ಗ್ರಾಮೀಣ ಕರ್ನಾಟಕ ಈಗ “ಪವರ್” ಫುಲ್.. !, ಆದರೆ ಯಾರೊಬ್ಬರೂ ಈ ಬಗ್ಗೆ ಮಾತನಾಡುತ್ತಿಲ್ಲ. ಈ ಶಕ್ತಿ ಹೇಗೆ ಬಂತು ಅಂತ ಗ್ರಾಮೀಣ ಜನ ಮಾತನಾಡುತ್ತಿದ್ದಾರೆ. ಅಷ್ಟಕ್ಕೂ ಗ್ರಾಮೀಣ ಕರ್ನಾಟಕ ಹೇಗೆ ಪವರ್ ಫುಲ್ ಅಂತೀರಾ. ಇಲ್ಲಿ ಈಗ ನಿರಂತರ ಪವರ್ ಇದೆ. ಹಳ್ಳಿ ಜನರಿಗೆ ಖುಷಿ ಇದೆ.
ಗ್ರಾಮೀಣ ಕರ್ನಾಟಕದಲ್ಲಿ ಒಂದು ಕಾಲವಿತ್ತು. ಬೆಳಗ್ಗೆ ಹೋದ ಪವರ್ ಬರೋದೇ ಸಂಜೆ ಇನ್ನೆಷ್ಟೊತ್ತಿಗೋ. ಶಾಲಾ ಮಕ್ಕಳಿಗೆ , ಗೃಹಿಣಿಯರಿಗೆ ತಲೆನೋವೇ ತಲೆ ನೋವು.ಆದ್ರೆ ಹೇಳೋದು ಯಾರಲ್ಲಿ. ಒಂದಷ್ಟು ಪತ್ರಿಕೆಗಳಲ್ಲಿ ವರದಿಗಳೂ , ಇನ್ನೊಂದಿಷ್ಟು ಪ್ರತಿಭಟನೆಗಳು ನಡೆದರೆ ಮುಗೀತು.ಪವರ್ ಪ್ರೋಬ್ಲೆಮ್ ಮುಗೀಲೇ ಇಲ್ಲ. ಅದಕ್ಕಿಂತಲೂ ಹೆಚ್ಚು ಕೃಷಿಕರು ಪಡೋ ಸಂಕಷ್ಠ ಒಂದಲ್ಲ ಹಲವಾರು. ತೋಟಕ್ಕೆ ನೀರುಣಿಸಲು ರಾತ್ರಿ ಹಗಲು ಶ್ರಮ ಪಡಬೇಕು. ಪವರ್ ಬಂದರೂ ಪಂಪ್ ಚಾಲೂ ಆಗೋದಿಲ್ಲ.ಆದರೂ ವಿಧಿಯಿಲ್ಲ ಕಾದು ಕುಳಿತಾದರೂ ಚಾಲೂ ಮಾಡಲೇ ಬೇಕು.ಅಲ್ಲೂ ಕಾಂಪಿಟೀಶನ್ ಇರ್‍ತಿತ್ತು. ಪವರ್ ಬಂದಾಗಲೇ ಪಂಪ್ ಚಾಲೂ ಆದರೆ ಮುಗೀತು . ಇಲ್ಲಾಂದ್ರೆ ವೋಲ್ಟೇಜ್ ಪ್ರಾಬ್ಲಂನಿಂದಾಗಿ ಚಾಲೂ ಆಗೋದಿಲ್ಲ. ತುಂಬಾ ವೋಲ್ಟೇಜ್ ಕಡಿಮೆ ಆದ್ರೆ ಲೈನ್ ಟ್ರಿಪ್ ಆಗುತ್ತೆ. ಮತ್ತೆ ಐದೋ ಹತ್ತೋ ನಿಮಿಷ ಕಳೆದು ಪವರ್ ಬರೋದು. ಆಗಲೂ ಇದೇ ಸಮಸ್ಯೆ. ಹೀಗೆ ಒಂದೇ ಎರಡೇ ಹತ್ತಾರು ಸಮಸ್ಯೆ ಗ್ರಾಮೀಣ ಕರ್ನಾಟಕದಲ್ಲಿ.
ಆದರೆ ಈ ಬಾರಿ ಸ್ವಲ್ಪ ಸುಧಾರಿಸಿದಂತೆ ಕಾಣುತ್ತೆ. ಯಾಕೆಂದರೆ ಅಂದೆಲ್ಲಾ ನವೆಂಬರ್ ಅಂತ್ಯ , ಡಿಸೆಂಬರ್‌ನಲ್ಲಿಯೇ ಪವರ್ ಕಟ್ ಶುರುವಾಗುತ್ತಿತ್ತು. ಹೀಗಾಗಿ ಮಾರ್ಚ್ ವೇಳೆಗೆ ಪರಿಸ್ಥಿತಿ ತೀರಾ ಕಠಿಣವಾಗುತ್ತಿತ್ತು.ಆದರೆ ಈ ಬಾರಿ ಹಾಗೆ ಕಾಣುತ್ತಿಲ್ಲ. ಫೆಬ್ರವರಿ ಆರಂಭವಾದರೂ ದಿನ ಪೂರ್ತಿ ಪವರ್ ಇದೆ. ಅದರಲ್ಲಿ 12 ಗಂಟೆ ಕೃಷಿಕರಿಗಾಗಿ ತ್ರೀ ಫೇಸ್ ಇದೆ. ಉಳಿದಂತೆ 12 ಗಂಟೆ ಮನೆ ಬಳಕೆಗೆ ಪವರ್ ಇದೆ. ಹೀಗಾಗಿ ನಿರಂತರ 24 ಗಂಟೆ ಮನೆಗೆ ಪವರ್ ಇದ್ದೇ ಇದೆ. ಆದರೆ ಇದು ಎಷ್ಟು ದಿನ ಅಂತ ಗೊತ್ತಿಲ್ಲ. ಒಂದಂತೂ ಸತ್ಯ ಇಷ್ಟು ದಿನ ಪವರ್ ನೀಡಿದ್ದಾರಲ್ಲಾ ಮುಂದಿನ ಬಾರಿ ಇನ್ನೂ ಸರಿಯಾಗಬಹುದು ಅನ್ನೋ ಆಶಾವಾದ ಗ್ರಾಮೀಣರಲ್ಲಿದೆ.ಅಂತೂ ಯಾವುದೇ ತೊಂದರೆ ಇಲ್ಲದೆ ಈಗ , ಇದುವರೆಗೆ ಪವರ್ ನೀಡಿದ್ದಾರಲ್ಲಾ ಅಂತ ಕೃಷಿಕರೆಲ್ಲಾ ಈಗ ನೆನಪಿಸಿಕೊಳ್ಳುತ್ತಾರೆ. ಅದರಲ್ಲೂ ಉಚಿತ ವಿದ್ಯುತ್ ಕೂಡಾ ಕೊಟ್ಟಿದ್ದಾರಲ್ಲಾ ಅದು ಇನ್ನಷ್ಡು ಖುಷಿ. ಆವತ್ತು ಮಾತನಾಡಿಕೊಳ್ಳುತ್ತಿದ್ದರು , ಹೇಗೂ ಫ್ರೀ ಕರೆಂಟ್ ಅಲ್ವಾ ಬರುವ ವರ್ಷದಿಂದ ಪವರೇ ಇರಲಿಕ್ಕಿಲ್ಲ ಅಂತ ಮಾತನಾಡಿಕೊಳ್ಳುತ್ತಿದ್ದರು. ಆದರೆ ಈಗ ಆ ನಿಲುವಿನಿಂದ ಬದಲಾಗಿದ್ದಾರೆ ಗ್ರಾಮೀಣ ಜನ. ಹೀಗೇ ಮುಂದುವರಿಯಲಿ ಅನ್ನೋದೇ ಕೃಷಿಕರ ಒತ್ತಾಸೆ.
04 ಫೆಬ್ರವರಿ 2011
02 ಫೆಬ್ರವರಿ 2011
ಕಾಡುವ ಜಾತ್ರೆ. . !
ಕನ್ನಡ ಹಬ್ಬ ಈಗ ಆರಂಭವಾಗತೊಡಗಿದೆ.ಪ್ರತೀ ತಾಲೂಕುಗಳಲ್ಲೂ ಕನ್ನಡದ ಜಾತ್ರೆ ನಡೆದಿದೆ , ನಡೆಯುತ್ತಿದೆ. ಈಗ ನಾಡಿನ ದೊಡ್ಡ ಹಬ್ಬಕ್ಕೆ ಸಿದ್ದತೆ ನಡೆಯುತ್ತಲೇ ಇದೆ. ಪ್ರತೀ ಬಾರಿಯಂತೆ ಈ ಬಾರಿಯೂ ಕನ್ನಡದ ಜಾತ್ರೆಯ ವೇಳೆಗೆ ಏನಾದರೊಂದು ಅವಸ್ವರ ಇದ್ದೇ ಇರುತ್ತದೆ ಎಂದು ಮೊನ್ನೆ ನಾವು ಮಾತನಾಡುತ್ತಿದ್ದೆವು. ಇದುವರೆಗಿನ ಒಂದೇ ಒಂದು ಕನ್ನಡ ಜಾತ್ರೆಯಲ್ಲಿ ನೆಗೆಟಿವ್ ಅಂಶಗಳು ಹೆಚ್ಚು ಹೈಲೈಟ್ ಆಗದೇ ಇದ್ದದ್ದು ಇದೆಯಾ?. ಬಹುಶ: ಇಲ್ಲ. ಇದ್ಯಾಕೆ ಹೀಗೆ?. ಯಾಕೆ ಅದೇ ಅಂಶಗಳು ಹೆಚ್ಚು ಫೋಕಸ್ ಆಗುತ್ತೆ?. ಬಹುಶ: ನಮ್ಮ ಮನಸ್ಥಿತಿಯೇ ಇದಕ್ಕೆ ಕಾರಣ ಅನ್ನೋ ದಾರಿಯ ಕಡೆಗೆ ಕೊನೆಗೆ ಹೆಜ್ಜೆ ಹಾಕಿದೆವು.
ತಾಲೂಕು ಮಟ್ಟದ ಕನ್ನಡ ಜಾತ್ರೆಯಲ್ಲೂ ಇದೇ ಕಾಣುತ್ತದೆ. ಇಲ್ಲೂ ವರ್ಗ , ಜಾತಿ , ಅಂತಸ್ತು, ವೈಯಕ್ತಿಕ ವರ್ಚಸ್ಸು ಇದೆಲ್ಲಾ ಪರಿಗಣನೆಯಾಗುವುದರ ಜೊತೆಗೆ ಗ್ರೂಪಿಸಂ ಕೂಡಾ ಇದೆ. ಇಲ್ಲೇ ಇಷ್ಟು ಗುಂಪುಗಾರಿಕೆ ನಡೀತಿರಬೇಕಾದರೆ ರಾಜ್ಯಮಟ್ಟದಲ್ಲಿ ಇದೆಲ್ಲಾ ಇಲ್ಲದೇ ಇರೋದಿಕ್ಕಾಗುತ್ತಾ ಅಂತ ನಮ್ಮಲ್ಲೇ ಇನ್ನೊಂದು ಪ್ರಶ್ನೆ ಎದ್ದಿತು.ಅದೂ ಹೌದು ಬಿಡಿ. ಅದಲ್ಲಾ ಇರಲಿ ಇನ್ನೂ ಇದೆ , ಅಲ್ಲಿ ಊಟ ಸರಿ ಇಲ್ಲ , ಮಲಕ್ಕೊಳ್ಳೋಕೆ ಹಾಸಿಗೆ ಇಲ್ಲ , ಇಂತಹದ್ದೆಲ್ಲಾ ಚಿಕ್ಕ ಚಿಕ್ಕ ವಿಷಯಗಳೂ ಕೆಲವೊಮ್ಮೆ ಫೋಕಸ್ ಆಗುವುದೂ ಇದೆ.ಅದೇ ವೇಳೆ ಅಲ್ಲೇ ಆ ಕಡೆಗಿನ ವೇದಿಕೆಯಲ್ಲಿ ಒಂದೊಳ್ಳೆ ವಿಚಾರ ಇರುತ್ತೆ ಅದಕ್ಕೆ ಬೆಳಕೇ ಬರೋದಿಲ್ಲ. ಒಂದರ್ಥದಲ್ಲಿ ನಮಗೆ ಅದೇ ವಿಚಾರಗಳು ಇಷ್ಟವಾಗುತ್ತೆ.ಅದಕ್ಕಾಗೇ ಅಲ್ಲವೇ ನಮ್ಮಲ್ಲಿ ಬರೋ ಕನ್ನಡ ಧಾರವಾಹಿಗಳ ಪೈಕಿ ಹುಳುಕು , ಹಲ್ಲೆ ,ಮನೆಯೊಳಗಿನ ಕದನ ಇಷ್ಟವಾಗೋದು. ಅಂದರೆ ನಮ್ಮ ಮನಸ್ಥಿತಿ ಅಲ್ಲಿನ ನೆಗೆಟಿವ್ ಅಂಶಗಳತ್ತಲೇ ಸೆಳೆದುಕೊಳ್ಳುತ್ತೆ.ಹಾಗಾಗೇ ಕನ್ನಡ ಜಾತ್ರೆಗಳ ನೆಗೆಟಿವ್ ಅಂಶಗಳೇ ಹೆಚ್ಚು ಪ್ರತಿಫಲನವಾಗುತ್ತೆ.
ಆದರೆ ಇದು ನಮ್ಮಲ್ಲಿ ಮಾತ್ರಾ. ಅದೇ ಪಕ್ಕದ ಕೇರಳದಲ್ಲಿ ಹಾಗಿಲ್ಲ.ಅಲ್ಲಿನ ಜನ ಇಂತಹ ಸಾಂಸ್ಕೃತಿಕ ಉತ್ಸವಗಳು, ಕಲಾಪ್ರಾಕಾರಗಳು, ಸಾಹಿತ್ಯ ವಿವಾರಗಳಲ್ಲಿ ಗುಂಪುಗಾರಿಕೆ ಮಾಡೋಲ್ಲ.ಆತ ಯಾರೇ ಇರಲಿ ರಾಜಕೀಯ ರಹಿತವಾಗಿ ಎಲ್ಲರೂ ದುಡಿಯುತ್ತಾರೆ. ಹೇಗೆ ಬೇಕೋ ಹಾಗೆ ಆ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುತ್ತಾರೆ. ಅದು ಮಾತ್ರಾ ಅಲ್ಲ, ನೋಡಿ ನಮ್ಮಲ್ಲಿ ಎಷ್ಟು ಗಡಿ ಸಮಸ್ಯೆಗಳು ಅತ್ತ ಬೆಳಗಾವಿ , ಇತ್ತ ಕಾಸರಗೋಡು , ಅಲ್ಲಿ ಕಾವೇರಿ ಇಲ್ಲಿ ಕೃಷ್ಣಾ . . . ಹೀಗೇ ಒಂದೇ ದೇಶ , ಹಲವು ರಾಜ್ಯ ನೂರಾರು ಸಮಸ್ಯೆ. ಅದಕ್ಕಾಗಿ ಹೀಗೇ ಭಾಷಾವಾರು ಪ್ರಾಂತ ಮಾಡುವ ಬದಲು ಇಡೀ ದೇಶ ೪ ಭಾಗಗಳಾಗಿ ಆಡಳಿತ ನಡೆಸಿದ್ದರೆ ಚೆನ್ನಾಗಿತ್ತು.ಯಾವುದೇ ಭಾಷೆ , ರಾಜ್ಯಕ್ಕಾಗಿ ಜಗಳವೇ ಇರುತ್ತಿರಲಿಲ್ಲ. ಹಾಗೊಂದು ಅಂಬೋಣ ಬಿಡಿ.
ಅಷ್ಟಕ್ಕೂ ಈ ಬಾರಿಯ ಸಾಹಿತ್ಯ ಜಾತ್ರೆಯಲ್ಲಿ ಏನೇನೆಲ್ಲಾ ಅಸಮಾಧನಗಳು ಹೊರಬರುತ್ತೋ , ಯಾವ್ಯಾವ ಚಾನೆಲ್ಲಿನವರು , ಯಾವ್ಯಾವ ಪೇಪರಿನವರು ಹೇಗೆ ಕವರೇಜ್ ಮಾಡುತ್ತಾರೋ , ಯಾರ್‍ಯಾರು ಬಂಡಾಯ ಏಳೂತ್ತಾರೋ , ಯಾರ್‍ಯಾರ ಅಪಸ್ವರಕ್ಕೆ ಬೆಲೆ ಬರುತ್ತೋ ನೋಡಬೇಕು. ಅಷ್ಟಕ್ಕೂ ಈ ಅಪಸ್ವರ ತೆಗೆಯೋದು ಪ್ರಚಾರಕ್ಕಾಗಿಯೋ ಏನೋ?. ಅದನ್ನು ಪ್ರಚಾರ ಮಾಡೋವವರು ನೋಡಿಕೊಳ್ಳಬೇಕು.
ಯಾಕಂದ್ರೆ ಇತ್ತೀಚೆಗೆ ಮೂಡಬಿದ್ರೆಯ ಸಾಹಿತ್ಯ ಜಾತ್ರೆಯಲ್ಲಿ ಅಂತಹದ್ದೇ ಒಂದು ಇಶ್ಯೂ ಮಾಡಲು ಪ್ರಯತ್ನ ಪಟ್ಟಿದ್ದರು. ಯಾರು ಗೊತ್ತಾ?. ಪ್ರಚಾರ ಮಾಡುವವರೇ..!, ಕಾರಣ ಗೊತ್ತಾ? ಮೂರು ದಿನ ಸುಮ್ಮನೆ ಕುಳಿತುಕೊಳ್ಳಬೇಕಲ್ಲ ಅಂತ, ಮತ್ತೆ ನಾಲ್ಕು ದಿನಕ್ಕೆ ಇದೇ ಇಶ್ಯೂ ಆಗುತ್ತಲ್ಲಾ ಅಂತ . ! ಅನ್ನೋದು ಹಲವರ ಅಭಿಮತ. ಕನ್ನಡಕ್ಕಾಗಿ ಒಂದೇ ಒಂದು ರೀತಿಯಲ್ಲೂ ದುಡಿಯದ ಜನ ಕನ್ನಡಕ್ಕಾಗಿ ದುಡಿಯುವ ಜನರ ಬಗ್ಗೆ ಯಾಕೆ ಹಾಗೆ ಮಾಡುತ್ತಾರೆ ಗೊತ್ತಿಲ್ಲ. ಹುಳುಕುಗಳು ಇರಬಹುದು ಇಲ್ಲಾ ಅಂತಲ್ಲ , ಆದರೆ ಹಾಗೆ ದುಡಿಯುವುದು ಕೂಡಾ ದೊಡ್ಡ ಕೆಲಸವೇ.
ಈ ಬಾರಿ ಒಳ್ಳೆಯದನ್ನೇ ಕೇಳೋಣ , ಒಳ್ಳೆಯದನ್ನೇ ಓದೋಣ. ಸಾಹಿತ್ಯಕ್ಕಾಗಿ , ಕನ್ನಡಕ್ಕಾಗಿ ಈ ಅಕ್ಷರಕ್ಕಾಗಿ.

16 ಜನವರಿ 2011
ಇವನಿಗೆ ಹಳ್ಳಿ ಇಷ್ಟ ಯಾಕಂತೆ ?
ಮೊನ್ನೆ ಪೆಟ್ರೋಲ್ ಬೆಲೆ ಹೆಚ್ಚಾಗುತ್ತೆ ಅಂದಾಗಲೂ ಆತ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಮೊನ್ನೆ ಮೊನ್ನೆ ಹಾಲಿನ ದರ ಸ್ವಲ್ಪ ಏರಿಕೆಯಾಗಿತ್ತು , ಈಗ ಇನ್ನೂ ಏರಿಕೆಯಾಗುತ್ತಂತೆ ಅಂದಾಗಲೂ ಆತ ಆ ಬಗ್ಗೆ ಚಕಾರವನ್ನೇ ಎತ್ತಿಲ್ಲ.ಎಲ್ಲದಕ್ಕೂ ಆತ ಹೇಳುತ್ತಿದ್ದುದು, “ನನ್ನ ಹಳ್ಳಿ ನಂಜೊತೆಗಿದೆ” ಅಂತ.
ಇದು ಏರಿಕೆಯ ಕಾಲಘಟ್ಟ. ಮೊನ್ನೆ ಮೊನ್ನೆ ಹಾಲಿನ ದರ ಏರಿಕೆಯಾಗಿತ್ತು , ಈಗ ಮತ್ತೆ ಪೆಟ್ರೋಲ್ ದರ ಏರಿಕೆಯಾಗಿದೆ , ತರಕಾರಿ ಬೆಲೆ ಬಗ್ಗೆ ಮಾತಾಡೋ ಹಾಗಿಲ್ಲ , ನೀರುಳ್ಳಿ ಕಣ್ಣುರಿ ತರಿಸುತ್ತೆ , ಅಕ್ಕಿ ಬೆಲೆಯೂ ಏರು ಹಾದಿಯಲ್ಲಿದೆ.ಎಲ್ಲವೂ ಕೈಗೆಟಕದ ಹಾಗಿದೆ. ನಗರದಲ್ಲಿ ಸಾಮಾನ್ಯ ಸಂಬಳ ಪಡೆಯೋ ನೌಕರನ ತಲೆಯೂ ಇದೆಲ್ಲದರ ಜೊತೆಗೆ ಬಿಸಿಯಾಗುತ್ತಿದೆ.ತಿಂಗಳ ಅಂತ್ಯಕ್ಕೆ ಲೆಕ್ಕ ಹಾಕಿದಾಗ , ಮನೆ ಬಾಡಿಗೆ ,ಗ್ಯಾಸ್‌ಗೆ ,ತರಕಾರಿ , ದಿನಸಿ , ಇದರ ಜೊತೆಗೆ ದೈನಂದಿನ ಖರ್ಚು ಎಲ್ಲಾ ಲೆಕ್ಕ ಹಾಕಿದಾಗ ಈ ಚಳಿಯಲ್ಲೂ ಮೈ ಬೆವರುತ್ತದೆ. ಯೋಚನೆ ಇನ್ನೂ 5 ವರ್ಷಗಳ ನಂತರಕ್ಕೆ ಓಡುತ್ತದೆ.ಅಷ್ಟು ದೂರಕ್ಕೆ ನೆನಪಿಸಿಕೊಳ್ಳಲಾಗುವುದಿಲ್ಲ ಎನ್ನುತ್ತಾನೆ.ಈ ನಡುವೆ ಇನ್ನೊಮ್ಮೆ ಪೆಟ್ರೋಲ್ ಬೆಲೆ ಏರಿಕೆಯಾಗಿದೆ.ಕಚೇರಿಗೆ ದಿನವೂ ಮೋಟಾರ್ ಬೈಕಲ್ಲೋ , ಕಾರಲ್ಲೋ ಹೋಗಿಯೇ ರೂಢಿ.ಈಗ ಪೆಟ್ರೋಲ್ ಬೆಲೆ ಏರಿದೆ ಅಂತ ಅದನ್ನು ನಿಲ್ಲಿಸಲಾಗುತ್ತೆಯೇ?. ಅದು ಇನ್ನೊಂದು ತಲೆ ಬಿಸಿ. ಈ ನಡುವೆ ಹಾಲಿಗೂ ಇನ್ನೂ ಬೆಲೆ ಏರುತ್ತಂತೆ. ರೈತರಿಗೆ ಕೊಡಲು, ಅಂತಾರೆ ಅವರು.ಅದಕ್ಕೂ ಮೊನ್ನೆ ಟಿವಿ ಚಾನೆಲ್ಲಿನಲ್ಲಿ ಚರ್ಚೆಯಾಗುತ್ತಿತ್ತು.ರೈತರ ಹೆಸರಲ್ಲಿ ಕಂಪನಿ ಹಣ ಮಾಡುತ್ತಿದೆ , ಸರಕಾರ ಏದಾರೂ ರೈತರಿಗೆ ಮಾಡಬೇಕು , ಗ್ರಾಹಕ ವಲಯ ದೊಡ್ಡದಿದೆ ಅವರಿಗೂ ಹೊರೆಯಲ್ಲವೇ ಅಂತ ಹೇಳುತ್ತಿದ್ದರು.ಆದರೆ ಅವರಿಗೇನು ಗೊತ್ತು ಈ ರೈತರ ಕಷ್ಠ.ಒಂದು ದಿನ ಹಾಲು ತಡವಾದರೆ ಬೊಬ್ಬಿಟ್ಟು ಗೊತ್ತೇ ವಿನ: ,ಬೆಳಗ್ಗೆ ನಾಲ್ಕೋ ಐದೋ ಗಂಟೆಗೆ ಎದ್ದು ಹಸುಗಳಿಗೆ ತಿನ್ನಲು ಕೊಟ್ಟು ಹಾಲು ಕರೆದು ಎರಡೋ ಮೂರೋ ಕಿಲೋ ಮೀಟರ್ ದೂರ ನಡೆದು ಹೋಗಿ ಸಹಕಾರ ಸಂಘಗಳಿಗೆ ಹಾಲು ಹಾಕಿ ಅಲ್ಲಿನ ಸಿಬ್ಬಂದಿಯ ಕಿರಿ ಕಿರಿ ಕೇಳಿ ಮನೆಗೆ ಬರೋ ಆ ಹೈನುಗಾರನ ಪಾಡು ಅವನಿಗೇ ಗೊತ್ತು.
ಈಗ ಅದಲ್ಲ , ಅಲ್ಲಿ ಬೆಲೆ ಏರಿಕೆಯ ಬಗ್ಗೆ ತಲೆಗೊಬ್ಬರಂತೆ ಮಾತಾಡೋವಾಗ ಆತ ಇಲ್ಲಿ ಹೇಳುತ್ತಾನೆ , ನನಗೇನು ಬೆಲೆ ಏರಿಕೆಯಾಗಲಿ. ಯಾವುದು ಪೆಟ್ರೋಲ್ ಬೆಲೆ ಏರಿಕೆಯಾ ?. ನನಗೇನು ಚಿಂತೆ , ದಿನಕ್ಕೊಮ್ಮೆ ಸ್ವಲ್ಪ ರಿಲ್ಯಾಕ್ಸ್ ಇರಲಿ ಅಂತ ಪೇಟೆಗೆ ಹೋಗುತ್ತಿದ್ದೆ , ಇನ್ನು ಹೋಗೋದಿಲ್ಲ. ಹೊಲಕ್ಕೆ ಒಂದು ಸುತ್ತು ಹೆಚ್ಚು ಹೊಡೀತೇನೆ. ಇನ್ನು ಹಾಲಿನ ಬಗ್ಗೆ ತಲೇನೇ ಕೆಡಿಸಿಕೊಳ್ಳೋದಿಲ್ಲ , ನನ್ನದೇ ಹಸು ಇದೆ. ನಾನೇ ಇರಿಸಿಕೊಳ್ಳುತ್ತೇನೆ. ಗ್ಯಾಸ್ ನಮಗೆ ಬೇಡವೇ ಬೇಡ ಗೋಬರ್ ಗ್ಯಾಸ್ ಇದೆ. ಬೆಳಗ್ಗೆ ಬಿಸಿ ನೀರು ಸ್ನಾನ ಮಾಡಲು ಗ್ಯಾಸ್ , ಕರೆಂಟ್ ನೋಡೋದೇ ಇಲ್ಲ. ನಮ್ಮ ತೋಟದಲ್ಲಿ ಸಿಗೋ ಕಸ ಕಡ್ಡಿಯೇ ಸಾಕು , ಇನ್ನು ತರಕಾರಿ ಬಗ್ಗೆ ಹೇಳೋದಾದ್ರೆ , ಶುದ್ದವಾದದ್ದು , ರಾಸಾಯನಿಕ ಸಿಂಪಡಿಸದೇ ಇದ್ದದ್ದು ನಾನೇ ನನ್ನ
ಹೊಲದಲ್ಲಿ ಬೆಳೆಯುತ್ತೇನೆ ,ಇನ್ನು ಅಕ್ಕಿಯೂ ನಾನೇ ಬೆಳೀತೇನೆ. ಹಣಕ್ಕಾಗಿ , ರಬ್ಬರ್ ಇದೆ , ಅಡಿಕೆ ಇದೆ.ರಬ್ಬರ್ ರೇಟಂತೂ ೨೦೦ ರ ಗಡಿ ದಾಟಿದೆ.ಯಾರದ್ದೂ ಕಿರಿಕಿರಿ ಇಲ್ಲ. ಈಗ ಬೇಕಾದ್ರೂ ನಾನು ಮಲಗಿ ನಿದ್ರಿಸುತ್ತೇನೆ.ಕೇಳೋರು ಯಾರೂ ಇಲ್ಲ.ಅದೆಲ್ಲದಕ್ಕೂ ಮುಖ್ಯವಾಗಿ ಶುದ್ದ ಗಾಳಿ , ನೀರು ಸಿಗುತ್ತೆ ಅನ್ನೋದೇ ಇವನಿಗೆ ಖುಷಿ.

ಆದ್ರೆ ಇವನಿಗೂ ಒಂದು ಸಮಸ್ಯೆ ಇದೆಯಂತೆ, ತೋಟದ ಕೆಲಸ ಮಾಡೋಕೆ ಜನ ಸಿಕ್ತಾಇಲ್ಲ , ಆದ್ರೆ ಇದಕ್ಕೆ ಈಗ ಯೋಚನೆ ಮಾಡಿದ್ದಾನೆ , ಎಲ್ಲಕ್ಕೂ ಯಂತ್ರ ಬಳಸಿಕೊಳ್ತಾನೆ. ಇನ್ನೊಂದು ಸಮಸ್ಯೆ ಅಂದ್ರೆ ಕಾಡು ಪ್ರಾಣಿಗಳದ್ದು. ತೋಟಕ್ಕೆ ಬಂದ್ರೆ ಎಲ್ಲವನ್ನೂ ನಾಶ ಮಾಡಿ ಹಾಕುತ್ತದೆ. ಅದಕ್ಕಾಗಿ ಸಾಕಷ್ಟು ಎಚ್ಚರ ವಹಿಸಿಕೊಳ್ತಾನೆ , ಆದ್ರೂ ಮಂಗಗಳು ಮಾತ್ರಾ ಬಂದೇ ಬರ್ತಾವೆ ಅಂತಾನೆ ಆತ.
ಇದೇ ಒಂದೆರಡು ಸಮಸ್ಯೆ ಮಾತ್ರಾ ಇದ್ದು ಅಷ್ಟೂ ಒಳ್ಳೆಯ ವಾತಾವರಣ ಇರುವಾಗ ನಾನ್ಯಾಕೆ ನನ್ನ ಹಳ್ಳಿಯನ್ನು ಹೀಯಾಳಿಸಲಿ , ಅದು ಯಾವತ್ತೂ ನಂಜೊತೆನೇ ಇದೆ.ಅದಕ್ಕಾಗಿ ನಾನೇನಾದರೂ ಮಾಡಬೇಕು.ಇಲ್ಲಿರೋ ಜನರಿಗೆ ಏನಾದರೂ ಮಾಡಬೇಕು. ಅಂತ ಆತ ಯಾವಾಗಲೂ ಹೇಳುತ್ತಾ ಇರುತ್ತಾನೆ. ಈ ಬೆಲೆ ಏರಿಕೆಯ ಮಾತು ಬಂದಾಗಲೆಲ್ಲಾ ಆತ ನಿರುಮ್ಮಲವಾಗಿರುತ್ತಾನೆ.

15 ಜನವರಿ 2011
ಇವನಿಗಾರು ಗತಿ ?
ಏನು ಕತೆ ಸ್ವಾಮಿ?. ಈ ತೆಂಗಿನ ಕಾಯಿಗೆ ರೇಟು?. ನಿನ್ನೆ ಹತ್ತು ರುಪಾಯಿ ಇತ್ತು ಇವತ್ತು ನೋಡಿದ್ರೆ ಹದಿನೈದಾಗಿದೆ. ! ಏನು ಕತೆ ಇದು ? ಅಂತ ಗ್ರಾಹಕ ಬೊಬ್ಬಿಡುತ್ತಾನೆ.
ಇತ್ತ ರೈತ ಹೇಳ್ತಾನೆ ಏನ್ ಸ್ವಾಮಿ ತೆಂಗಿನ ಕಾಯಿಗೆ ರೇಟು ಏರ್ತಾನೆ ಇದೆ.ಆದ್ರೆ ನಮ್ಮಲ್ಲಿ ತೆಂಗಿನ ಕಾಯಿನೇ ಇಲ್ಲ. ಏನು ಅವಸ್ಥೆನೋ ಏನೋ ಮಂಗಗಳೆಲ್ಲಾ ಎಳೆ ಕಾಯನ್ನೇ ತೆಗೆದು ಹಾಳು ಮಾಡ್ತಾವೆ.ಕಾಯಿನೇ ಸಿಗೋದಿಲ್ಲ ಅಂತ ಆತ ತಲೆ ಮೇಲೆ ಕೈ ಹಿಡ್ಕಳ್ತಾನೆ.
ಆಗ ಅಲ್ಲೊಬ್ಬ ಹೇಳ್ತಾನೆ, ನೋಡಣ್ಣ ನೀನ್ ಹಂಗೆ ಕೂತ್ರೆ ಆಗಾಕಿಲ್ಲ , ಮಂಗ ಬರೋ ಹಾದಿಲಿ ಒಂದು ಬಾಳೆ ಗೊನೆ ಇಡು. ಅದ್ಕೆ ಒಂಚೂರು ವಿಷಾನೂ ಹಾಕಿಡು ಅದು ಮತ್ತೆ ಬರೋದೇ ಇಲ್ಲ ಅಂತಾನೆ ಆತ. ವಿಚಾರ ಇರೋದೇ ಇಲ್ಲಿ. ಮಂಗ ಬರುತ್ತೆ ಅಂತ ಆ ರೈತ ವಿಷ ಇಕ್ಕಿ ಆ ಮಂಗಗಳನ್ನು ಕೊಲ್ತಾನೆ. ಆ ನಂತ್ರ ಬೆಳೆನೂ ಸಿಗುತ್ತೆ , ಬೆಲೆನೂ ಇರುತ್ತೆ.
ಮೊನ್ನೆ ಮೊನ್ನೆ ಅಂತಹದ್ದೇ ಇನ್ನೊಂದು ಘಟನೆ ಇತ್ತು ನೋಡಿ ,ಅಲ್ಲೊಂದು ಆನೆ ಕರೆಂಟ್ ಶಾಕ್‌ನಿಂದ ಸತ್ತೇ ಹೋಯಿತಂತೆ.ಎಂತಾ ದುರಂತ ಮಾರಾಯ್ರೆ. ಹೀಗಾಗಬಾರದಿತ್ತು.
ನಿಜಕ್ಕೂ ಹಾಗಾಗಬಾರದಿತ್ತು.ಅದೊಂದು ಕಾಡುಪ್ರಾಣಿ.ಜೀವಜಾಲದ ಕೊಂಡಿಗಳಲ್ಲಿ ಅದೂ ಒಂದು. ಹೀಗೇ ಒಂದೋಂದೇ ಪ್ರಾಣಿ ಸತ್ತರೆ ಜೀವಜಾಲದ ಕೊಂಡಿ ತಪ್ಪೋದ್ರಲ್ಲಿ ಸಂಶಯವೇ ಇಲ್ಲ. ಹೀಗಾಗಿ ಅಲ್ಲಿ ವಿದ್ಯುತ್ ಹರಿಸಿದವನಿಗೆ ಶಿಕ್ಷೆ ಆಗಲೇ ಬೇಕು ಅಂತ ಮನಸ್ಸಿನೊಳಗೇ ಹೇಳಲೇಬೇಕಾಗುತ್ತದೆ.
ಆದರೆ ಇದೆಲ್ಲಾ ಒಂದು ಮುಖ. ಅದರ ಹಿಂದೆ ಇನ್ನೊಂದು ಮುಖ ಇದೆ.
ಅಲ್ಲಿ ಯಾಕಾಗಿ ವಿದ್ಯುತ್ ಹರಿಸಲಾಗಿತ್ತು?.ಅಲ್ಲೂ ಕೂಡಾ ಸಮಸ್ಯೆ ಇದೇ ಆನೆಯದ್ದು. ಹೊಲಗಳಿಗೆ ನುಗ್ಗಿ ಬೆಳೆ ನಾಶ ಮಾಡೋವಾಗ ಅಷ್ಟೂ ಪ್ರೀತಿಯಿಂದ ಬೆಳೆದ ಬೆಳೆ ನಾಶವಾಗೋವಾಗ ಯಾರು ತಾನೆ ಸುಮ್ಮನಿರ್ತಾನೆ ಹೇಳಿ. ಹಾಗೆ ಆತ ಅಲ್ಲೂ ಒಂದು ರಕ್ಷಣೆಗೆ ಮುಂದಾದ. ಆನೆ ಜೀವ ತೆತ್ತಿತು.
ಎಲ್ಲಾ ಕಡೆ ರೈತನಿಗೆ ಇರೋ ಸಮಸ್ಯೆ ಇದೆ.ಸರಕಾರ ಏನೋ ರೈತರ ಪರ ಅಂತೆಲ್ಲಾ ಹೇಳುತ್ತಿದ್ದರೂ ಅವನ ಗೋಳು ಮಾತ್ರಾ ಮುಗಿಯೋದೇ ಇಲ್ಲ.ಒಂದು ಕಡೆ ಬೆಳೆ ಬೆಳೆಯಲು ಅದೆಷ್ಟೋ ವಿಘ್ನಗಳು.ಬೆಳೆ ಬಂದರೆ ಮಾರಾಟದ ಸಮಸ್ಯೆ. ಅದೆಲ್ಲಾ ಆಗೋ ಹೊತ್ತಿಗೆ ಆತ ಸುಸ್ತೋ ಸುಸ್ತು. ಹೊಲದಲ್ಲಿ ಹುಲುಸಾಗಿ ಪೈರು ಬಂದಿದೆ ಅಂದ ಕೂಡಲೇ ಆನೆಗಳ ಹಿಂಡು ಕಾಲಿಡುತ್ತದೆ.ಒಮ್ಮೆ ಆನೆ ನುಗ್ಗಿದರೆ ಅದಷ್ಟೂ ಬೆಳೆಯನ್ನು ಆಪೋಶನ ತೆಗೆದುಕೊಳ್ಳಯುತ್ತದೆ. ಹಾಗಾಗಿ ಆ ಬೆಳೆಯ ರಕ್ಷಣೆ ಆಗಲೇಬೇಕು. ಅದು ಹೇಗೆ?, ಆನೆಗೆ ಸರಿಯಾದ ವ್ಯವಸ್ಥೆ ಮಾಡಿ ಅಂತ ಸರಕಾರಕ್ಕೆ ಹೇಳಿದರೂ ಕೇಳಿಸೋದೇ ಇಲ್ಲ. ಹಾಗಾದ್ರೆ ಇನ್ನೇನು ದಾರಿ ಅಂತ ಯೋಚಿಸುವಾಗ ,ಆತನಿಗೆ ಕಾಣುವ ಸುಲಭ ದಾರಿಯನ್ನು ಆತ ಆಯ್ಕೆ ಮಾಡುತ್ತಾನೆ. ಹಾಗಾಗಿ ಸರಕಾರವೇ ರೈತರ ಇಂತಹ ಸಮಸ್ಯೆ ನಿವಾರಣೆ ವ್ಯವಸ್ಥೆ ಮಾಡಬೇಕೇ ವಿನ: ಇನ್ಯಾವುದೇ ಅನ್ಯ ದಾರಿ ಇಲ್ಲ. ಮಂಗಗಳದ್ದೂ ಅದೇ ಕಾಟ. ಕಾಡಿನ ಆಹಾರವನ್ನು ಬಿಟ್ಟು ನಾಡಿಗೆ ಬಂದದ್ದೇ ತಡ , ಎಳ ತೆಂಗಿನಕಾಯಿ , ಅಡಿಕೆ ಹೀಗೇ ಎಲ್ಲವನ್ನೂ ನಾಶ ಮಾಡಿ ಓಡಿ ಬಿಡುತ್ತದೆ. ಅದನ್ನು ತಡೆಯೋದಾದರೂ ಹೇಗೆ?. ಹಾಗಾಗಿ ರೈತರು ಬೆಳೆ ರಕ್ಷಣೆಗೆ ಏನಾದರೊಂದು ದಾರಿ ನೋಡಬೇಕಾಗುವುದು ಅನಿವಾರ್ಯ. ಆಗ ಇಂತಹ ದುರಂತಗಳು ನಡೆಯುತ್ತದೆ.

02 ಜನವರಿ 2011
ಬಂದಿದೆ 2011
ಇನ್ನೊಂದು ವರ್ಷ ಇದೆ. 2012 ಬರಲು.
ಪ್ರತೀ ವರ್ಷವೂ ಡಿಸೆಂಬರ್ 31 ರ ನಂತರ ಕಾತರದ ಕ್ಷಣ.ಒಂದು ಮೆಸೇಜ್ ಮಾಡಲು , ಒಂದು ಮೈಲ್ ಮಾಡಲು , ಆ ದಿನ ಫೋನು ಮಾಡಿದ ಗೆಳೆಯರಿಗೆ ಶುಭಾಶಯ ಹೇಳಲು.ಇದಿಷ್ಟೇ. ಮರುದಿನ ಯಥಾಪ್ರಕಾರ.ಅದೇ ಸಮಯ , ಅದೇ ಹಗಲು ಅದೇ ರಾತ್ರಿ. ಅದೇ ಟ್ರಾಫಿಕ್ ಅದೇ ಕೆಲಸ . . . ಎಲ್ಲವೂ ಅದೇ.ಹೊಸತು ಏನೂ ಇಲ್ಲ. ಆದರೂ ಮತ್ತೊಂದು ವರ್ಷ ಅಂದಾಗ ಅಲ್ಲೇನೋ ಒಂದು ಹೊಸದು ಹುಡುಕುವ ಕಾಯಕ.
ವರ್ಷ ಮುಗಿದಂತೆ , ಸಮಯ ಕಳೆದಂತೆ ,ನಿಮಿಷ ಮುಗಿದಂತೆ ನಮ್ಮ ಆಯಸ್ಸೂ ಮುಗಿಯುತ್ತಿದೆ. ಸಾವು ಹತ್ತಿರವಾಗುತ್ತದೆ. ಅಂದರೆ ಉಸಿರು ನಿಲ್ಲುವ ಹೊತ್ತು ಹತ್ತಿರವಾಗುತ್ತಿದೆ ಅಂತಾನೇ ಅರ್ಥ.ಹಾಗೆಂದು ಅದರದ್ದೇ ಧ್ಯಾನ ಮಾಡಿಕೊಂಡಿರುವುದಕ್ಕೆ ಆಗುವುದಿಲ್ಲ. ಆ ದಿನ ಬರುವವರೆಗೂ ಸಾಧನೆಗಳನ್ನು ನಿಲ್ಲಿಸಲಾಗುವುದಿಲ್ಲ, ಜವಾಬ್ದಾರಿಯ ಹೊರೆಯನ್ನು ಇಳಿಸುವುದಕ್ಕಾಗುವುದಿಲ್ಲ.ಮಾಡಲೇಬೇಕು. ಸವಾಲುಗಳನ್ನು ಎದುರಿಸಲೇಬೇಕು. ಅದು ನಿರಂತರ.ಹಾಗಿದ್ದರೂ ಎಲ್ಲಾದರೂ ಒಂದು ಕಡೆ ಒಮ್ಮೆ ನಿಂತು ಬಂದ ದಾರಿಯನ್ನು ಒಮ್ಮೆ ಅವಲೋಕಿಸಬೇಡವೇ.ಅದಕ್ಕೆ ಈ ಡಿಸೆಂಬರ್ 31 ಒಂದು ಪಕ್ಷವಾದ ಕಾಲವಾಗುತ್ತದೆ. ಹಾಗೆ ಹಿಂತಿರುಗಿ ನೋಡಿದಾಗ ಅದೆಷ್ಟೂ ಸಿಹಿ ಕಹಿ ಅನುಭಗಳ ಮೂಟೆ ಕಾಣುತ್ತದೆ. ಅದೆಲ್ಲವೂ ಮುಂದಿನ ಕಾಲಕ್ಕೆ ಒಂದು ಪಾಠವಾಗುತ್ತದೆ. ತಪ್ಪುಗಳನ್ನು ತಿದ್ದಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಒಂದಷ್ಟು ಹೊಸ ಸಂಕಲ್ಪಗಳನ್ನು ಮಾಡಿಕೊಳ್ಳುವುದಕ್ಕೂ ಅಲ್ಲೊಂದು ಅವಕಾಶ ಸಿಗುತ್ತದೆ. ಹಾಗೇ ಕ್ಯಾಲೆಂಡರ್ ಬದಲಾದಂತೆ ಅನುಭವದ ಮೂಟೆಗಳು ದೊಡ್ಡದಾಗುತ್ತಾ ಹೋಗುತ್ತದೆ. ಬುದ್ದಿ ಮಾಗುತ್ತಾ ಹೋಗುತ್ತದೆ , ದೇಹಕ್ಕೆ ಆಯಸ್ಸು ಹೆಚ್ಚಾಗುತ್ತಾ ಸಾಗುತ್ತದೆ. ಕಾಲಚಕ್ರ ತಿರುಗುತ್ತಲೇ ಸಾಗುತ್ತದೆ.
ಹಾಗಾಗಿ ಹೊಸವರ್ಷ ಅಂದರೆ ಅದೊಂದು ಕ್ಯಾಲೆಂಡರ್ ಬದಲಾವಣೆಯ ಸಮಯ. ಹೊಸ ಭರವಸೆಗಳನ್ನು ನಿರೀಕ್ಷೆಗಳನ್ನು ಇಟ್ಟುಕೊಳ್ಳುವ ಕಾಲ ಅದಲ್ಲ. ಭೂತಕಾಲವನ್ನು , ಅರ್ಥಾತ್ ಇತಿಹಾಸವನ್ನು ಅವಲೋಕಿಸಿ ಭವಿಷ್ಯ ಕಾಲವನ್ನು ನಿರ್ಧರಿಸುವ , ರೂಪಿಸುವ ಕಾಲ ಅದು. ಯಾಕೆಂದರೆ ಪ್ರತೀ ಕ್ಷಣ , ನಿಮಿಷ ನಿಮಿಷವೂ ನಮಗೆ ಹೊಸದೇ. ಮತ್ತೆ ಅದೇ ಸಮಯ ನಮಗೆ ಬೇಕೆಂದರೂ ಸಿಗದು. ಅದು ಯಾವತ್ತೂ ಹೊಸದೇ , ಮತ್ತೆ ಸಿಗದ ವಸ್ತು ಅದು.
ಹಾಗಾಗಿ ಪ್ರತೀ ಕ್ಷಣವೂ ನಮಗೆ ಹ್ಯಾಪೀ ನ್ಯೂ ಇಯರ್.
. . . . . . . . . . . . . . . .. . . . ..

29 ಡಿಸೆಂಬರ್ 2010
ಹಳ್ಳಿ ಚುನಾವಣೆ
ಈಗಂತೂ ಹಳ್ಳಿಯಲ್ಲಿ ಸ್ವಲ್ಪ ನೆಮ್ಮದಿ. ಮೈಕಾಸುರುನ ಅಬ್ಬರ ಇಲ್ಲ.ಕಣ್ಣಿಗೆ ಕುಕ್ಕುವ ಬ್ಯಾನರುಗಳು ಇಲ್ಲವೇ ಇಲ್ಲ.ರಸ್ತೆಯಲ್ಲಿ ಚಿತ್ತಾರಗಳು ಕಾಣೋದೇ ಇಲ್ಲ. ಹೀಗಾಗಿ ಈಗ ಚುನಾವಣೆ ನಡೆಯುತ್ತೋ ಇಲ್ಲವೋ ಅಂತಾನೇ ಗೊತ್ತಾಗಲ್ಲ. ಒಳ್ಳೇದೇ ಆಯ್ತು ಬಿಡಿ ಅಂತ ರಸ್ತೆ ಬದಿಯಲ್ಲಿ ಒಂದಷ್ಟು ಜನ ಮಾತಾಡ್ತಾ ಇರಬೇಕಾದ್ರೆ ,ಅಲ್ಲಾರೀ , ಕೇರಳದಷ್ಟು ಇಲೆಕ್ಷನ್ ಅಬ್ಬರ ಇಲ್ಲಿ ಇಲ್ಲಾರೀ , ಇದೆಂತಾ ಇಲೆಕ್ಷನ್ ಬರೀ ಸಪ್ಪೆ ಸಪ್ಪೆ ಅನ್ನೋರೂ ಅದೇ ರಸ್ತೆ ಬದಿಯಲ್ಲಿ ಕಾಣ್ತಾರೆ.
ಅದೇನೇ ಇರ್‍ಲಿ. ಈಗಂತೂ ನಮ್ಮ ಮಟ್ಟಿಗೆ ಹೇಳೋದಾದ್ರೆ ಆಯೋಗ ಒಳ್ಳೆ ಕೆಲ್ಸನೇ ಮಾಡಿದೆ. ಚುನಾವಣೆ ಸೈಲೆಂಟ್. ಆದ್ರೆ ಈ ರಾಜಕಾರಣಿಗಳು , ರಾಜಕೀಯ ಪಕ್ಷಗಳು ಮಾತಗ್ರ ಬಿಡಬೇಕಲ್ಲ , ಮೀಡಿಯಾಗಳನ್ನು ಬಳಸಿಕೊಂಡು ಆರೋಪ , ಪ್ರತ್ಯಾರೋಪ. ಅಲ್ಲೆಲ್ಲಾದರು ಒಂದೆರಡು ರಾಜಕೀಯ ಚುನಾವಣಾ ಭಾಷಣ , ಅಲ್ಲೂ ಆ ಪಕ್ಷ ಈ ಪಕ್ಷವನ್ನು ದೂರೋದು , ಈ ಪಕ್ಷ ಆ ಪಕ್ಷವನ್ನು ದೂರೋದು. ಆ ನಂತ್ರ ಒಂದೆರಡು ರೋಡ್ ಶೋ. ಜೊತೆ ಜೊತೆಗೆ ಮನೆ ಮನೆ ಭೇಟಿ. ಆಗ ಜನ ಏನಾದ್ರೂ ಹೇಳೀದ್ರೆ ಅದು ಹಾಗಲ್ಲ ಹೀಗೆ. ಆ ಪಕ್ಷದ ಕ್ಯಾಂಡಿಡೇಟ್ ಸರಿ ಇಲ್ಲ. ನಮ್ಮವರೇ ಬೆಸ್ಟ್ ಯಾಕಂದ್ರೆ ಅವರು ಹೀಗೆ ಮಾಡಿದ್ದಾರೆ, ಆ ಪಕ್ಷ ದೊಡ್ಡ ಹೆಗ್ಗಣ, ಅಲ್ಲಿ ಇಷ್ಟು ತಿಂದಿದೆ ಇಲ್ಲಿ ತಿಂದಿದೆ , ಅವರು ಹಾಗೆ ಇವರು ಹೀಗೆ ಅಂತ ಮನೆಗೆ ಬಂದಿರೋ ಐದಾರು ಜನ ಒಬ್ಬರ ಹಿಂದೆ ಒಬ್ಬರಂತೆ ಮಾತಾಡ್ತಾರೆ. ಇಲ್ಲಿ ಮನೆಯಲ್ಲಿ ಮಾತನಾಡೋ ಒಬ್ಬ ವ್ಯಕ್ತಿಗೆ ಗೊಂದಲ. ಯಾಕಂದ್ರೆ ನಿನ್ನೆ ಪೇಪರಲ್ಲೂ ಅದು ಇತ್ತು , ಆ ಲೀಡರ್ ಹೀಗೆ ಹೇಳಿದ್ದಾನೆ. ನಾನು ಮೊನ್ನೆ ಅದೇ ಪೇಪರಲ್ಲಿ ಹಾಗೆ ಓದಿದ್ದು ಹೌದು ಅಂತ ಮನಸ್ಸಲ್ಲೇ ನೆನೆದು . ಓಕೆ ಓಕೆ ಅಂತಾನೆ. ಮರುದಿನ ಇನ್ನೊಂದು ಪಕ್ಷದ ಕಾರ್ಯಕರ್ತರು ಬಂದು ಇವರದ್ದು ಅದೇ ಕ್ಯಾಸೆಟ್. ಆದ್ರೆ ಅದು ಮಾತ್ರಾ ಬಿ ಸೈಡ್. ಆಗಲೂ ಮತ್ತೆ ಮತದಾರನಿಗೆ ಗೊಂದಲ. ಯಾಕಂದ್ರೆ ಪೇಪರು , ಟಿವಿ ನೋಡಿದ್ರೆ ಇದ್ಯಾವುದೂ ಅರ್ಥ ಆಗಲ್ಲ. ಒಂದೊಂದು ದಿನ ಒಂದೊಂದು ಥರಾ ಇರುತ್ತೆ.ಹಾಗಾಗಿ, ಯಾವುದಾದರೇನು ಒಂದಕ್ಕೆ ಒತ್ತಿದರೆ ಆಯ್ತು ಅಂತ ಹೋಗ್ತಾನೆ ಓಟು ಹಾಕಿ ಬರ್‍ತಾನೆ. ಇದು ಹಳ್ಳಿ ಕತೆ.
ಇಲ್ಲಿ ಅಭಿವೃದ್ದಿ ಬಗ್ಗೆ ಮಾತಾಡೋ ಹಾಗಿಲ್ಲ. ಎಲ್ಲಾನು ಆಗಿದೆ ಅಂತದೆ ಆಡಳಿತ ನಡೆಸಿದ ಪಕ್ಷ. ಇಲ್ಲಾ ಆಗಿಲ್ಲ ಅನ್ನುತ್ತೆ ವಿರೋಧ ಪಕ್ಷ.ಆಗಿದೆ ಬೇಕಿದ್ರೆ ನೋಡಿ ಅಂತಾರೆ ಆಡಳಿತ ಮಾಡಿರೋರು , ಹಾಗಿದ್ರೆ ತೋರ್‍ಸಿ ಅನ್ನುತ್ತೆ ವಿರೋಧ ಪಕ್ಷ.. . ಹೀಗೆ ಮಾತಿನ ಸಮರ ಮಾಧ್ಯಮದ ಮೂಲಕ ನಡೆಯುತ್ತೆ.ಎಲ್ಲೂ ಮುಖಾಮಿಖಿ ಆಗೋದೇ ಇಲ್ಲ. ಇದೆಲ್ಲಾ ಯಾವಾಗ ಚರ್ಚೆ ನಡೆಯೋದು ಗೊತ್ತಾ ಎಲೆಕ್ಷನ್ ಡಿಕ್ಲೇರ್ ಆಗಿ ಕ್ಯಾಂಡಿಡೇಟ್ ಸೆಲೆಕ್ಟಟ್ ಆದ ಬಳಿಕ ಪ್ರಚಾರ ಶುರು ಆದ ಮೇಲೆ. ಅಷ್ಟು ಸಮಯ ಸುಮ್ಮನಿದ್ದು ಚುನಾವಣೆ ಬಂದಾಗ ಇದೆಲ್ಲಾ ನೆನಪಾಗುತ್ತೆ. ಜನರನ್ನು ಗೊಂದಲ ಗೊಂದಲ ಮಾಡಿ ಹಾಕುತ್ತೆ. ಅದೇ ಹಳ್ಳಿ ಜನ ಬೆಳೆದ ಬೆಳೆಗಳಿಗೆ ಬೆಲೆ ಸಿಗಬೇಕು ಅನ್ನೋ ವಿಚಾರದಲ್ಲಿ ಒಬ್ಬನೇ ಒಬ್ಬ ಮಾತಾಡೋಲ್ಲ. ಮಾತನಾಡಿದರೂ ಎಲೆಕ್ಷನ್ ಮುಗಿದ ಮೇಲೆ ಮರೆತೇ ಹೋಗಿರುತ್ತೆ.
ಇನ್ನು ನೋಡಿ ಈಗೀಗ ಹಳ್ಳಿ ಜನಾನು ಸ್ವಲ್ಪ ಸ್ವಾರ್ಥ ನೋಡ್ತಾರೆ. ನೋಟು ಸಿಕ್ರೆ ಫೀಲ್ಡ್ , ಇಲ್ಲಾಂದ್ರೆ ಇಲ್ಲ.
ಆವತ್ತು ಕಾಲೇಜು ದಿನಗಳಲ್ಲಿ ಒಂದು ಇಂಟೆರೆಸ್ಟ್ ಇತ್ತು. ಫೀಲ್ಡ್ ಹೋಗೋದು ನಮಗೂ ಒಂದು ಖುಷಿ. ತಲೆಗೆ ಪಕ್ಷದ ಟೊಪ್ಪಿ ಹಾಕಿ ಉರಿಬಿಸಿಲಿನಲ್ಲೂ ಪಕ್ಷಕ್ಕಾಗಿ ಕೆಲಸ ಮಾಡುವುದೇ ಖುಷಿ. ಈಗ ಹಾಗಲ್ಲ. ಸ್ವಲ್ಪ ಯೋಚನೆ ಮಾಡಿದಾಗ ಓಟು ಹಾಕೋ ಕಾಲ. ಮೊನ್ನೆ ಹೀಗೇ ಸುಮ್ಮನೆ ಒಂದು ಪಾರ್ಟಿಯವರೊಂದಿಗೆ ಮಾತನಾಡುತ್ತಾ ಇದ್ದೆ. ಆಗ ಅಲ್ಲೊಬ್ಬ ಬಂದ. ಸ್ವಾಮೀ ಓಟು ಬಂತು ಇಂಥವರು ನಮ್ಮ ಕ್ಯಾಂಡಿಡೇಟ್ , ನಮಗೇ ಓಟು ಹಾಕಿ ಅಂದ್ರು. ಆಗ ಅವನಂದ , ನೋಡಿ ನನಗೆ ಆವತ್ತು ನಿಮ್ಮ ಈ ಕ್ಯಾಂಡಿಡೇಟ್ ನನ್ನ ಒಂದು ಕೇಸಲ್ಲಿ ಹೆಲ್ಪ್ ಮಾಡಿಲ್ಲ. ಹಾಗಾಗಿ ನಾನು ಅವರಿಗೆ ಓಟು ಹಾಕೋದಿಲ್ಲ ಅಂದ. ಮಾತು . . ಸಮಾಧಾನ . . ಓಲೈಕೆ ಎಲ್ಲಾ ನಡೀತು . ಕೊನೆಗೆ ಸರಿ ಆತ ಮುಂದೆ ಹೋದ. ಆ ನಂತರ ವಿಚಾರಿಸಿದಾಗ ತಿಳೀತು, ಆತ ಇನ್ನೊಂದು ಜಾಗವನ್ನು ಕಬಳಿಸಿ ಬೇಲಿ ಹಾಕಿದ್ದ. ಅದೊಂದು ಅಕ್ರಮ ಕೆಲಸ.ಇದಕ್ಕೆ ಸಪೋರ್ಟ್ ಮಾಡಿಲ್ಲ ಅಂತ ಈಗ ಓಟು ಹಾಕೋದಿಲ್ಲ ಅಂತ ಆತ ಹೇಳ್ತಿದ್ದಾನೆ ಅಂತ ಗೊತ್ತಾಯ್ತ. ನಾವು ಯಾವುದು ಅನ್ಯಾಯ , ಭ್ರಷ್ಠಾಚಾರ ಅಂತ ನಾವು ಹೇಳ್ತೆವೆಯೋ ಅದೇ ಕೆಲವೊಮ್ಮೆ ಹಳ್ಳಿ ಚುನಾವಣೆಯ ಇಶ್ಯೂ ಆಗುತ್ತೆ. ಅಲ್ಲಿ ಆತನ ಪ್ರಭಾವದಲ್ಲಿ ಐವತ್ತು ಓಟು ಇದೆ ಎಂದಾದರೆ ಯಾವ ರಾಜಕೀಯ ಪಕ್ಷ , ರಾಜಕಾರಣಿ ಅದೇ ಅನ್ಯಾಯಕ್ಕೆ ಸಹಕರಿಸೋದಿಲ್ಲ ಹೇಳೀ. ಅಂದು ಹಾಗೆ ಸಹಕರಿಸದೇ ಇದ್ದದ್ದು ಇಂದು ತೊಂದರೆಯಾಗಿದೆ. ಹಳ್ಳಿ ರಾಜಕೀಯದಲ್ಲಿ ಒಂದು ಓಟು ಕೂಡಾ ಮುಖ್ಯವಾಗುವ ಸಮಯದಲ್ಲಿ ಇಂತಹ ಸಂಗತಿಗಳು ಕೂಡಾ ಮುಖ್ಯವಾಗುತ್ತವೆ.
ಹಾಗಾಗಿ ಈ ಭ್ರಷ್ಠಾಚಾರ , ಅನ್ಯಾಯ , ಮೋಸ , ವಂಚನೆಗಳು ಹೇಗೆ ಆರಂಭವಾಯಿತು? ಹೇಗೆ ಮುಗಿಯುತ್ತೆ?.
ಇದೆಲ್ಲಾ ಹಳ್ಳಿ ರಾಜಕೀಯದ ತಲೆಬಿಸಿ.

26 ಡಿಸೆಂಬರ್ 2010
ನಂಬಿಕೆಯ ಪಾಠ . .
ಈ ವಿಶಾಲವಾದ ಆಗಸ , ಹರಿಯುವ ನೀರು , ಜಗದ ಸತ್ಯ, ಮನುಷ್ಯನ ಆದಿ-ಅಂತ್ಯ, ಸೂರ್ಯ-ಚಂದ್ರರ ಉದಯ, . . . ಹೀಗೇ ಎಲ್ಲದಕ್ಕೂ ಕೂಡಾ ಒಂದು ನಾಶ ಅಂತ ಇದೆಯಾ?.ಅಂತ್ಯ ಅಂತ ಇದೆಯಾ?. ಇದನ್ನು ಕಂಡವರಿದ್ದಾರಾ?,ಇದಕ್ಕೆಲ್ಲಾ ಸಾವು ಅಂತ ಇದೆಯಾ?,ಇದೆಲ್ಲಾ ಹೇಗೆ ಸೃಷ್ಠಿಯಾಯಿತು ?. ಹೀಗೇ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟುತ್ತಾ ಸಾಗಿದಂತೆ ಉತ್ತರವಿಲ್ಲ. ಮೌನವೇ ಕೊನೆಗೆ ಉತ್ತರ. ಆ ಮೌನದ ಹಿಂದೆ ನಿಂತಿರುವುದೇ ಆ ನಂಬಿಕೆ. ನಾವು ಎಲ್ಲಾ ವಾದಗಳನ್ನು ಮಾಡುತ್ತಾ ಹೋಗುವುದರ ಹಿಂದೆ ಕೂಡಾ ಅದೇ ನಂಬಿಕೆ ಇದೆ. ನಾವು ಈಗ ಹೇಳುತ್ತಿರುವ ವೈಜ್ಞಾನಿಕ ಸತ್ಯಗಳನ್ನು ನಾವು ಕಂಡಿಲ್ಲ.ನಮ್ಮ ಹಿಂದಿನ ಅದ್ಯಾರೋ ಕಂಡುಹಿಡಿದರಂತೆ , ಅದನ್ನು ದಾಖಲಿಸಿದ್ದಾರಂತೆ ಅನ್ನುವುದು ಬಿಟ್ಟು ಬೇರೇನನ್ನು ಹೇಳುವುದಕ್ಕೆ ನಾವು ಈಗ ಅಸಮರ್ಥರು. ಯಾಕೆಂದರೆ ನಾವು ನೋಡಿಲ್ಲ , ಕಂಡಿಲ್ಲ. ಹೀಗಂತೆ ಎನ್ನವುದರ ಹಿಂದೊಂದು ನಂಬಿಕೆ ಮಾತ್ರಾ. ಹಾಗಾಗಿ ಆ ನಂಬಿಕೆ ಅನ್ನೋದೇ ಮನುಷ್ಯನನ್ನು ಇಷ್ಟು ಬೆಳೆಸಿದೆ.ಬೆಳೆಸುತ್ತಿದೆ.
ಅಂತಹ ನಂಬಿಕೆಗಳು ಇರುವವರೆಗೆ ಈ ಜಗತ್ತು ಇರುತ್ತದೆ.ಅದೇನೇ ಆಗಲಿ “ಆ ಶಕ್ತಿ” ನಮ್ಮ ಜೀವಕ್ಕೆ ಧೈರ್ಯ ತುಂಬುತ್ತದೆ.ಬದುಕಿಗೆ ಸ್ಪೂರ್ತಿ ನೀಡುತ್ತದೆ. ಒಂದು ಆಸ್ಪತ್ರೆ ಹೋಗೋವಾಗಲೂ ಅಲ್ಲಿ ನಂಬಿಕೆ ಮುಖ್ಯ. ದೇವರು ಅನ್ನೋ ಒಂದು ನಂಬಿಕೆ ಮತ್ತು ವೈದ್ಯ ಅನ್ನೋ ಮನುಷ್ಯನ ಮೇಲಿನ ನಂಬಿಕೆ. ಇದೆರಡೂ ಇಲ್ಲದೇ ಹೋದರೆ ಆ ಕಾಯಿಲೆ ವಾಸಿಯಾಗೋದೂ ಕಡಿಮೆ.
ಇಂತಹ ಸನ್ನಿವೇಶದಲ್ಲಿ ದೇವರು ಅನ್ನೋ ನಂಬಿಕೆಯ ಮೇಲೆ ಹೊಡೆತ ನೀಡೋ ಮಂದಿ ಈ ಮನುಷ್ಯ ಕುಲದ ಮೇಲೆ ಹೊಡೆತ ಕೊಡುತ್ತಿದ್ದಾರೆ ಅಂತಾನೇ ಅರ್ಥ ಅಂತ ಹಿರಿಯರೊಬ್ಬರು ಮೊನ್ನೆ ಮೊನ್ನೆ ಉಸುರುತ್ತಿದ್ದರು. ಅದು ನಿಜಾನೂ ಹೌದು.ಯಾಕಂದ್ರೆ ಇಲ್ಲಿ ನಂಬಿಕೆಯೇ ಅಡಗಿಯೋಯಿತೆಂದರೆ ಕುರುಡು ಬದುಕಾಗುತ್ತದೆ.ಅಂತಹ ಕುರುಡು ಪ್ರಪಂಚ ಏನು ಮಾಡಬಲ್ಲುದು ಮತ್ತು ಏನನ್ನು ಸಾಧಿಸಬಲ್ಲುದು?. ಹಾಗಾಗಿ ಒಂದು ನಂಬಿಕೆಯ ಮೇಲೆ ಅಟ್ಯಾಕ್ ಮಾಡೋವಾಗ ಯೋಚಿಸಬೇಕಲ್ಲಾ?. ಹಾಗಂತ ಮನುಷ್ಯನೇ ಮಾಡಿಕೊಂಡ ಕೆಲವು ಕಟ್ಟುಪಾಡುಗಳು , ಅದರ ಹಿಂದಿರುವ ದುರುದ್ದೇಶಪೂರಿತ ಯೋಜನೆಗಳು , ಹಿಡನ್‌ಅಜೆಂಡಾಗಳ ಬಗ್ಗೆ ಯಾವತ್ತೂ ಜಾಗೃತವಾಗಿರಬೇಕಾಗುತ್ತದೆ.ಆದರೆ ಇವತ್ತು ಇಂತಹವುಗಳ ಬಗ್ಗೆ ನಾವು ಮಾತಾಡೊಲ್ಲ.ನಮ್ಮದೇ ದೃಷ್ಠಿಕೋನವನ್ನು ಇನ್ನೊಬ್ಬನ ಮೇಲೆ ಹೇರುವ ಪ್ರಯತ್ನ ಮಾಡುತ್ತಿದ್ದೇವೆ.
ಹೀಗೇ ನಂಬಿಕೆಯ ಬಗ್ಗೆ ಮಾತಾಡೋವಾಗ ನನಗೆ ನನ್ನ ಆತ್ಮೀಯರೊಬ್ಬರು ನೆನಪಾಗುತ್ತಾರೆ.ಅವರು ಉದ್ಯೋಗ ಮಾಡುತ್ತಿರುವ ಕ್ಷೇತ್ರವನ್ನು ಅತ್ಯಂತ ಪ್ರೀತಿಯಿಂದ ಕಂಡವರು.ಅಲ್ಲಿ ಸೇವೆ ಮಾಡುವ ಎಲ್ಲರನ್ನೂ ಪ್ರೀತಿಯಿಂದ ಕಂಡವರು , ಎಲ್ಲರಲ್ಲೂ ನಂಬಿಕೆ ಇರಿಸಿದವರು.ಆದರೆ ಯಾಕೋ ಏನೋ ಅವರು ನಂಬಿಕೆ ಇರಿಸಿಕೊಂಡ ಮನುಷ್ಯರೇ ಅವರಿಗೇ ತಿರುಗುಬಾಣವಾದರು.ನಂಬಿದ ಮನುಷ್ಯರೇ ಒಳಗೊಳಗೇ ಕತ್ತಿ ಮಸೆದರು. ಕೊನೆಗೆ ಅವರು ಅಲ್ಲಿಂದ ಹೊರಬರಲೇಬೇಕಾಯಿತು. ಆದರೂ ತನ್ನ ಕ್ಷೇತ್ರದ ಮೇಲಿನ ನಂಬಿಕೆ ಬಿಟ್ಟಿರಲಿಲ್ಲ, ಪ್ರೀತಿ ಇತ್ತು ಆ ಕ್ಷೇತ್ರದಲ್ಲಿ. ಸತ್ಯ , ಪ್ರಾಮಾಣಿಕರಾಗಿಯೇ ಉಳಿದರು.
ಆ ನಂಬಿಕೆ ಅನ್ನೋ ಶಕ್ತಿ ಮತ್ತೆ ಕಣ್ತೆರೆಯಿತು , ಸತ್ಯಕ್ಕೆ ಗೆಲುವಾಯಿತು.ಈಗ ಮತ್ತೆ ಅವರು ಅದೇ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನನ್ನ ಪ್ರಕಾರ ಇದೂ ಕೂಡಾ ನಂಬಿಕೆಗೆ ಸಿಕ್ಕ ಜಯ. ಒಂದು ವೇಳೆ ಈ “ಮನುಷ್ಯ” ಬುದ್ದಿಯಿಂದಾಗಿ ಅವರು ಆ ಕ್ಷೇತ್ರದ ಮೇಲೆ ನಂಬಿಕೆಯೇ ಕಳಕೊಂಡಿದ್ದರೆ? , ಅವರಲ್ಲಿ ದ್ವೇಷ ಹುಟ್ಟಿಕೊಂಡಿದ್ದರೆ?. ಆದರೆ ಹಾಗಾಗಿಲ್ಲ ಪ್ರೀತಿ ಮತ್ತು ನಂಬಿಕೆ ಇವೆರಡೂ ಕೂಡಾ ಇಂದು ಅವರನ್ನು ಮತ್ತೆ ಕರೆಯಿಸಿಕೊಂಡಿದೆ. ಹೀಗಾಗಿ ನಂಬಿಕೆ ಅನ್ನೋ ಶಕ್ತಿ ನಿಜಕ್ಕೂ ಶಕ್ತಿಶಾಲಿ.

ಬೆಲೆ ಬಿಸಿ . . ತಲೆ ಬಿಸಿ .
ಒಂದು ಕೇಜಿ ಈರುಳ್ಳಿ ಕೊಳ್ಳೋ ಹಾಗಿಲ್ಲ.ಏನು ರೇಟು. .?. ಈ ಕಡೆ ಬಂದು ಬೇಳೆ ರೇಟು ನೋಡಿದ್ರೆ ಅಬ್ಬಾ. . !. ಅದೆಲ್ಲಾ ಇರ್ಲಿ ಗಾಡಿಗೆ ಒಂದು ಲೀಟರ್ ಪೆಟ್ರೋಲ್ ಹಾಕೋಣವೆಂದ್ರೆ ಬರೋಬ್ಬರಿ 62 ರುಪಾಯಿ , ಡೀಸೆಲ್‌ಗೆ 42 ರುಪಾಯಿ . ಸದೂ ಅಲ್ಲ ಇನ್ನೂ ಏರುತ್ತಂತೆ ರೇಟು . . ಹೀಗೆ ರೋಡಿಗಿಳಿದ್ರೆ ಬೆಲೆ ಏರಿಕೆಯ ಮಾತು ಕೇಳಿಬರುತ್ತಲೇ ಇದೆ.
ಇದೆಲ್ಲಾ ಮೊನ್ನೆ ಮೊನ್ನೆ ಎಲ್ಲಾ ಮೀಡಿಯಾದಲ್ಲೂ , ಎಲ್ಲಾ ಜನರ ಬಾಯಲ್ಲೂ ಇಶ್ಯೂ ಆಗಿತ್ತು, ಆಗುತ್ತಲೇ ಇತ್ತು. ಇದೇ ವೇಳೆ ಅಲ್ಲಿ ಒಂದು ಕಡೆ ರೈತರು ಕೂಡಾ ಬೊಬ್ಬೆ ಹಾಕಿದ್ರು.ನಮ್ಗೆ ಬೆಲೆನೇ ಸಿಕ್ತಿಲ್ಲ , ಈರುಳ್ಳಿ ಎಲ್ಲಾ ನಾಶ ಆಯ್ತು , ಬೆಳೆನೇ ಇಲ್ಲಾ ಅಂತೆಲ್ಲಾ ಬೊಬ್ಬೆ ಹಾಕ್ತಿದ್ದಂತೇ ದೂರದ ಪಾಕಿಸ್ತಾನದಿಂದ ಈರುಳ್ಳಿ ಬಂತು. ನಮ್ಮಲ್ಲಿ ಈರುಳ್ಳಿ ಬೆಲೆ ಕೊಂಚ ಇಳೀತು. ಇಷ್ಟೆಲ್ಲಾ ಆಗುತ್ತಿರುವಾಗ ಅಲ್ಲಿ ರೈತರ ಕೂಗು ಕೇಳಿಸಲೇ ಇಲ್ಲ. ರೈತರು ಒಂದಿಷ್ಟು ಈರುಳ್ಳಿ ರಸ್ತೆಗೆ ಚೆಲ್ಲಿ ನಷ್ಠ ಮಾಡಿದ್ದು ಮಾತ್ರಾ ಬಂತು. ಬೆಲೆ ಏರಿಕೆಯ ಸುದ್ದಿಯಾದಷ್ಟು ದೊಡ್ಡ ಸುದ್ದಿಯೇ ಆಗಿಲ್ಲ , ಇಶ್ಯೂ ಕೂಡಾ ಆಗಿಲ್ಲ. ರೈತ ಬೆಳೆದ್ರೆ ಮಾತ್ರಾ ಅದು ನಗರದ ಗೂಡಂಗಡಿಯಲ್ಲೋ , ಮಾಲ್‌ಗಳಲ್ಲೋ ಸಿಗೋದು ಅಂತ ಗೊತ್ತಿಲ್ವೋ ಏನೋ. .?.ಇವತ್ತು ಸಮಸ್ಯೆ ಆಗಿರೋದೇ ಇಲ್ಲಿ.ಎಲ್ಲಿಯ ಸಮಸ್ಯೆ ಇಶ್ಯೂ ಆಗಬೇಕಿತ್ತೋ ಅದು ಆಗಿಲ್ಲ.ಅನಾವಶ್ಯಕವಾದ ಕೆಲ ಸಂಗತಿಗಳು ದೊಡ್ಡ ಸುದ್ದಿಯಾಗುತ್ತಿವೆ. ರೈತರ ಸಮಸ್ಯೆಗಳ ಬಗ್ಗೆ ಈ ಮೊದಲೇ ಸುದ್ದಿಯಾಗುತ್ತಿದ್ದರೆ ಈರುಳ್ಳಿ ಬೆಲೆ ಏರಿಕೆಯಂತಹ ಸಮಸ್ಯೆಗಳು ಆಗುತ್ತಿರಲಿಲ್ಲ. ಇಲ್ಲಿ ಆದದ್ದು ಅದೇ. ಈರುಳ್ಳಿ ಬೆಳೆದ ರೈತರು ಕಡಿಮೆ ಬೆಲೆಗೆ ಮಾರಾಟಮಾಡಿಯಾಗಿತ್ತು.ಆದರೆ ಅಲ್ಲಿ ಲಾಭ ಮಾಡಿಕೊಂಡದ್ದು ಮಧ್ಯವರ್ತಿಗಳು.ರೈತರಿಗೆ ಮಾತ್ರಾ ಪಂಗನಾಮ. ಇಂತಹ ಸಂಗತಿಗಳು ಹೊರಬರುವಾಗ ಬೆಲೆ ಗಗನಕ್ಕೇರಿತ್ತು.ಯಾರಿಂದಲೂ ಏನೂ ಮಾಡಲಾಗದ ಸ್ಥಿತಿ.
ಹೀಗೇ ಇಂದು ರೈತರೆಲ್ಲಾ ನಗರಕ್ಕೆ ವಲಸೆ ಹೋಗುತ್ತಿದ್ದಾರೆ ತಡೀಬೇಕು ನೀವು ಇಲ್ಲೇ ಇರಿ ಎಂದೆಲ್ಲಾ ಭಾಷಣ ಮಾಡೋ ಜನರಿದ್ದಾರೆ. ಆದರೆ ಹೇಗೆ ತಡೆಯೋದು , ಸಮಸ್ಯೆಗೆ ಪರಿಹಾರ ಹೇಗೆ?. ಉತ್ತರವಿಲ್ಲ. ಇಂತಹ ಭಾಷಣ ಮಾಡಿದ ವ್ಯಕ್ತಿಯೊಬ್ಬರು ಅಂದು ನನಗೊಮ್ಮೆ ಸಿಕ್ಕಿದ್ದರು. ಆಗ ಇದೇ ಬೆಲೆ ಏರಿಕೆ ಬಗ್ಗೆ ಸ
ಅವರು ಮಾತನಾಡಿದ್ದರು. ಭಾಷಣದಲ್ಲಿ ರೈತರ ಬೆಳೆಗಳಿಗೆ ಬೆಲೆ ಸಿಗಲೇಬೇಕು ಎಂದೆಲ್ಲಾ ಹೆಳಿದ್ದರು. ಆ ಬಳಿಕ ಖಾಸಗಿಯಾಗಿ ಮಾತನಾಡಿದ ಅವರು, ಕೊಳ್ಳೋ ಕೈಗಳು ಹೆಚ್ಚಿವೆ , ಬೆಳೆಯೋ ಕೈಗಳು ಕಡಿಮೆ ಇವೆ. ಕೊಳ್ಳೋರ ಓಟು ಹೆಚ್ಚಿದೆ , ಕೊಡೋರ ಓಟು ಕಡಿಮೆ ಇದೆ. ಹೀಗಾಗಿ ಬೆಳೆಯೋರ ನಡುವೆ ಮತ್ತು ಕೊಳ್ಳೋರ ನಡುವೆ ವ್ಯತ್ಯಾಸ ಕಂಡುಬರುತ್ತಿದೆ ಅಂತಾರೆ ಅವರು. ಉದಾಹರಣೆಗೆ , ಹಳ್ಳಿಗಳಲ್ಲಿ ಈಗ ಹೈನುಗಾರರ ಸಂಖ್ಯೆ ಕಡಿಮೆ ಇದೆ.ಅದಕ್ಕಾಗಿ ಹೈನುಗಾರರ ಸಂಖ್ಯೆ ಹೆಚ್ಚಾಗಬೇಕೆಂದು ಹಾಲಿನ ದರ ಏರಿಕೆ ಮಾಡಬೇಕು ಅಂತ ಸಲಹೆ ಕೊಡಬಹುದು.ಆದ್ರೆ ಅದು ಸಾಧ್ಯಾನಾ?.ಒಂದು ಲೀಟರ್‌ಗೆ ಹಾಲು ಖರೀದಿಗೆ ಒಂದು ರುಪಾಯಿ ಹೆಚ್ಚು ಮಾಡಿದ್ರೆ , ಮಾರಾಟದ ಬೆಲೆಯಲ್ಲಿ ಎರಡು ರುಪಾಯಿ ಏರಿಕೆಯಾಗುತ್ತೆ. ಹೈನುಗಾರರು ಇರೋದು ಒಂದು ಲಕ್ಷವಾದರೆ ಕೊಳ್ಳೋರು ಹತ್ತು ಲಕ್ಷ ಜನ ಇದ್ದಾರೆ. ಆಗ ಧ್ವನಿ ಯಾರದ್ದು ಕೇಳಿಸುತ್ತೆ?. ಹಾಲಿನ ದರ ಏರಿಕೆಯ ಬಿಸಿ . . , ಹಾಲು ದುಬಾರಿ . . , ನಿಮ್ಗೆ ಏನ್ಸತ್ತೆ . .? ಎಂದೆಲ್ಲಾ ನಾಳೆ ಬರುತ್ತೆ. ಅದೇ ಹೈನುಗಾರನಿಗೆ ಒಂದು ಲೀಟರ್ ಹಾಲಿನ ಖರ್ಚು ಎಷ್ಟು ಅಂತ ಎಲ್ಲಾದರೂ , ಯಾರಾದರೂ ಕೇಳಿದ್ದು. .?.
ಹಾಗಾಗಿ ಈಗ ಇದೇ ಸಮಸ್ಯೆ ಕೊಡೋನು ಯಾವತ್ತೂ ಕೋಡಂಗಿಯೇ. ಕೊಳ್ಳೋನು ಮಾತ್ರಾ ಜಾಣ.
ಇದು ಬದಲಾಗಿ ಕೊಳ್ಳೋನು ಕೊಡೋನು ಇಬ್ಬರೂ ಜಾಣರಾಗಬೇಕು ಅಷ್ಟಾದರೆ ಪುಣ್ಯ.

21 ಡಿಸೆಂಬರ್ 2010
ಚಳಿ ಚಳಿ. . . .
ಚಳಿ ಶುರುವಾಯ್ತು ಮಾರಾಯ್ರೆ ಚಳಿ ಏನು ಚಳಿ. ಮನೆಗಿಂದ ಹೊರಗಡೆ ಇಳಿಯೋದಿಕ್ಕಾಗಲ್ಲ.ಏನು ಅವಸ್ಥೆ . ಮಾರಾಯ್ರೆ?.
ಮೊನ್ನೆ ಮೊನ್ನೆ ಏನು ಬಿಸಿಲು ಅಂತ ಹೇಳಿದ್ದವರು , ಅಯ್ಯೋ ಮಳೆ ಮಳೆ ಅಂತ ಕೂಗಿದರು ಈಗ ಏನು ಚಳಿ ಮಾರಾಯ್ರೆ ಅಂತಿದಾರಲ್ಲಾ?. ಹಾಗಿದ್ರೆ ಯಾವುದು ಬೇಕು ಮಾರಾಯ್ರೆ?, ಚಳಿಯೋ , ಮಳೆಯೋ , ಬಿಸಿಲೋ. ಅದೆಲ್ಲಾ ನಮ್ಮ ಅನುಕೂಲಕ್ಕೆ ತಕ್ಕಂತೆ ಬಿಡಿ ಮಾರಾಯ್ರೆ ಅಂತಾರೆ ಅವ್ರು. ಅದಲ್ಲ ಈ ಚಳಿ ಎಷ್ಟು ಜೋರು ಗೊತ್ತಾ?. ಗಡಗಡ ಅಂತ ಎದೆಯನ್ನೇ ನಲುಗಿಸಿ ಬಿಡುತ್ತೇರಿ ಅದು. ಅದ್ಕೇ ಬೆಚ್ಚನೆ ಬೇಕು ಅನ್ಸುತ್ತೆ. ಆ ಬಿಸಿ ಸಿಕ್ಕಾಗ್ಲೆ ಚಳಿ ಮೈ ಕೊಡವಿಕೊಂಡು ಆಚೆ ಮನೆಗೆ ಹೋಗುತ್ತಂತೆ ಮಾರಾಯ್ರೆ..!.
ಈ ಚಳಿಯ ಸುತ್ತ ಏನೆಲ್ಲಾ ಇದೆ . .!
ಅಜ್ಜಿ , ಅಜ್ಜಂದಿರ ಕತೆ ಏನು ಮಜಾ ಇದೆ ನೋಡ್ರಿ. ಅವ್ರು ಮಾಡೋ ಸ್ಟೈಲ್ ಸಕತ್ ಮಜಾ. ಅಯ್ಯೋ ಈ ಚಳಿಗಾಗಿ ಅವ್ರು ಒಂದೆರಡು ರಗ್ಗು , ಕಂಬಳಿ ಪರ್ಚೇಸ್ ಮಾಡಿ ತಂದಿರ್ತಾರೆ. ಈ ಕಂಬಳೀ ಅನ್ನೋವಾಗ ನೆನಪಾಗೋದು ನಮ್ಮೂರು ಮತ್ತು ಸುಬ್ರಹ್ಮಣ್ಯ. ಯಾಕೆ ಗೊತ್ತಾ ಇಲ್ಲಿ ಷಷ್ಠಿ ಜಾತ್ರೆಗೆ ಬಂತೆಂದರೆ ಅಲ್ಲಿಗೆ ಕಂಬಳಿಯೂ ಬರುತ್ತೆ. ಒಳ್ಳೆ ವ್ಯಾಪಾರನೂ ನಡೆಯುತ್ತೆ.ಕಂಬಳಿ ಬೇಕೇ ಕಂಬಳಿ ಅಂತ ಕೂಗುತ್ತಾರೆ. ಕೊನೆಗೆ ಕಿರುಷಷ್ಠಿ ಮುಗಿದು ಅವ್ರ ಊರಿಗೆ ಹೋಗ್ತಾರೆ.
ಈ ಕಂಬಳಿ ವ್ಯಾಪಾರಿಗಳು ದೂರದ ಶಿರಾದಿಂದ ಸುಬ್ರಹ್ಮಣ್ಯಕ್ಕೆ ಬರ್ತಾರೆ. ಯಾವಾಗ?. ಕುಲ್ಕುಂದ ಜಾತ್ರೆ ಶುರುವಾದಾಗ. ಅಲ್ಲಿ ಬಂದು ಟೆಂಟ್ ಹಾಕ್ತಾರೆ. ಆ ನಂತ್ರ ಹಾಗೇ ಸುಬ್ರಹ್ಮಣ್ಯ ಪೇಟೆಗೆ ಶಿಫ್ಟ್ ಆಗ್ತಾರೆ.ಷಷ್ಠಿ ಬರುತ್ತೆ ವ್ಯಾಪಾರ ಆಗುತ್ತೆ ಮತ್ತೂ ಒಂದು ತಿಂಗಳೂ ಇರ್ತಾರೆ ಕಿರುಷಷ್ಠಿ ಬರುತ್ತೆ ಇದೆಲ್ಲಾ ಮುಗಿದ ನಂತ್ರ ಅವ್ರ ಊರಿಗೆ ಹೋಗ್ತಾರೆ.ಇಲ್ಲಿ ಕಂಬಳಿ ವ್ಯಾಪಾರ ಜೋರಾಗೇ ಇರುತ್ತೆ. ಹಿಂದೆಲ್ಲಾ ಈ ಕಂಬಳಿ ಖರೀದಿ ಮಾಡೋಕೆ ಕೇರಳದಿಂದ ಅನೇಕ ಜನ ಬರ್ತಾ ಇದ್ರು.ಆಗೆಲ್ಲಾ ಒಂದು ಕಂಬಳಿಗೆ 200 ರಿಂದ ಒಂದು ಸಾವಿರದವರೆಗೆಗೂ ಇರ್‍ತಾ ಇತ್ತಂತೆ. ನನ್ನ ಅಜ್ಜಿಯೂ ಒಂದೆರಡು ಕಂಬಳಿ ಖರೀದಿ ಮಾಡಿದ್ದು ನನಗಿನ್ನೂ ನೆನಪಿದೆ. ಆದ್ರೆ ಈಗ ನೋಡಿ ಯಾರಿಗೂ ಕಂಬಳಿ ಬೇಡ.ಎಲ್ಲ ರಗ್ಗು ಹಾಕೊತ್ತಾರೆ. ಹಾಗಾಗಿ ಕಂಬಳಿ ವ್ಯಾಪಾರಿ ಸೋಮಣ್ಣ ಮೊನ್ನೆ ಬೊಬ್ಬೆ ಹೋಡೀತಾ ಇದ್ದ, ಇಲ್ಲಿ ರಥಬೀದಿ ತುಂಬಾ ನಾವೇ ಇದ್ದೀವಿ ಸಾರ್ ಆವತ್ತು.ಇಂದು ನೋಡಿದ್ದದ್ರೆ ನಾವು ಎರಡೇ ಪಾರ್ಟಿ ಇಲ್ಲಿಗೆ ಬರೋದು.ಜನಾನೇ ಬರ್ತಾ ಇಲ್ಲ. ಯಾರಿಗೂ ಕಂಬಳಿ ಬೇಡ. 300 ರುಪಾಯಿ ಹೇಳಿದರೆ ಅಬ್ಬ ಅಂತಾರೆ. ನಾವೇನೋ ಈಗ ಬರ್ತಾ ಇದ್ದೀವಿ ಅಂತ ಹೇಳ್ತಾನೆ ಆತ. ಹೀಗೇ ಆಗಿ ಆಗಿ ಇನ್ನೋ ಕೆಲ ಕಾಲ ಕಳೆಯುವ ಹೊತ್ತಿಗೆ ಇಲ್ಲಿ ಕಂಬಳೀ ವ್ಯಾಪಾರಾನೇ ನಿಂತ್ರೂ ನಿಲ್ಲಬಹುದು. ಮತ್ತೆ ಕಂಬಳಿ ಬೇಕಂದ್ರೂ ಎಲ್ಲಿಗೆ ಹೋಗೋಣ. ಆ ದೂರದ ಶಿರಾಕ್ಕೋ ಅಥವಾ ಬೇರೆಲ್ಲಿಗೋ?. ಕಂಬಳಿ ಕೂಡಾ ಹಾಗೆನೇ ದೇಹಕ್ಕೆ ಒಳ್ಳೆದಂತೆ. ವಾತ ಕಡಿಮೆಯಾಗುತ್ತಂತೆ.ನನ್ನಜ್ಜಿ ಕಂಬಳಿ ಹೊದೆಯಲು ಹಾಸಲೂ ಬಳಸುತ್ತಿದ್ದದ್ದು ನನಗೆ ನೆನಪಿದೆ. ಹೀಗೆಲ್ಲಾ ಔಷಧಿಯುಕ್ತ ಕಂಬಳಿ ಈಗ ನೆನಪಾಗುತ್ತೆ.ಮುಂದೆ ಇದೇ ನೆನಪಾಗಿ ಉಳಿಯಲೂ ಬಹುದು. ಚಳಿ ಬಂತಲ್ಲಾ ಚಳಿ.
ಇಷ್ಟಲ್ಲಾ ಚಳಿ ಇದ್ರೂ ನಾನು ಮಾತ್ರಾ ಕಂಬಳೀ ಹೊದೆಯೋದೇ ಇಲ್ಲ . .! ಹೇಗೂ ರಗ್ಗು ಇದೆಯಲ್ಲಾ. . !.

20 ಡಿಸೆಂಬರ್ 2010
ನಂಬಿಕೆಗೆ ಪೆಟ್ಟು . !
ಜಗತ್ತು ಪ್ರಳಯವಾಗಿ ಮುಳುಗುತ್ತಂತೆ , ಅದ್ಯಾವುದೋ ಒಂದು ಆಕಾಶ ಕಾಯ ಭೂಮಿಗೆ ಅಪ್ಪಳಿಸಿ ಇಲ್ಲಿರೋ ಜನರೆಲ್ಲಾ ಸಾಯುತ್ತಾರಂತೆ. . . ಹೀಗೇ ಅಂತೆ ಕಂತೆಗಳ ನಡುವೆಯೂ ಇಲ್ಲಿ ಬದುಕು ಕಟ್ಟಿಕೊಂಡವರು ಅದೆಷ್ಟೋ ಮಂದಿ. ಆದರೆ ಅಲ್ಲಿ ಧೈರ್ಯ ನೀಡೋದು ನಂಬಿಕೆ.ಇದು ಪರಶುರಾಮ ಸೃಷ್ಠಿ, ಇಲ್ಲಿಗೇನು ಆಗದು ಅನ್ನೋ ಬಲವಾದ ನಂಬಿಕೆ.ಹಾಗಾಗಿ ಇಲ್ಲಿ ಎಷ್ಟೇ ಮಳೆ ಬರಲಿ , ಬಿಸಿಲಿರಲಿ, ಗಾಳಿ ಇರಲಿ ಮನಸಿನ ಮೂಲೆಯಲ್ಲಿರೋ ಆ ನಂಬಿಕೆ ಊರನ್ನೇ ಗಟ್ಟಿಯಾಗಿಸಿದೆ. ಅಂತಹದ್ದೊಂದು ಸೃಷ್ಠಿ ಇತ್ತಾ , ಇಲ್ವಾ ಅನ್ನೋದು ಮತ್ತಿನ ಪ್ರಶ್ನೆ. ಆದರೆ ಆ ಒಂದು ನಂಬಿಕೆ ಮನಸ್ಸನ್ನು ಗಟ್ಟಿಗೊಳಿಸಿದೆ.ಧೈರ್ಯ ತುಂಬಿದೆ.ಅಂತಹ ನಂಬಿಕೆಗಳು ಅದೆಷ್ಟೋ ಇಲ್ಲಿ ಇವೆ.ಈ ಭೂಮಿಯಲ್ಲಿರೋ ಸಮಸ್ತ ಜೀವಿಗಳೂ ಅದೇ ನಂಬಿಕೆಯ ತಳಹದಿಯಲ್ಲಿ ಬದುಕಿವೆ. ಆದರೆ ಆ ನಂಬಿಕೆಯನ್ನೇ ಬುಡಮೇಲು ಮಾಡಹೊರಟರೆ ಹೇಗೆ?. ಅಂತಹುದರ ಬಗ್ಗೆ ಯೋಚಿಸಬೇಕಾಗುತ್ತದೆ. ಯೋಚಿಸಲೇಬೇಕಾಗಿದೆ.ಯಾಕೆಂದರೆ ಇದು ಇಂದಿನ ಪ್ರಶ್ನೆಯಲ್ಲ ನಾಳೆಯ ಪ್ರಶ್ನೆ.
ನಂಬಿಕೆ ಅನ್ನೋದು ಹುಟ್ಟಿನಿಂದಲೇ ಆರಂಭವಾಗುತ್ತದೆ.ಅದು ಅಪ್ಪ ಎಂದು ಕರೆಯುವಲ್ಲಿಂದ ತೊಡಗಿ ಇಂದು ಮಾಡುವ ಎಲ್ಲಾ ಕೆಲಸಗಳ ಹಿಂದೆಯೂ ಅದೇ ನಂಬಿಕೆ ಅಡಗಿಕೊಂಡಿದೆ. ಅದೇ ನಂಬಿಕೆ ಕಳೆದುಕೊಂಡೆವೆಂದರೆ ನಮ್ಮೊಳಗೇ ಅಪಧೈರ್ಯ, ಅದರ ಜೊತೆಗೆ ಹೆದರಿಕೆ ಹೋಗಿ ವಂಚನೆಯ ಮುಖವಾಡ ಬೆಳೆದುಕೊಳ್ಳುತ್ತದೆ.ಆತ್ಮವಂಚನೆ ಹೆಚ್ಚಾಗುತ್ತದೆ. ಹಾಗೆಂದು ಇಂದು ಎಲ್ಲಾ ಕಡೆ ನಾವು ಸ್ವತಂತ್ರರು. ಅಷ್ಟು ಮಾತ್ರಕ್ಕೆ ನಮ್ಮ ಅಭಿಪ್ರಾಯವನ್ನು ಇನ್ನೊಬ್ಬನ ಮೇಲೆ ಹೇರುವ ಹಕ್ಕು ನಮಗಿಲ್ಲ. ಆದರೆ ಇಂದು ಇದೆಲ್ಲಾ ನಡೆಯುತ್ತದೆ.ಅಂತಹ ನಂಬಿಕೆಗಳ ವಿರುದ್ದ ಕತೆ ಕಟ್ಟಿ ಮಸಾಲೆ ಹಾಕಿ ಒಂದು ಇಶ್ಯೂ ಮಾಡಿ ದೊಡ್ಡ ಸಂಗತಿಯಾಗಿ ಲೋಕದ ಮುಂದೆ ಪ್ರಚುರ ಪಡಿಸಲಾಗುತ್ತದೆ.ನಂಬಿಕೆಯ ಮೇಲೆ ಹೊಡೆತ ಕೊಡಲಾಗುತ್ತಿದೆ.ಅನವಶ್ಯಕವಾಗಿ ತಲೆತಲಾಂತರದ ಕೊಂಡಿಗಳನ್ನು ಕಳಚುವ ಪ್ರಯತ್ನವಾಗುತ್ತಿದೆ. ಭವಿಷ್ಯದ ದೃಷ್ಠಿಯಿಂದಲೂ ಇದು ಯೋಚಿಸಲೇಬೇಕಾಗುತ್ತದೆ.
ದೇವರಿದ್ದಾನಾ ಇಲ್ಲವೋ ಅನ್ನೋದು ಸೆಕಂಡರಿ. ಆದರೆ ಅದರ ಹೆಸರಿನ ನಂಬಿಕೆ ಜನರನ್ನು ಗಟ್ಟಿಗೊಳಿಸಿದೆ, ಆತ್ಮವಿಶ್ವಾಸ ತುಂಬಿಸಿದೆ.ಅದೊಂದು ಥರಾ ಪೆಟ್ರೋಲ್ ಇದ್ದ ಹಾಗೆ.ಮನುಷ್ಯನ ಮನಸ್ಸಿಗೆ ಆಗಾಗ ಆತ್ಮವಿಶ್ವಾಸ ತುಂಬಿಸುತ್ತದೆ. ಆದರೆ ದೇವರು , ನಂಬಿಕೆಗಳ ಹೆಸರಿನಲ್ಲಿ ಇನ್ನೊಬ್ಬರಿಗೆ ಹಾನಿ ಇಲ್ಲದ ಕೆಲವೊಂದು ಮೌಢ್ಯಗಳು ಇರಬಹುದು. ಒಂದು ವೇಳೆ ಅಂತಹ ಮೌಢ್ಯದಿಂದ ಇಡೀ ಸಮಾಜಕ್ಕೆ ತೊಂದರೆಯಾಗುತ್ತಿದೆಯೇ ?, ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆಯಾಗುತ್ತದೆಯೇ ಎಂದಾದರೆ ಅದೊಂದು ನಿಷೇಧಕ್ಕೆ ಒಳಗಾಗಬೇಕು.ಆದರೆ ಅಂತಹ ಅದ್ಯಾವುದೇ ತೊಂದರೆಯಾಗದೆ ಇದ್ದರೂ ಆ ನಂಬಿಕೆಯ ಮೇಲೆ ಪ್ರಹಾರ ಏಕೆ?. ಆ ನಂಬಿಕೆ ಒಬ್ಬ ಮನುಷ್ಯನನ್ನು ಗಟ್ಟಿಗೊಳಿಸುತ್ತದೆ ಎಂದಾದರೆ ಅದರ ವಿರುದ್ದ ದನಿ ಯಾಕೆ?. ಇದರಲ್ಲಿ ಮೀಡಿಯಾಗಳು ಮೂಗು ತೂರಿಸುವುದೇಕೆ?. ಅದು ಹಾಗಲ್ಲ ಹೀಗೆ, ಕಂದಾಚಾರ , ಮೌಢ್ಯ ಅಂತ ಮೀಡಿಯಾ ಯಾಕೆ ತೀರ್ಪು ಕೊಡಬೇಕು?. ಅದ್ಯಾರು ಬೇಕಾದರೂ ಪ್ರತಿಭಟಿಸಲು ಅದರ ಬಗ್ಗೆ ಮುಕ್ತವಾಗಿ ಚರ್ಚೆಯಾಗಲಿ.ಅದು ಬಿಟ್ಟು ಒಂದು ಇಶ್ಯೂ ಬೇಕು ಎಂಬ ಒಂದೇ ಒಂದು ಕಾರಣಕ್ಕೆ ಜನರ ನಂಬಿಕೆಯ ಮೇಲೆ ಪ್ರಹಾರ ಮಾಡುವುದು ಯಾವ ಕಾರಣಕ್ಕೆ?. ಇದೆಲ್ಲವೂ ಕೂಡಾ ಸಮಾಜದಲ್ಲಿ ಇನ್ನೂ ಜಾತಿ ವ್ಯವಸ್ಥೆ ಉಳಿದುಕೊಳ್ಳಬೇಕು ಹಾಗೂ ಜಾತಿಗಳ ನಡುವೆ ಇನ್ನಷ್ಟು ದ್ವೇಷ ಉಂಟುಮಾಡೋ ಕುತಂತ್ರ. ಒಂದು ವೇಳೆ ಜನರ ನಂಬಿಕೆಯ ಮೇಲೆ ಹೊಡೆತ ಕೊಟ್ಟರೆ ಭವಿಷ್ಯದ ಜನ ಹೇಗಿರಬಹುದೆಂದು ಯೋಚಿಸಿ ನೋಡಿ. ಹುಟ್ಟಿಸಿದಾತನ ಮೇಲೇ ಅನುಮಾನ ಬಂದರೂ ಬರಬಹುದು.ಇಂದು ಕೆಲ ಜನರು ಮತ್ತು ಅವರಿಗೆ ಸಾತ್ ನೀಡುವ ಕೆಲವು ಮೀಡಿಯಾಗಳು ಅದನ್ನೇ ಮಾಡಹೊರಟಿವೆ ಅಂತ ಅನ್ನಿಸುತ್ತಿದೆ.
ಇತ್ತೀಚೆಗೆ ಕರಾವಳಿಯಲ್ಲಿ ಅಂತಹ ನಂಬಿಕೆಗಳ ಮೇಲೆ ಪ್ರಹಾರ ಶುರುವಾಗಿದೆ.ಅದು ಕಂದಾಚಾರ ಅಂತ ತಾವೇ ಸ್ವಯಂಘೋಷಿತವಾಗಿ ಹೇಳುವ ಬುದ್ದಿಗೇಡಿಗಳು ಮತ್ತು ಅವರಿಗೆ ಬೆಂಬಲ ನೀಡುತ್ತಾ ಒಂದು ಇಶ್ಯೂ ಸೃಷ್ಠಿ ಮಡುವ ಬೆರಳೆಣಿಕೆಯ ಮೀಡಿಯಾದ ಮಂದಿಗಳಿಂದಾಗಿ ಭವಿಷ್ಯದ ದಾರಿ ತಪ್ಪುತ್ತಿದೆ , ಸಮಾಜವನ್ನು ಅತಂತ್ರ ಮಾಡುವ ಪ್ರಯತ್ನ ನಡೀತಾ ಅಂತ ಒಂದು ಯೋಚನೆ ಶುರುವಾಗಿದೆ.ಈ ಬಗ್ಗೆ ಚರ್ಚೆಯೂ ಆಗುತ್ತಿದೆ.ನಿಜಕ್ಕೂ ಒಂದೊಳ್ಳೇ ಅಂತ್ಯವಾಗಲಿ ಅನ್ನೋದೇ ಹಾರೈಕೆ.ದುರಂತ ಅಂದರೆ ಅದೇ ಮಂದಿ ಒಂದೊಳ್ಳೇ ಇಶ್ಯೂ ಕ್ರಿಯೇಟ್ ಮಾಡೋದಿಲ್ಲ.ಒಳ್ಳೆಯ ಚರ್ಚೆಗೆ ಅವಕಾಶ ಸೃಷ್ಠಿ ಮಾಡೋದೇ ಇಲ್ಲ.
ವೆರಿ ಸ್ಯಾಡ್. .

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)