ಅಯ್ಯೋ. . ಏನೊಂದು ಗಲಾಟೆ. . ಏನೊಂದು ಚರ್ಚೆ...!!!
ಹೌದು ಇದೆಲ್ಲಾ ನಡೆದದ್ದು ಇಂಧನಕ್ಕಾಗಿ. . .!!!.
ಕೇವಲ ಒಂದು ದಿನ ಮಾತ್ರಾ ಇಂಧನದ ಕೊರತೆ ಕಂಡುಬಂದಿತ್ತು. ಅದಾಗಲೇ ಎಲ್ಲೆಡೆ ಹಾಹಾಕಾರ!!. ಇದು ನಮ್ಮಲ್ಲಿ ಮಾತ್ರವಲ್ಲ ಬಹುತೇಕ ಕಡೆಗಳಲ್ಲಿ ಇದೇ ರಗಳೆಯಿತ್ತು. ಒಂದು ಲೀಟರ್ ಡೀಸಲ್, ಪೆಟ್ರೋಲ್ ಗಾಗಿ ಪರಿಪರಿಯಾಗಿ ಬೇಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೀಗೆ ಇಂಧನ ಕೊರತೆಯಾದಾಗ ಅದರ ಕಾರಣಗಳನ್ನು ಹುಡುಕಿ ಸರಕಾರ ಸ್ಪಂದಿಸಬೇಕು ಅಂತ ನಾವೆಲ್ಲಾ ಬೊಬ್ಬಿಡುವುದು ಸಹಜವೇ. ನಮ್ಮ ಆಕ್ರೋಶವನ್ನು ಹೇಗಾದರೂ ಮಾಡಿ ವ್ಯಕ್ತ ಪಡಿಸುತ್ತೇವೆ.
ಇನ್ನೊಂದು ವಿಷಯ ಹೀಗೆ ಇಂಧನದ ಕೊರತೆಯಾದಾಗ ಅನೇಕರು ಕಾಡುವುದು ಇನ್ನೊಬ್ಬರನ್ನು , ಕೊನೆಗೆ ಅವರಿಗೂ ಇಲ್ಲ ಇವರಿಗೂ ಇಲ್ಲ.
ಅದು ಬಿಡಿ ನಾನೂ ಇಂದೊಂದು ಕಾರ್ಯಕ್ರಮವನ್ನು ರದ್ದು ಮಾಡಬೇಕಾಯಿತು.ಅದಕ್ಕೆ ಕಾರಣವಾದದ್ದು ಪೆಟ್ರೋಲ್. ನನ್ನ ಬೈಕ್ ನಲ್ಲೂ ಇನ್ನೊ೦ದು ವಾಹನದಲ್ಲೂ ಪೆಟ್ರೋಲ್ ಬರಿದಾಗುವ ಸನಿಹದಲ್ಲಿತ್ತು. ಹಾಗಾಗಿ ಅಷ್ಟೊಂದು ಅನಿವಾರ್ಯವಲ್ಲದ ಕಾರ್ಯಕ್ರಮವನ್ನು ರದ್ದು ಮಾಡಬೇಕಾಯಿತು.ಇದು ನನ್ನದೊಬ್ಬನದೇ ಅಲ್ಲ ಅನೇಕರ ಪಾಡು ಹೀಗೆಯೇ ಇತ್ತು.
ನನಗನ್ನಿಸಿದ್ದು ಅದಲ್ಲ.
ಇಂದು ಇಂಧನ ಅಷ್ಟು ಅನಿವಾರ್ಯವಾಗಿ ಬಿಟ್ಟಿದೆ. ಒಂದು ವೇಳೆ ಇಡೀ ದೇಶದಲ್ಲಿ ಮುಂದೊಂದು ದಿನ ಇಂಧನವೆ ಇಲ್ಲ ಎಂದಾದರೇ ಜನ ಬದುಕುವುದು ಹೇಗೆ?. ಈಗಲೇ ಇಂಧನದ ಕೊರತೆ ದೇಶದಲ್ಲಿ ಕಾಡುತ್ತಿದೆ. ಸ್ವಂತ ಇಂಧನ ನಿಕ್ಷೇಪಗಳು ಹೆಚ್ಚೇನು ಇಲ್ಲ.ವಿದೇಶಗಳಿಂದ ಆಮದಾಗಬೇಕು. ಒಂದು ವೇಳೆ ಅದು ನಿಂತರೆ ಪರ್ಯಾಯವೇನು?. ಬೆಂಗಳೂರಿನಂತಹ , ಮಂಗಳೂರಿನಂತಹ ನಗರಗಳು ಚಲಿಸುವುದೇ ಈ ಇಂಧನದಿಂದ.ಒಂದು ವೇಳೆ ಅದೇ ಇಲ್ಲವಾದರೆ ಬದುಕೂ ಇಲ್ಲವಾಗುವುದರಲ್ಲಿ ಸಂದೇಹವೇ ಇಲ್ಲ. ಮನೆಯಿಂದ ಕಾಲಿಡುವುದೇ ಕಾರಿನೊಳಗೆ ಆಗ ಏನು ಗತಿ..? ಇನ್ನೂ ಸ್ವಲ್ಪ ಹಿಂದಕ್ಕೆ ಹೋದರೆ ನನ್ನ ನೆನಪು ಆಗ ನೋಡಿದರೆ ಪೆಟ್ರೋಲ್ ಗೆ 8 ರೂ ಇತ್ತು. ಡೀಸಲ್ ಗೆ 3 ರೂ ಇತ್ತು. ಆದರೆ ಈಗ ...?.ಹೀಗೆಯೇ ಮುಂದುವರಿದರೆ ಮುಂದೆ...??
ಮೊನ್ನೆ ಹೀಗೆಯೇ ನಾನು ಮತ್ತು ಅಮ್ಮ ಬೇರೊಂದು ಕಾರ್ಯಕ್ರಮಕ್ಕೆ ಹೋಗಿ ಬರುತ್ತಲಿರುವಾಗ ಮುಳ್ಳೇರಿಯಾದಿಂದ ಮುಂದೆ ಬರುವಾಗ ಪರಪ್ಪೆಯ ಹತ್ತಿರ ಸಾಗುವಾಗ ಅಂದು ನಾವೆಲ್ಲಾ ಮನೆಯಿಂದ [ ತಾಯಿಯ ಮನೆ] ಬರುತ್ತಿದ್ದು ದು ಇಲ್ಲೇ , ಅದೂ ಹೊಳೆಯನ್ನು ದೋಣಿಯಲ್ಲಿ ದಾಟಿ ಮುಂದೆ ಸುಮಾರು 2 ರಿಂದ 3 ಗಂಟೆಗಳ ಕಾಲ್ನಡಿಗೆ ಪಯಣ. ನಾನು ಚಿಕ್ಕವನಿದ್ದಾಗಲೂ ನಡೆದು ಅಜ್ಜನ ಮನೆಗೆ ಹೋದ ಘಟನೆ ಆಗ ನೆನಪಾಯಿತು. ಆದರೆ ಇಂದು ಹಾಗೆ ನಡೆಯುದು ಕನಸಿನ ಮಾತು. ಹಾಗೆಂದು ನಾನು ಯೋಚಿಸುತ್ತಿದ್ದದ್ದು ಅದೇ ಅಜ್ಜನ ಮನೆಯಿಂದ ಕಾರಿನಲ್ಲಿ ಬರುವಾಗ. ಎಂತಹ ತುರ್ತಿನಲ್ಲಿ ನಾವು ಇದ್ದೇವೆ ಅಂತ ನನಗನ್ನಿಸಿತು. ಆದರೆ ಅದು ಇಂದು ಅನಿವಾರ್ಯ ಕೂಡಾ ಹೌದು.
ಇಷ್ಟೆಲ್ಲಾ ನೆನಪಾದದ್ದು ಇಂಧನದ ಕಾರಣಕ್ಕೆ. ಇಂಧನ ಇಂದು ಎಷ್ಟು ಅನಿವಾರ್ಯ ಅಲ್ವಾ...???
1 ಕಾಮೆಂಟ್:
ಅಣ್ಣಾ,
ನಿನ್ನೆ ಬೆಂಗಳೂರಿನಲ್ಲಿ ಪೆಟ್ರೋಲ್ ಇಲ್ಲದೆ ನಾನು ಅನೇಕ ಕೆಲಸಗಳನ್ನು ಮುಂದೂಡಬೇಕಾಯಿತು..ತುರ್ತು ಪರಿಸ್ಥಿತಿಗೆ ಬಸ್ಸಿನಲ್ಲಿ ಹೋದೆ....ಈಗಲೇ ಈಗಾದರೆ ಮುಂದೆ ಹೇಗೋ ಅನ್ನುವ ಚಿಂತೆ ಕಾಡುತ್ತಿದೆ....
ಕಾಮೆಂಟ್ ಪೋಸ್ಟ್ ಮಾಡಿ