ನೆನಪುಗಳು ಹಿಂದೋಡಿತು . . . .
ಆದರೆ ಈಗ ಆ ವಸ್ತುಗಳು ಕಳೆದು ಹೋಗಿದೆ , ಮತ್ತೆ ಸಿಗಲಾರದು ಎಂದು ಅನಿಸಿದೆ.ಅದು ನಿಜವೂ ಹೌದು.ಆ ವಸ್ತು ಮತ್ಯಾವುದೂ ಅಲ್ಲಬಾಲ್ಯ.
ಆ ಬಾಲ್ಯದ ಪೀಕಲಾಟಗಳು, ಆಟಗಳು ಎಲ್ಲವೂ ಕಣ್ಣ ಮುಂದೆ ಬಂದವು. ಆದರೆ ಕಾಲ ಮತ್ತೆ ಬರುವುದಿಲ್ಲ....., ನೆನಪುಗಳು ಮತ್ತೆ ಬರುತ್ತದೆ... ಕಾಡುತ್ತದೆ.... ಇದಕ್ಕೆ ಕಾರಣವಾದದ್ದು ಯಾವುದು ಗೊತ್ತಾ..?. ಉಜಿರೆಯ ತುಳು ಗ್ರಾಮ.
ಅಲ್ಲಿ ಒಂದಿಬ್ಬರು ಚಿಕ್ಕ ಮಕ್ಕಳು ಹಾಳೆಯ ಮೇಲೆ ಆಟವಾಡುತ್ತಿದ್ದರು, ಗಾಲಿ ಚಕ್ರದ ಮೇಲೆ ಎಳೆದಾಡುತ್ತಿದ್ದರು.ಯಾವುದೇ ಮತ್ಸರವಿಲ್ಲದೆ ಆತನೊಬ್ಬನೇ ಸುಮಾರು ಹೊತ್ತು ತನ್ನ ಗೆಳೆಯನ್ನು ಎಳೆದಾಡುತ್ತಲೇ ಇದ್ದ.ಸುಸ್ತಾಗಿ ಆತ ಕುಳಿತು ಇನ್ನೊಬ್ಬ ಎಳೆಯುತ್ತಾನೆ.ನಾವು ಕೂಡಾ ಬಾಲ್ಯದಲ್ಲಿ ಆಡುತ್ತಿದ್ದ ಆಟಗಳು ಅದೇ. ಇಂದಿನಂತೆ ಕಂಪ್ಯೂಟರ್, ಮೊಬೈಲ್ ನಂತಹ ಆಧುನಿಕವಾದ ಯಾವುದೇ ವ್ಯವಸ್ಥೆ ಇರಲಿಲ್ಲ. ನನ್ನ ಅಣ್ಣನಲ್ಲಿದ್ದ ಒಂದು ಸೈಕಲ್ ಹಾಗೂ ಅಣ್ಣ ನಮೆಗೆಲ್ಲರಿಗೂ ಡ್ರೈವಿಂಗ್ ಸ್ಕೂಲ್ ತರ. ಹಾಗೆಯೇ ಶಾಲೆಗೆ ಹೋಗುವಾಗಲೂ ಯಾರೊಬ್ಬರಲ್ಲಾದರೂ ಸೈಕಲ್ ಇದ್ದರೆ ಅದರ ಜೊತೆ ನಮ್ಮ ಓಟ. ಅದೂ 4- 5 ಕಿಲೋ ಮೀಟರ್ ದೂರ..!!. ಇನ್ನೂ ಒಂದಿತ್ತು.ನಮ್ಮ ಊರಿಗೆ ಸೈಕಲ್ ನಲ್ಲಿ ಬ್ರೆಡ್ , ಐಸ್ ಕ್ಯಾಂಡಿ ಮಾರಾಟ ಮಾಡಿಕೊಂಡು ಬರುವವರಿದ್ದರು. ಆ ಸೈಕಲನ್ನು ಒಂದಷ್ಟು ದೂರ ತಳ್ಳಿದರೆ ಕೊನೆಗೆ ಯಾವುದಾದರೊಂದು ಐಟಂ ಕೊಡುತ್ತಿದ್ದ ಅದೇ ಖುಷಿ. ಆ ಆಸೆಗಾಗಿಯೇ ಸೈಕಲ್ ತಳ್ಳಿದ್ದೂ ಇದೆ. ಅದೂ ಅಲ್ಲ ಆಗೆಲ್ಲಾ ಶಾಲೆಗೆ ಹೋಗೋದೆಂದ್ರೆ 4 - 5 ಕಿಲೋ ಮೀಟರ್ ದೂರ ನಡಿಗೆ ಗ್ಯಾರಂಟಿ. ನಾನು ಪ್ರತೀ ದಿನ 10 ಕಿಲೋ ಮೀಟರ್ ದೂರ ನಡೀತಾ ಇದ್ದೆ. ಆಗ ನಾವೆಲ್ಲಾ ಒಂದಿಷ್ಟು ಗೆಳೆಯರು ಸೇರಿಕೊಡು ಜೊತೆಯಾಗಿ ಹೋಗೋ ಸಂಪ್ರದಾಯ.
ಆದರೆ ಈಗ ಕಾಲ ಹಾಗಿಲ್ಲ.ಮನೆಯಂಗಳದಿಂದಲೇ ಶಾಲಾ ಬಸ್ಸಿಗೆ ಹತ್ತಿ ಶಾಲಾ ಕ್ಲಾಸಿನ ಎದುರೇ ಇಳಿಯುವ ಯುಗ ಇದು.ಹಾಗಾಗಿ ಗೆಳೆಯರೂ ಇಲ್ಲ, ಆಟವೂ ಇಲ್ಲ, ಕಷ್ಟವೂ ಇಲ್ಲ.ಅದಕ್ಕಿಂತಲೂ ಹೆಚ್ಚಾಗಿ ಬದುಕಿನ ಒಳನೋಟಗಳು ಇಲ್ಲ. ಆದರೆ ಪೀಕಲಾಟವೊಂದಿದೆ. ಇಂದಿನ ದಿನಕ್ಕೆ ಈ ವ್ಯವಸ್ಥೆಗಳೆಲ್ಲಾ ಅನಿವಾರ್ಯವೆನ್ನಿ.
ಹಾಗಾಗಿ ನನಗನ್ನಿಸಿದ್ದು ಕೇವಲ ಹತ್ತಿಪ್ಪತ್ತು ವರ್ಷದಲ್ಲೇ ಏನೊಂದು ಬದಲಾವಣೆಯಾಗಿದೆ.ಹಾಗಿದ್ದರೆ ಒಂದು ಶತಮಾನದ ಹಿಂದಿನ ಕಾಲ ಹೇಗಿದ್ದಿರಬಹುದು..?. ಅದರ ಒಂದು ತುಣುಕು ಬಹುಶ: ಉಜಿರೆಯಲ್ಲಿ ದರ್ಶನವಾಗಿದೆ.ಅದು ಎಷ್ಟು ಅನಿವಾರ್ಯವೋ ಗೊತ್ತಿಲ್ಲ ಮತ್ತು ಅದು ಇಂದಿನ ದಿನದಲ್ಲಿ ಉಳಿದುಕೊಳ್ಳುತ್ತದೆ ಎಂದೂ ಅಲ್ಲ ಆದರೂ ಒಮ್ಮೆ ನೆನಪುಗಳು ಮರುಕಳಿಸಿದೆಯಲ್ಲಾ ಅಷ್ಟು ಸಾಕು....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ