(Photo from net)
ಆ ವಿಡಿಯೋ ದೇಶದಲ್ಲೆಲ್ಲಾ ಹರಿದಾಡಿತು. . ನೋಡಿದ ಜನ ಹೀಗೂ ಆಗುತ್ತಲ್ಲಾ ಅಂದರು. . ಅದೇ ಘಟನೆಗಾಗಿ ಭಾರೀ ಚರ್ಚೆಯಾಯಿತು,. . ಆದರೆ ಯಾರೊಬ್ಬರೂ ಅದಕ್ಕೆ ಪರಿಹಾರ ಏನು ಎಂಬ ಬಗ್ಗೆ ಹೇಳಿಲ್ಲ, ಸಮಸ್ಯೆಯ ಮೂಲದ ಬಗ್ಗೆ ಮಾತಾಡಿಲ್ಲ. . ಈಗ ಬೇಕಿರುವುದು ರೋಗಕ್ಕೆ ಮದ್ದೇ ಹೊರತು ಬ್ಯಾಂಡೇಜ್ ಅಲ್ಲ, ರೋಗದ ಬಗ್ಗೆಯೇ ವೈಭವ ಅಲ್ಲ. .
ನಾನು ಯೋಚಿಸಿದ್ದು ಮಂಗಳೂರಿನ ಅತ್ತಾವರದ ಬಳಿ ನಡೆದ ಹಲ್ಲೆ ಪ್ರಕರಣ. ಒಂದಷ್ಟು ಹುಡುಗರು ಸೇರಿ ಇನ್ನೊಬ್ಬ ಹುಡುಗನಿಗೆ ಹೊಡೆಯುತ್ತಿದ್ದರು, ಮತ್ತೊಬ್ಬ ಹುಡುಗ ಅದನ್ನೆಲ್ಲಾ ವಿಡಿಯೋ, ಫೋಟೊ ತೆಗೆದ ವಾಟ್ಸ್‍ಪ್‍ನಲ್ಲಿ ಶೇರ್ ಮಾಡಿದ. ಅಷ್ಟೇ ಸಾಕಾಯಿತು.. ಇಂದು ಇಡೀ ಚೆರ್ಚ ಶುರುವಾಗಿದೆ. ಈ ವಿಡಿಯೋ ದಾಖಲಾಗದೆ ಮತ್ತೆಷ್ಟೋ ಘಟನೆಗಳು ನಮ್ಮಲ್ಲಿ ನಡೆಯುತ್ತದೆ, ಚರ್ಚೆಯಾಗೋಲ್ಲ, ದೇಶದವರೆಗೆ ಹೋಗೋಲ್ಲ. ಇದು ವಿಡಿಯೋ ಸಹಿತ ಸಾಕ್ಷಿ ಸಿಕ್ಕಿದೆ ಎಂಬ ಕಾರಣಕ್ಕೆ ದೊಡ್ಡ ಸುದ್ದಿಯಾಯಿತು. ಸುದ್ದಿಯಾಗಿದೆ . . . ಸುದ್ದಿಯಾಗಬೇಕು, ಹಲ್ಲೆ ಮಾಡುವ ಹಕ್ಕು ಯಾರಿಯೂ ಇಲ್ಲ, ಅದಕ್ಕೇ ಕಾನೂನು ಇದೆ, ಅನುಷ್ಟಾನ ಮಾಡಲು ಪೊಲೀಸರು ಇದ್ದಾರೆ. ಆದರೆ. . . . .?
ಈ ಎಲ್ಲಾ ಪ್ರಕರಣ ಏಕೆ ನಡೆಯುತ್ತದೆ ಎಂದು ಸುಮ್ಮನೆ ಯೋಚಿಸಿದಾಗ, ಕಾನೂನು ಇದೆ ನಿಜ ಇದೆ , ಅದು ಪಾಲನೆಯಾಗುತ್ತಿಲ್ಲ , ಹೀಗಾಗಿಯೇ ಆಕ್ರೋಶ ಹೆಚ್ಚಾಗಿ ಇಂತಹ ಪ್ರಕರಣಗಳೂ ಹೆಚ್ಚಾಗುತ್ತಿದೆ. ಸಿಕ್ಕಿದವನು ಯಾರೇ ಇರಲಿ, ಪೆಟ್ಟು ತಿನ್ನಲು ಸಿದ್ದವಾಗಿರಬೇಕು. ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಯುವತಿಯೊಬ್ಬಳು ಅನ್ಯಧರ್ಮದ ಯುವಕನೊಬ್ಬನೊಂದಿಗೆ ಮಾತನಾಡುತ್ತಿದ್ದಳು, ಅವನದೇ ಕಾರಿನಲ್ಲಿ ಹೋಗುತ್ತಿದ್ದಳು ಎಂಬ ಕಾರಣಕ್ಕೆ ಹಲ್ಲೆ ನಡೆದಿದೆ ಎಂದು ಈಗ ನಾವು ಮಾತನಾಡುತ್ತೇವೆ. ಇದು ಸಾಂಕೇತಿಕವಾಗಿರಬಹುದು , ಹುಡುಗನೊಬ್ಬ ಹುಡುಗಿಯೊಂದಿಗೆ ಮಾತನಾಡುವುದು ತಪ್ಪಲ್ಲ ನಿಜ, ಇಬ್ಬರೂ ಒಪ್ಪಿ ಮಾತನಾಡುವ, ಸುತ್ತಾಡುವ ಅಥವಾ ಇನ್ಯಾವುದೇ ಸಂಗತಿಗಳಿಗೆ ಯಾರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಆದರೆ ಆ ನಂತರ ಮುಂದೆ ಆಗುವ ಅನಾಹುತಗಳ ಬಗ್ಗೆ ನಮ್ಮಲ್ಲಿ ಎಷ್ಟು ಪ್ರಕರಣಗಳಲ್ಲಿ ಕ್ರಮವಾಗಿದೆ ?. ಕಾನೂನು ಕ್ರಮ ಎಲ್ಲಾಗಿದೆ ?. ಎಲ್ಲೋ ಒಂದೆರಡು ಪ್ರಕರಣದಲ್ಲಿ ಕಾನೂನು ಪ್ರಕಾರ ಶಿಕ್ಷೆ ಆಗಿರಬಹುದು , ಆದರೆ ಬಹುತೇಕ ಪ್ರಕರಣಗಳಲ್ಲಿ ಶಿಕ್ಷೆಯಾಗಿಲ್ಲ, ದೊಡ್ಡಮಟ್ಟದಲ್ಲಿ ಸುದ್ದ್ದಿಯಾದ ಪ್ರಕರಣಗಳಲ್ಲಿ ಮಾತ್ರವೇ ಶಿಕ್ಷೆಯಾಗಿದೆ.
ನಮ್ಮೂರಲ್ಲೇ ನೋಡುವುದಾದರೆ ತೀರಾ ಹಳೆಯದು ಎಂದರೆ ಪುತ್ತೂರಿನ ಸೌಮ್ಯ ಭಟ್ ಕೊಲೆ ಪ್ರಕರಣದಲ್ಲಿ ಗಮನಿಸಿ ಆರೋಪಿಗೆ ಶಿಕ್ಷೆಯಾಗಿದೆಯೇ ,ಆ ಆರೋಪಿ ಈಗಲೂ ನಾಪತ್ತೆ. .?, ಇನ್ನೂ ಅಲ್ಲೇ ಹತ್ತಿರದ ಮತ್ತೊಬ್ಬ ವಿದ್ಯಾರ್ಥಿನಿಯ ಮೇಲೆ ನಡೆದ ಪ್ರಕರಣದಲ್ಲಿ ಶಿಕ್ಷೆಯಾಗಿದೆಯೇ,ಉಜಿರೆಯ ವಿದ್ಯಾರ್ಥಿನಿಯ ಕತೆ ಏನಾಯಿತು. .?, ಕೊಣಾಜೆಯಲ್ಲಿ ನಡೆದ ಪ್ರಕರಣದಲ್ಲಿ ಏನಾಗಿದೆ. . ?,ಮಂಗಳೂರಿನಲ್ಲಿ ಗಾಂಜಾ ಮಾರಾಟ ಪ್ರಕರಣ ಏನಾಯಿತು ?,ಕುಂದಾಪುರದಲ್ಲಿ ಬಾಲಕಿ ಕೊಲೆ ಪ್ರಕರಣದ ಮುಂದಿನ ಬೆಳವಣಿಗೆ ಏನು ?, ವಿದ್ಯಾರ್ಥಿನಿಯರ ವಿಡಿಯೋ ಹರಿದಾಡಿದ ಕೇಸ್‍ಗಳು ಏನಾದವು . .?, ಮೊನ್ನೆ ಮೊನ್ನೆ ಹೇಳುವ ಪುತ್ತೂರಿನ ವಿದ್ಯಾರ್ಥಿನಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಆರೋಪಿ ಬಾಲಾಪರಾಧಿ ಎಂದು ಹೇಳಿಲ್ಲವೇ . .?.. . . . . . ಹೀಗೇ ಒಂದೆರಡಲ್ಲ ಹಲವಾರು ಪ್ರರಕಣಗಳು ನಮ್ಮಲ್ಲಿದೆ. ಯಾವುದರಲ್ಲೂ ಸರಿಯಾದ ನ್ಯಾಯ ಸಿಕ್ಕಿಲ್ಲ.ಒಂದು ವೇಳೆ ಈ ಎಲ್ಲಾ ಪ್ರಕರಣಗಳಿಗೆ ನ್ಯಾಯ ಸಿಗುತ್ತಿದ್ದರೆ. ಈ ಹುಡುಗರು ಹಲ್ಲೆ ಮಾಡುತ್ತಿದ್ದರೇ. .?, ಯೋಚಿಸಬೇಕು.
ನ್ಯಾಯ ಸಿಗದೇ ಇರುವ ಕಾರಣದಿಂದಲೇ ಇಂದು ಪೊಲೀಸ್ ಇಲಾಖೆ ಹೋಗುವ ಮೊದಲೇ ಹಲ್ಲೆ ನಡೆಯುತ್ತದೆ. ಇದನ್ನೇ ನೈತಿಕ ಪೊಲೀಸ್‍ಗಿರಿ ಎನ್ನುತ್ತೇವೆ.ಈಗ ಒಬ್ಬ ಹುಡುಗ ಇನ್ನೊಂದು ಹುಡುಗಿಯ ಜೊತೆ ಮಾತನಾಡಲಾಗದ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಜೊತೆಯಲ್ಲಿ ಹೋದರೇ ಪೆಟ್ಟು ತಿನ್ನುವ ಸಂದರ್ಭ ಒದಗಿದೆ.ಇದಕ್ಕೆ ಹೊಣೆ ಯಾರು ?, ಹೊಣೆಗಾರರನ್ನಾಗಿಸುವುದು ಯಾರನ್ನು. .?.
ಮೊನ್ನೆ ಪುತ್ತೂರಿನ ತಾಲೂಕು ಪಂಚಾಯತ್ ಸಭೆಯಲ್ಲಿ ಜನಪ್ರತಿನಿಧಿಗಳು ಮಾತನಾಡಿದರು, ಯಾವುದೇ ಪ್ರರಕಣದಲ್ಲಿ ಅನ್ಯಾಯವಾದರೆ, ನಾವು ನ್ಯಾಯದ ಪರ ನಿಲ್ಲುತ್ತೇವೆ, ಪೊಲೀಸರಿಗೆ ಒತ್ತಡ ತಾರದೆ ಸ್ವತಂತ್ರವಾಗಿ ಅವರು ತನಿಖೆ ಮಾಡುವಂತೆ ಸೂಚನೆ ನೀಡವ ಬಗ್ಗೆ ಮಾತನಾಡಿದರು.ನಿರ್ಣಯ ಮಾಡೋಣ ಎಂದೂ ಹೇಳಿದರು.ಇಂತಹ ಬೆಳವಣಿಗೆ ದೈನಂದಿನ ಜೀವನದಲ್ಲೂ ನಡೆಯಬೇಕು, ಸಭೆಗೆ ಮಾತ್ರವೇ ಸೀಮಿತವಾಗಬಾರದು, ಆಗ ನೈತಿಕ ಪೊಲೀಸ್‍ಗಿರಿ ಸಹಜವಾಗಿಯೇ ಕಡಿವಾಣ ಬೀಳುತ್ತದೆ.ನಿಜವಾದ ಆರೋಪಿಗೆ ಶಿಕ್ಷೆಯಾಗುತ್ತದೆ. ಕಾನೂನು ಸರಿಯಾಗಿ ಪಾಲನೆಯಾಗುತ್ತದೆ. ಸಮಾಜವೂ ನೆಮ್ಮದಿಯಾಗುತ್ತದೆ.
1 ಕಾಮೆಂಟ್:
ಚೆನ್ನಾಗಿದೆ. ಬುದ್ಧಿಜೀವಿಗಳು ಅಂತನ್ನಿಸಿಕೊಂಡವರ ಮನೆಯ ಮಕ್ಕಳು ಹಾದಿ ತಪ್ಪದಾಗ ಮಾತ್ರ ಅವರಿಗೆ ಅರ್ಥವಾಗಬಹುದೇನೋ...
ಕಾಮೆಂಟ್ ಪೋಸ್ಟ್ ಮಾಡಿ