಶಣ್ಣ,
ನಾಗದೋಷ ಯಾರನ್ನು ಬಿಡುವುದಿಲ್ಲವೆಂದಾಯಿತು. ಹೋಗಲಿ ಬಿಡಿ ಇದರಿಂದ ನೀವೇಳಿದಂತೆ ಒಂದಷ್ಟು ಒಳ್ಳೆಯದಾದರೇ ಆಯಿತಲ್ಲ !
ಕಾಮೆಂಟ್ ಪೋಸ್ಟ್ ಮಾಡಿ