12 ಮಾರ್ಚ್ 2010

ಬರೀ 5 ರುಪಾಯಿ ಊಟ . . .! !

ಕೊಳ್ಳುವ ಬೇಳೆ ಕಾಳುಗಳಿಂದ ಹಿಡಿದು ಎಲ್ಲವೂ ಈಗ ದುಬಾರಿ. ಆದ್ರೆ ಸುಳ್ಯದಲ್ಲಿರೋ ಹೋಟೆಲೊಂದಕ್ಕೆ ಬೆಲೆ ಏರಿಕೆ ಏನೆಂಬುದೇ ಗೊತ್ತಿಲ್ಲ.ಯಾಕ್ ಗೊತ್ತಾ ಇಲ್ಲಿ ಒಂದು ಊಟಕ್ಕೆ ಕೇವಲ .ಹೊಟ್ಟೆ ತುಂಬಾ ಊಟ ಮಾಡಿ 5 ರುಪಾಯಿ ಮಾತ್ರಾ ಕೊಟ್ರೆ ಸಾಕು.ಈ ಹೋಟೆಲ್ ಹೆಸ್ರು ರಾಮ್‌ಪ್ರಸಾದ್ .

ಸುಳ್ಯದ ಶ್ರೀರಾಮ ಪೇಟೆಯಲ್ಲಿದೆ ರಾಮ್‌ಪ್ರಸಾದ್ ಹೋಟೆಲ್‌. ಹೋಟೆಲ್ ಮಾಲಿಕ ಸುಂದರ ಸರಳಾಯ. .ಇಲ್ಲಿ ಮಧ್ಯಾಹ್ನದ ಭೋಜನಕ್ಕೆ ಕೇವಲ 5 ರುಪಾಯಿ ಮಾತ್ರಾ..ಇಂದಿನ ಬೆಲೆ ಏರಿಕೆಯ ಕಾಲದಲ್ಲಿ ಏನಿಲ್ಲವೆಂದರೂ 15 ರುಪಾಯಿಯಿಂದ 20 ರುಪಾಯಿವರೆಗೆ ಸಾಮಾನ್ಯ ಊಟಕ್ಕೂ ನೀಡಲೇಬೇಕು.ಆದ್ರೆ ರಾಮ್‌ಪ್ರಸಾದ್ ಹೋಟೆಲ್ ಮಾತ್ರಾ ಈಗಲೂ 5 ರುಪಾಯಿಗೆ ಊಟ ಕೊಡುತ್ತದೆ. ಹಾಗೆಂದು ಇಲ್ಲಿಯ ಮೆನುವಿನಲ್ಲಿ ಏನೂ ಬದಲಾವಣೆ ಇಲ್ಲ.ಅನ್ನ , ಸಾಂಬಾರ್, ಗಸಿ , ಪಲ್ಯ, ಮಜ್ಜಿಗೆ , ಉಪ್ಪಿನಕಾಯಿ ಇದೆಲ್ಲವೂ ಇದೆ.ಒಂದು ವೇಳೆ ಮೊಸ್ರು ಬೇಕಂದ್ರೆ 2 ರುಪಾಯಿ ಜಾಸ್ತಿ.ಬದುಕಿಗೆ ಬೇಕಾಗುವ ಊಟಕ್ಕೆ 5 ರುಪಾಯಿ.ಹಾಗೆಂದು ನಿಮ್ಗೆ ಇನ್ನೂ ಹೆಚ್ಚಿನ ಊಟ ಬೇಕಂದ್ರೆ 10 ರುಪಾಯಿಯದ್ದೂ ಇದೆ.ಈ ಹೋಟೆಲ್‌ಗೆ 72 ವರ್ಷಗಳ ಇತಿಹಾಸವಿದೆ.1938 ರಲ್ಲಿ ಸುಂದರ ಸರಳಾಯರ ತಂದೆ ವೆಂಕಟ್ರಮಣ ಸರಳಾಯರು ಆರಂಭಿಸಿದ ಹೋಟೆಲ್ ಅನೇಕ ಜನರ ಹೊಟ್ಟೆ ತುಂಬಿಸಿದೆ.ಮೊದಲು ಕೇವಲ 25 ಪೈಸೆ ಊಟ ಇಲ್ಲಿ ಸಿಗುತ್ತಿತ್ತು.ನಂತರ 1 ರುಪಾಯಿ , 2 ರುಪಾಯಿ ಈಗ 5 ರುಪಾಯಿಯವರೆಗೆ ಇದೆ ಎನ್ನುತ್ತಾರೆ ಸುಂದರ ಸರಳಾಯರು.

ಸುಳ್ಯದ ಈ ರಾಮ್‌ಪ್ರಸಾದ್ ಹೋಟೆಲ್‌ಗೆ ನಗರದ ವಿವಿದೆಡೆಯಿಂದ ಶಾಲಾ ಕಾಲೇಜು ವಿದ್ಯಾಥಿಗಳು ಆಗಮಿಸುತ್ತಾರೆ. ವಿದ್ಯಾರ್ಥಿಗಳಿಗಂತೂ ಇದೊಂದು ವರದಾನವಾಗಿದೆ.ಇಂದಿನ ದಿನದಲ್ಲಿ ಹೀಗೆ 5 ರುಪಾಯಿಗೆ ಊಟ ನೀಡುವುದಕ್ಕೆ ಸಾಧ್ಯವೇ ಎನ್ನುವ ಪ್ರಶ್ನೆಗೆ ಸರಳಾಯರು ಸರಳವಾಗಿ ಉತ್ತರಿಸೋದು ಹೇಗಂದ್ರೆ ಹೋಟೆಲ್‌ನಲ್ಲಿ ಕಡಿಮೆ ಜನರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದೇನೆ ಕುಟುಂಬದ ಸದಸ್ಯರೂ ಸಸಹಕರಿಸುತ್ತಾರೆ.ಇದರ ಜೊತೆಗೆ ಕ್ಯಾಟರಿಂಗ್ ವ್ಯವಸ್ಥೆಯೂ ಇರುವುದರಿಂದ ಹೇಗೋ ನಡೀತದೆ.ಜನ್ರಿಗೆ ಉಪಯೋಗವಾಗುತ್ತಲ್ಲಾ.. ಹಸಿದವರ ಹೊಟ್ಟೆ ತುಂಬುತ್ತಲ್ಲಾ ಅದೇ ನೆಮ್ಮದಿ ಅಂತಾರೆ ಅವರು. ಇನ್ನು ಜನ್ರೂ ಹಾಗೇ ಸುಳ್ಯದ ಬೇರೆ ಬೇರೆ ಕಡೆಯಿಂದ ಆಗಮಿಸಿ ಇಲ್ಲಿ ಊಟ ಮಾಡ್ತಾರೆ.ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲ ಅಧ್ಯಾಪಕರೂ ಆಗಮಿಸ್ತಾರೆ.ಇನ್ನೂ ಕೆಲವರು ಕಳೆದ 50 - 60 ವರ್ಷಗಳಿಂದ ಈ ಹೋಟೆಲ್‌ಗೆ ಊಟಕ್ಕೆ ಬರ್‍ತಾರೆ.ಒಳ್ಳೆಯ ಊಟ ಕೊಡ್ತಾರೆ ಅಂತಾರೆ ಜನ. .


ಇಂದಿನ ಬೆಲೆ ಏರಿಕೆಯ ಈ ಕಾಲದಲ್ಲೂ ಕೇವಲ 5 ರುಪಾಯಿಗೆ ಊಟ ನೀಡಿ ಊರ ಜನರ ಹೊಟ್ಟೆ ತುಂಬುವ ಈ ಹೋಟೆಲ್ ಉದ್ಯಮಿಯ ಸೇವೆ ಗುರುತರವಾದ್ದು.

3 ಕಾಮೆಂಟ್‌ಗಳು:

ಹರೀಶ ಮಾಂಬಾಡಿ ಹೇಳಿದರು...

ಒಮ್ಮೆ ಅಲ್ಲಿಗೆ ಹೋಗ್ಬೇಕು

ಕೇಸರಿ ಹೇಳಿದರು...

ಖಂಡಿತಾ.. ಒಳ್ಳೆಯ ಊಟ.. . .

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಹರೀಶ ಮಾಂಬಾಡಿಯವರೇ ಆ ಹೋಟೆಲ್ ಹೋಗ್ಬಹುದು . ಒಳ್ಳಯ ಊಟವಂತೂ ಇದೆ...

ಕೇಸರಿಯವರೇ, ಬಹುಶ: ನೀವು ಆ ಹೋಟೆಲ್ ಗೆ ಹೋಗಿದ್ದೀರಾ ಅಂತ ಅನ್ಸುತ್ತೆ. ಖಂಡಿತಾ ಒಳ್ಳೆಯ ಊಟ ಅಂದಿದ್ದೀರಿ.. ಥ್ಯಾಕ್ಸ್ . . .