03 ಜುಲೈ 2010
ಬಸ್ಸಿನ ಜೊತೆಗೆ ಮೊಬೈಲ್ ಕೂಡಾ ನದಿಗೆ ಬಿತ್ತು. . . . . .!!
ಅಲ್ಲಿ ಸರಕಾರಿ ಬಸ್ಸೊಂದು ನದಿಗೆ ಉರುಳಿ ಬಿತ್ತು.ಒಬ್ಬ ಸತ್ತ , 12 ಮಂದಿಗೆ ಪೆಟ್ಟಾಯ್ತು. ಅದಾದ ಸ್ವಲ್ಪ ಹೊತ್ತಿನ ನಂತ್ರ ಒಂದು ಮೊಬೈಲ್ ಕೂಡಾ ಅಲ್ಲೇ ನದಿಗೆ ಬಿತ್ತು.ಆಗ ಏನು ಟೆನ್ಷನ್ . . ಅಂತೂ ಕೊನೆಗೆ ಮುಳುಗು ತಜ್ಞರು ಬಂದ್ರು . . ನೀರಲ್ಲಿ ಮುಳುಗಿ ಮೊಬೈಲ್ ತಂದ್ರು. . .!!. ಆದ್ರೆ ಬಸ್ಸು ಮಾತ್ರಾ ಅಲ್ಲೇ ಇತ್ತು. . .!!
ಮೊಬೈಲ್ ಅಂದ್ರೆ ಈಗ ಅದೊಂದು ಜೀವವಾಗಿ ಬಿಟ್ಟಿದೆ.ಎಲ್ಲಾದ್ರೂ ಮೊಬೈಲ್ ಬಿಟ್ಟೋಯ್ತು ಅಂದ್ರೆ ಅಂದಿನ ದಿನ ಅದು ದಿನವೇ ಅಲ್ಲ.ಅದೇನೋ ಟೆನ್ಷನ್.ಮೊಬೈಲ್‌ನಿಂದ ಜೀವಕ್ಕೆ ಅದ್ಯಾವ ಹಾನಿ ಆದ್ರೂ ಪರವಾಗಿಲ್ಲ ಮೊಬೈಲ್ ಮಾತ್ರಾ ಬಿಡೋಕೇ ಸಾಧ್ಯವೇ ಆಗಲ್ಲ.ಅದು ಮಾತ್ರವಲ್ಲ ಅದೊಂದು ಮಾಹಿತಿಯ ಕೈಪಿಡಿಯೂ ಹೌದು.ಅದೊಂದು ಕಳೆದೋಯ್ತು ಅಂತಂದ್ರೆ ಎಷ್ಟೋ ಜನ್ರ ಸಂಪರ್ಕವೇ ಕಡಿದು ಹೋದಂತೆ.ಬೇರೇನಾದ್ರೂ ಕಳೆದುಹೋದ್ರೂ ಚಿಂತೆ ಇಲ್ಲ. ಮೊಬೈಲ್ ಮಾತ್ರಾ ಕಳೆದುಹೋಗಬಾರ್‍ದು . .
ಅಂದು ಮುಂಜಾನೆ ಉಪ್ಪಿನಂಗಡಿ ಬಳಿ ಬಸ್ಸೊಂದು ಸೇತುವೆ ಕೆಳಗೆ ಉರುಳಿ ಬಿತ್ತು.ನಾನಾಗ ಅಲ್ಲಿಂದ ಸುಮಾರು 50 ಕಿಲೋ ಮೀಟರ್ ದೂರದಲ್ಲಿದ್ದೆ.ಆದ್ರೂ ಸುದ್ದಿಗೆ ಬೇಕಾದ ವ್ಯವಸ್ಥೆ ಮಾಡಿಕೊಂಡು ಸುಮಾರು 9 ಗಂಟೆ ಹೊತ್ತಿಗೆ ನಾವು ಸ್ಪಾಟ್‌ನಲ್ಲಿದ್ದೆವು.ಆಗ್ಲೇ ಜನ ಜಮಾಯಿಸಿ ಎಲ್ರೂ ಬಸ್ಸು ಬಿದ್ದದ್ದನ್ನು ನೋಡ್ತಲೇ ಇದ್ರು.ಆದ್ರೆ ಎಚ್ಚರಿಕೆಯೂ ಅಷ್ಟೇ ಬೇಕಿತ್ತು.ಕೆಳಗೆ ಬಿದ್ರೆ ನದಿ. . ಹಾಗೇ ನಾವು ಕೂಡಾ ಅಲ್ಲಿ ನೋಡ್ತಾ ಇದ್ದಾಗ ಶರ್ಟ್‌ನ ಎದುರು ಪೋಕೆಟ್‌ನಲ್ಲಿದ್ದ ಮೊಬೈಲ್ ಕೂಡಾ ಬಸ್ಸಿನ ಹಾದಿ ಹಿಡಿಯಿತು.ಎಲ್ಲೋಯ್ತು ಗೊತ್ತಿಲ್ಲ. . .!. ಹತ್ತಿರದಲ್ಲಿದ್ದವರಿಗೆ ಹೇಳಿದೆ.ಒಂದಿಬ್ರು ಹೇಳಿದ್ರು ಅದು ಇನ್ನು ಸಿಗೋದಿಲ್ಲ ನದಿಯಲ್ಲಿ ಕೊಚ್ಚಿ ಹೋಯ್ತು ಅಂತ. ಏನು ಮಾಡೋದು .. . . ? ಏನು ಮಾಡೋದು. . .?. ಅಂತ ಚಿಂತೆ ಆರಂಭವಾಯ್ತು.ಆಗ ತಾನೆ ಪರಿಚಯವಾದರೊಬ್ರು ನಾನ್ ನೋಡ್ತನಿ ಅಂತ ಜಾರೋ ಕಲ್ಲಿನ ಮೇಲಿನಿಂದ ಇಳಿದು ಮೊಬೈಲ್ ಬ್ಯಾಟರಿ ಇದೆ ಅಂತ ಹೇಳಿ ತಂದು ಕೊಟ್ರು. ಅದಲ್ಲ ನಂಗೆ ಮೊಬೈಲ್ ಸಿಗದಿದ್ರೂ ಪರವಾಗಿಲ್ಲ ಸಿಮ್ ಸಿಗ್ಲಿ ಅಂದೆ. . ಏನ್ ಮಾಡೋದು, ಅದು ನೀರಲ್ಲಿ ಕೊಚ್ಚಿ ಹೋಗಿದೆ ಅಂತ ಆತ ಹೇಳ್ದ. . ಛೇ .. ಛೇ ಅಂತ ಅಲ್ಲಿದ್ದವರೆಲ್ಲಾ ನನ್ನೊಂದಿಗೆ ಗೊಣಗ್ತಾ ಇದ್ರೂ.ಸ್ವಲ್ಪ ಸಮಯದ ನಂತ್ರ ನಂಗೆ ಟೆನ್ಷನ್ ಇನ್ನು ಹೆಚ್ಚಿತು.ಯಾಕ್ ಗೊತ್ತಾ ಆ ಮೊಬೈಲ್‌ನಲ್ಲಿ ಇಂಪೋರಟೆಂಟ್ 500 ಕಾಂಟಾಕ್ಟ್ ನಂಬರ್‌ಗಳಿತ್ತು.ಹಾಗಾಗಿ ನಂಗೆ ಇನ್ನಷ್ಟು ಟೆನ್ಷನ್ ಆಗುತ್ತಲೇ ಇತ್ತು.ಆಗ ಬಸ್ ಬಿದ್ದ ಅದೇ ಸ್ಥಳ್ಕಕೆ ಎಂಪಿ ಬಂದರು. . ನನ್ನ ಮೊಬೈಲ್ ಟೆನ್ಷನ್ ಜೊತೆ ಎಂಪಿ ಬಂದ ಸುದ್ದಿಯೂ ಮುಖ್ಯವಾಗಿತ್ತು.ಆ ಟೆನ್ಷನ್ ನಡುವೆಯೇ ಎಂಪಿ ಯವರೊಂದಿಗೆ ಮಾತುಕತೆ ಮಾಡುತ್ತಿದ್ದಂತೆಯೇ ಒಬ್ಬ ಬಂದು ಹೇಳಿದ ಮೊಬೈಲ್ ಸಿಕ್ಕಿತು ಅಂತ. ಅಬ್ಬಾ. . ಅಂತ ನಿಟ್ಟುಸಿರು ಬಿಟ್ಟೆ. ನಂತರ ಆತ ಹೇಳಿದ ನಾನು ನದಿಯ ಆ ಕಡೆಯಾಗಿ ಹೋಗಿ ನೀರಲ್ಲಿ ಮುಳುಗಿ ನೋಡಿದಾಗ ಬಸ್ಸಿನ ಎದುರು ಭಾಗದಲ್ಲಿ ಮೊಬೈಲ್ ಇತ್ತು ಅಂದ. ಓಹೋ. . ಥ್ಯಾಂಕ್ಸ್ ಎಂದವರೇ ಅಲ್ಲಿಂದ ಮೊಬೈಲ್ ಸಹಿತ ಬಂದೆ.ಆದ್ರೆ ಆನ್ ಮಾಡುವ ಹಾಗಿಲ್ಲ.ಸಿಮ್ ತೆಗೆದು ಇಷ್ಟಾದ್ರೂ ಸಿಕ್ತಲ್ಲಾ ಅಂತ ಬಂದು ಮೊಬೈಲ್ ಬಿಸಿ ಮಾಡಿದಾಗ ಅಬ್ಬಾ. . . ಪುಣ್ಯ, ಮೊಬೈಲ್ ಆನ್ ಆಗುತ್ತೆ. ಕಾಂಟಾಕ್ಟ್ ನಂಬರ್ರುಗಳೂ ಇವೆ. ಆದ್ರೆ ಪ್ಯಾನೆಲ್ ಹುಡಿಯಾಗಿದೆ.ಪರವಾಗಿಲ್ಲ.ಇಷ್ಟಾದ್ರೂ ಸಿಕ್ತಲ್ಲ. ಆ ಪುಣ್ಯಾತ್ಮರಿಗೆ ಆಭಾರಿ ಅಂತ ಅವರ ನೆನೆ ನೆನೆದು ಕೃತಜ್ಞತೆ ಸಲ್ಲಿಸಿದೆ.
ಅಲ್ಲಾ ನಂಗೆ ಅನ್ನಿಸಿದ್ದು ಮೊಬೈಲ್ ಅಂದ್ರೆ ಇಷ್ಟು ಟೆನ್ಷನ್ ಅಲ್ವಾ. . .?.ಅದು ಇದ್ರೆ ಎಲ್ಲವೂ ಇದೆ.. ಇಲ್ಲಾಂದ್ರೆ ಏನೂ ಇಲ್ಲ ಅನ್ನೋ ಮಟ್ಟದಲ್ಲಿ ನಾವಿದ್ದೀವಾ ಅಂತ..?.ಆವತ್ತೊಂದು ದಿನ ಇತ್ತಲ್ಲಾ ಮೊಬೈಲ್ ಇಲ್ದೇ ಇದ್ದ ಆ ಕಾಲದಲ್ಲಿ ಜನ ಏನು ಮಾಡ್ತಾ ಇದ್ರು..?.ಇಗ್ಯಾಕೆ ಎಲ್ಲದಕ್ಕೂ ಮೊಬೈಲೇ ಆಶ್ರಯ..?.ಇದ್ಕೆಲ್ಲಾ ಉತ್ತರ ಇಲ್ವೇ ಇಲ್ಲ ಅಲ್ವೇ. .?. ಅದೆಲ್ಲಾ ಬಿಡಿ ಮೊಬೈಲ್ ಹೆಚ್ಚಾಗಿ ಯೂಸ್ ಮಾಡಿದ್ರೆ ದೇಹಕ್ಕೆ ಹಾಳು, ಆರೋಗ್ಯ ಕೆಡುತ್ತೆ ಅಂತ ಡಾಕ್ಟ್ರು ಹೇಳಿದ್ರೂ ನಾವ್ ಮೊಬೈಲ್ ಬಿಡ್ತೀವಾ ಹೇಳಿ. . . ಹಾಗಿದ್ರೆ ಆ ಮೊಬೈಲ್ ಅಂದ್ರೆ ಅದು ಇನ್ನೊಂದು ಹೆಂಡ್ತಿ ಅಂತ ಕರೀಬಹುದಾ. . .??.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ