ಮಲೆಯಾಳ ಚಾನೆಲ್ ನಲ್ಲಿ ಗಿಟಾರ್ ವಾದನದ ಲೈವ್ ಪ್ರಸಾರವಾಗುತ್ತಿತ್ತು.ಹಾಗಾಗಿ ಚಾನೆಲ್ಲನ್ನು ನೋಡುತ್ತಾ ಇದ್ದೆ. ಮತ್ತೂ ನೋಡಿದಾಗ ಅದೊಂದು “ಯುವ ಕಲೋತ್ಸವ” ನೇರಪ್ರಸಾರದ ಕಾರ್ಯಕ್ರಮ.
ಮತ್ತೂ ಕೆಲ ಕಾಲ ಆ ಚಾನೆಲ್ ನೋಡುತ್ತಿದ್ದಾಗ ಇನ್ನೂ ಅಚ್ಚರಿಯಾಗಿತು. ಚಾನೆಲ್ಲಿನ ಅಷ್ಟೂ ನ್ಯೂಸ್ ರೀಡರ್ಗಳು ಅಲ್ಲಿದ್ದರು. ಆ ಕಲೋತ್ವವ ಮುಗಿಯುತ್ತಿದ್ದಂತೆ ಇಡೀ ಕಾರ್ಯಕ್ರಮದ ಅವಲೋಕನ ನಡೆಯುತ್ತಿತ್ತು.ಯುವಕರ ಈ ಹಿಂದಿನ ಸಾಧೆನೆಗಳ ಪುನರಾವಲೋಕನ ನಡೆಯುತ್ತಿತ್ತು.
ನನ್ನ ಗೆಳೆಯನೊಬ್ಬ ಈ ಕುರಿತಾಗಿ ಹೇಳಿದ ,ಎಲ್ಲಾ ಮಲೆಯಾಳ ಚಾನೆಲ್ಲುಗಳು ಮಾತ್ರವಲ್ಲ ಮಾಧ್ಯಮಗಳು ಯುವಕಲೋತ್ಸವ (ಅಂದರೆ ಇಲ್ಲಿನ “ಯುವಜನ ಮೇಳ”) ಕುರಿತಾಗಿ ಸಮಗ್ರವಾಗಿ ವರದಿ ಮಾಡುತ್ತವೆ.ಚಾನೆಲ್ಲುಗಳಂತೂ ನೇರಪ್ರಸಾರ ಮಾಡುತ್ತವೆ. ಏನೇ ”ಗಂಭೀರ”ವಾದ ಸುದ್ದಿ ಇದ್ದರೂ ಕಲೋತ್ಸವದ ನೇರಪ್ರಸಾರ ಬಿಡುವುದಿಲ್ಲ ಎಂದು ಆತ ಹೇಳಿದ.
ಇದು ನೋಡಿದ ಬಳಿಕ ನನಗನ್ನಿಸಿತು .
ಇತ್ತೀಚೆಗೆ ಸುಳ್ಯದಲ್ಲಿ ರಾಜ್ಯ ಮಟ್ಟದ ಯುವಜನಮೇಳ ನಡೆದಿತ್ತು.ಬಹುಶ: ಅದು ದೊಡ್ಡ ಸಂಗತಿಯೆ ಆಗಿರಲಿಲ್ಲ.ಸಂಘಟಕರೂ ಹಾಗೆಯೇ ಕಾರ್ಯಕ್ರಮದ ಪ್ರಚಾರದ ವ್ಯವಸ್ಥೆಯನ್ನೂ ಮಾಡಿರಲಿಲ್ಲ.ಮಾಧ್ಯಮಗಳೂ ಹಾಗೆಯೇ ದೊಡ್ಡ ಸಂಗತಿಯೇ ಮಾಡಿರಲಿಲ್ಲ. ಯುವಜನ ಮೇಳವೆಂದರೆ ಅದು ಯುವಕರ ಸಾಧನೆ, ಕಲೆಯ ಪ್ರದರ್ಶನ ವೇದಿಕೆ.
ನೀವು ಬೇಕಾದರೆ ನೋಡಿ... ಪತ್ರಿಕೆಗಳಲ್ಲಿ, ಭಾಷಣಗಳಲ್ಲಿ ಯುವಜನತೆ.. ಹಾದಿ ತಪ್ಪಿದೆ.... ಹಾಗೆ.... ಹೀಗೆ.... ಅಂತೆಲ್ಲಾ ಭಾಷಣ ಬಿಗಿಯುತ್ತಾರೆ.ಇಂತಹ ಸಂಗತಿಗಳ ಬಗ್ಗೆ ಯೋಚಿಸಿಯೇ ಇಲ್ಲ.ನನಗನ್ನಿಸಿದ ಪ್ರಕಾರ ಸುಳ್ಯದ ಯುವಜನ ಮೇಳದ ಸುದ್ದಿ ಒಂದು ಕ್ಯಾಮಾರದಲ್ಲ್ಲಿ ಸ್ವಲ್ಪ ಬಂದಿದೆ.ಉಳಿದಾವ ಕ್ಯಾಮಾರಾಗಳು ಆನ್ ಆಗಿಯೇ ಇಲ್ಲ.ಆನ್ ಆದ ಕ್ಯಾಮಾರಾದ ಚಿತ್ರಗಳು ಬಂದೇ ಇಲ್ಲ್ಲ. “ಭಯಂಕರ” ಕ್ಯಾಮಾರಾಗಳೂ ಸುದ್ದಿಸ್ಪೋಟಿಸಲೇ ಇಲ್ಲ..!!. ನಮ್ಮಲ್ಲಿ ಕ್ರೈಂ ಗಳಿಗೆ ಬೇಕಾದಷ್ಟು ಜಾಗವಿದೆ. ಆದರೆ ಇಂತಹ ಹಬ್ಬಗಳ ಬಗ್ಗೆ ಏಕೆ ಗಮನಹರಿಸುವುದಿಲ್ಲ ಎನ್ನುವುದು ನಾಕಾಣೆ. ಮಲೆಯಾಳ ಚಾನೆಲ್ಲುಗಳೂ , ಮಾಧ್ಯಮಗಳೂ ಕ್ರೈಂಗಳಿಗೆ ಆದ್ಯತೆ ನೀಡುವುದರ ಜೊತೆಗೆ ಇಂತಹ ಕಾರ್ಯಕ್ರಮಗಳಿಗೂ ಆದ್ಯತೆ ನೀಡುತ್ತವೆ.ನಮ್ಮಲ್ಲಿ ಏಕೆ ಹೀಗೆ..?. ಅದೇ ಗಡಿವಿವಾದದ ನೇರ ಪ್ರಸಾರ, ಕೊಳವೆಬಾವಿಂಯಿಂದಲೇ ನೇರಪ್ರಸಾರ ಮಾಡುವ ಕ್ಯಾಮಾರಾಗಳು ಈ ಕಡೆಯೂ ಗಮನಹರಿಸಿದರೆ ಒಳ್ಳೆಯದಲ್ವೇ..? ಏನಂತೀರಿ..??
3 ಕಾಮೆಂಟ್ಗಳು:
ಸಕಾರಾತ್ಮಕ ಸುದ್ದಿಗೆ ಪ್ರಾಮುಖ್ಯತೆ ಇಲ್ಲವೆನ್ನುವಾಗ ಬೇಸರವಾಗುತ್ತದೆ.
hmmm
ನಮ್ಮಲ್ಲಿ ಯುವಜನೋತ್ಸವ ಎಂದರೆ ಅದೊಂದು ಪಕ್ಕಾ ಸರ್ಕಾರಿ ಕಾರ್ಯಕ್ರಮ ಅಷ್ಟೇ..ಎಷ್ಟೋ ಬಾರಿ ಪ್ರೇಕ್ಷಕರೇ ಇಲ್ಲದೆ ಖಾಲಿ ಕುರ್ಚಿಗಳ ಮುಂದೆ ವಿದ್ಯಾರ್ಥಿಗಳು ವೇದಿಕೆಯಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುತ್ತಾರೆ ! ಅದೇ ಕೇರಳದಲ್ಲಿ ನೋಡಿದರೆ ಅಲ್ಲಿನ ಶಾಲಾ ಮಟ್ಟದ ಬಾಲಕಲೋತ್ಸವಕ್ಕೂ ಇಡೀ ಊರಿಗೆ ಊರೇ ಸೇರುತ್ತದೆ. ನಮ್ಮ ಕಾರ್ಯಕ್ರಮಗಳ ಗುಣಮಟ್ಟದ ಬಗ್ಗೆ ಕೂಡಾ ಹೇಳಿಕೊಳ್ಳುವಂತಿಲ್ಲ.
ಕಾಮೆಂಟ್ ಪೋಸ್ಟ್ ಮಾಡಿ