28 ಜನವರಿ 2009
ದೊಡ್ಡವರು ಅಂದ್ರೆ...
ಕಾಸರಗೋಡಿನ ಕುಂಬ್ಳೆ ನೆನಪಾದಾಗಲೆಲ್ಲಾ ಕ್ರಿಕೆಟ್ ನೆನಪಾಗುತ್ತದೆ , ಅನಿಲ್ ನೆನಪಾಗುತ್ತಾರೆ. ಆದರೆ ಆ ಅನಿಲ್ ಇಂದು ಮಾಜಿ. ಇಂತಹ ಕುಂಬ್ಳೆ ಮೊನ್ನೆ ಧರ್ಮಸ್ಥಳ, ಸುಬ್ರಹ್ಮಣ್ಯ ಸೇರಿದಂತೆ ವಿವಿದೆಡೆ ಪ್ರಯಾಣ ಬೆಳೆಸಿದ್ದರು.ಜೊತೆಗೆ ಅವ್ರ ಪತ್ನಿಯೂ ಇದ್ದರು. ಸಹಜವಾಗಿಯೇ ಅವ್ರ ಅಭಿಮಾನಿಗಳಿಗೆ ಖುಷಿಯೋ ಖುಷಿ.. ಅನಿಲ್ ಬಂದಿದ್ದಾರೆ ಅವರೊಂದಿಗೆ ನಿಂತು ಫೋಟೋ ತೆಗೆಸಿಕೊಳ್ಳಬೇಕು, ಆಟೋಗ್ರಾಫ್ ಕೇಳಬೇಕು... ಹೀಗೆ ಕನಸುಗಳನ್ನು ಕಟ್ಟಿಕೊಂಡಿದ್ದರು. ಆದರೆ ಅವರಾರಿಗೂ ಇದು ಕೈಗೂಡಲಿಲ್ಲ. ಕಾರಣ ಅದಾವುದಕ್ಕೂ ಅವರು ಸಮ್ಮತಿಸಲೇ ಇಲ್ಲ. ಫೋಟೋ ತೆಗಿತಾರೆ ನೋಡ್ರಿ ಅಂತ ಅವರ ಪತ್ನಿ ಅವರಿಗೆ ಆಗಾಗ ಹೇಳುತ್ತಿದ್ದರು. ಬೇಡ ಅಂದ್ರೂ ಅಭಿಮಾನಿಗಳು ಕೇಳಬೇಕೇ ಫೋಟೋ ತೆಗಿತಾನೇ ಇದ್ರು.
ಹೀಗೆ ಅಭಿಮಾನಿಗಳ ಕಾಟದ ನಡುವೆ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿ ತೆರಳಿದರು. ಮತ್ತೆ ಜನ ಹೇಳುತ್ತಿದ್ದದು ಹೇಳಲು ದೊಡ್ಡ ಜನ ಒಂದು ಫೋಟೋಕ್ಕೂ ಅವಕಾಶ ಕೊಟ್ಟಿಲ್ಲ...!!. ಅದಲ್ಲದೆ ಆತ ಈಗ ಮಾಜಿ .. ಆದ್ರೂ ಏನು ಗತ್ತು.. ಅಂದು ಸಚಿನ್ ಬಂದಿದ್ದಾಗಲೂ ಹೀಗೆ ಮಾಡಿಲ್ಲಪ್ಪ... ಇನ್ನೇನಿದ್ರೂ ಕುಂಬ್ಳೆ ಮಾಜಿಯಲ್ವಾ.. ಅವರ ಆಟ ನೋಡಲು ಇಲ್ಲ ಬಿಡಿ.. ಫೋಟೋ ಕೊಟ್ಟೀಲ್ಲಾಂದ್ರೆ ಅಷ್ಟೇ ಹೋಯ್ತು... ಅಂತ ಗೊಣಗುಟ್ಟಿದರು.
ಮಾಜಿಯಾದ್ರೆ ಇಷ್ಟೇನಾ ಬೆಲೆ..!! . ಹಾಗಾದ್ರೆ , ಅಷ್ಟು ಗೊತ್ತಿದ್ದ ಮೇಲೆ ಗತ್ತು ಯಾಕೆ ??..
ದೊಡ್ಡವರ ಸಣ್ಣತನ ಅಂದ್ರೆ ಇದೇನಾ..??
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
2 ಕಾಮೆಂಟ್ಗಳು:
ಮಹೇಶಣ್ಣ,
ಪಾಪ ಅನಿಲ್ ಕುಂಬ್ಲೇ ಯವರು ದೇವಸ್ಥಾನಕ್ಕೆ ಪೂಜೆಗಾಗಿ ಬಂದಿರುತ್ತಾರಲ್ವ ಅವರಿಗೆ ಅವರದೇ ಏನೋ ಚಿಂತೆ ಇರಬೇಕು...ಮತ್ತೆ ಜನರ ನಿರೀಕ್ಷೆಯಂತೆ ಅವರು ಇರಬೇಕಂತಿಲ್ಲವಲ್ಲ.....ಹೇಗೂ ಮಾಜಿಯಾಗಿದ್ದರಿಂದ ಹಾಗೆ ಇರಬಹುದು....ಅಲ್ಲವೇ.....
ಮಹೇಶ, ಈ ರೀತಿಯಲ್ಲಿ ಸಾವಿರಾರು ಅನುಭವಗಳು ಬಂದಾಗಲಾದರೂ ನಮ್ಮವರಿಗೆ, ಭಗತ್ ಸಿಂಗ್, ಸುಭಾಷ್ಚಂದ್ರ ಬೋಸ್, ವಿವೇಕಾನಂದ, ನರೇಂದ್ರ ಮೋದಿಗಳು ನಾಯಕರಾಬಹುದೆಂಬ ಆಶಾಭಾವ ನನ್ನದು, ಇಂಥದು ಇನ್ನೂ ಹೆಚ್ಚು ನಡೆಯಲಿ.
ಕಾಮೆಂಟ್ ಪೋಸ್ಟ್ ಮಾಡಿ