ಶಾಲೆ ಬಿಟ್ಟು ಕಾಲೇಜು ಹತ್ತಿ ಅಲ್ಲಿಂದಲೂ ಇಳಿದು ಬಂದು ವೃತ್ತಿ-ಪ್ರವೃತ್ತಿಯ ಬದುಕಿನ ನಡುವೆ ಬದುಕುತ್ತಿರುವ ಈ ಸಮಯದಲ್ಲಿ ಅದ್ಯಾಕೋ ಏನೋ ಶಾಲಾ ಜೀವನ ನೆನಪಾಯಿತು.ಅಲ್ಲೋನೋ ಒಂದು ಸುಂದರ ಕ್ಷಣವಿದೆ. ಆ ಮುಗ್ದ ಮನಸ್ಸುಗಳಿಗೆ ಒಂದಿನಿತೂ ಮತ್ಸರವಿಲ್ಲ.ತನ್ನ ಗೆಳೆಯ ಅದ್ಯಾವುದೋ ನಾಟಕದಲ್ಲಿ ಭಾಗವಹಿಸುತ್ತಾನೆ ಎಂದಾದರೆ ಈತನಿಗೂ ಅದೇನೋ ಖುಷಿ.ಅಂದು ಇಡೀ ದಿನ ಮಕ್ಕಳಿಗೆಲ್ಲಾ ಸಂಭ್ರಮವೋ ಸಂಭ್ರಮ.ಅಂತಹ ಸಂಭ್ರಮದ ಕ್ಷಣದಲ್ಲಿ ಪಾಲ್ಗೊಳ್ಳಲು ಹೋಗಬೇಕೆನಿಸಿತು. ಅದಕ್ಕೆ ಸರಿಯಾಗಿ ಅವಕಾಶವೂ ಸಿಕ್ಕಿತು.
ಅಲ್ಲಿ ಮಕ್ಕಳ ಸಾಹಸ ಕ್ರೀಡಾ ಕೂಟಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು.ಅಂದರೆ ಮಕ್ಕಳ ಡ್ಯಾನ್ಷ್ , ನಾಟಕಕ್ಕಿಂತ ಮಕ್ಕಳದ್ದೇ ಸಾಹಸ ಕ್ರೀಡೆಗಳಿಗೆ ಆದ್ಯತೆ ನೀಡಲಾಗಿತ್ತು.ಅದರ ಜೊತೆಗೆ “ಸತ್ಯ ಹರಿಶ್ಚಂದ್ರ”ಎಂಬ ರೂಪಕವನ್ನು ಕೂಡಾ ನಡು ನಡುವೆ ಜೋಡಿಸಿದ್ದರು.ಮೇಲ್ನೋಟಕ್ಕೆ ಇದೊಂದು ಬೋರಿಂಗ್ ಅಂತ ಅನಿಸಿದರೂ ಮಕ್ಕಳು ಈ ರೂಪಕವನ್ನು ಚೆನ್ನಾಗಿ ನಿರೂಪಿಸಿದ್ದರು.
ನಿಜಕ್ಕೂ ಹರಿಶ್ಚಂದ್ರ ನಾಟಕ ಯಾವ ಕಾಲಕ್ಕೂ ಸೂಕ್ತವಾದ್ದು ಮತ್ತು ಅದರ ಒಳನೋಟ ಎಷ್ಟು ಚೆನ್ನಾಗಿದೆ.ಆದರೆ ಇಂದ್ಯಾವ ನಾಟಕಗಳೂ ಹಾಗೆ ಕಾಣಿಸುತ್ತಿಲ್ಲ.ಎಲ್ಲೋ ಒಂದಷ್ಟು ಕಾಲ ಜನರ ಮನಸ್ಸಿನಲ್ಲಿ ಓಡಾಡಿ ಮತ್ತೆ ಮರೆಯಾಗಿ ಬಿಡುತ್ತದೆ.ಆದರೆ ಇದು ಹಾಗಲ್ಲ.ಎಲ್ಲೋ ಇಲ್ಲೇ ಆ ಘಟನೆ ನಡೆಯುತ್ತಿದೆ ಎನ್ನುವ ಹಾಗೆ ಭ್ರಮಿಸಬೇಕಾಗುತ್ತದೆ.ಅನೇಕರು ಈ ನಾಟಕವನ್ನು ನೋಡಿ ಕಣ್ಣೀರು ಸುರಿಸಿದ್ದೂ ಇದೆ.ಆ ನಾಟಕದ ಪ್ರೆಸೆಂಟೇಶನ್ ಕೂಡಾ ಅದೇ ರೀತಿ ಇರಬೇಕು.
ದುರದೃಷ್ಠ ನೋಡಿ.....,
"ಸತ್ಯ"ದ ನಾಟಕ ನೋಡಿ ಇತ್ತ ಕಡೆ ಬರಬೇಕಾದ್ರೆ ಸುಳ್ಳಿನ ಮೇಲೆ ಸುಳ್ಳು ಹೇಳುವ ಮಂದಿ ಕಾಣುತ್ತಾರೆ.ಎಂತಹಾ ಜನ ನಾವಲ್ಲ? ಅಲ್ಲಿ ಕಣ್ಣಿರು ಸುರಿಸಿ ಇಲ್ಲಿ ನಾವೇ ನಾಟಕ ಮಾಡುವ ಸನ್ನಿವೇಶ.
ಕಾಲವೇ ಹಾಗೆ ಮಾಡುತ್ತಾ? ಗೊತ್ತಿಲ್ಲ.!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ