30 ಮೇ 2010

ಮೇ 22. . . .

ಅದು ಸಂಜೆಯ ಹೊತ್ತು.ಅದ್ಯಾವುದೋ ಲೋಹದ ಹಕ್ಕಿ ಆಗಸದಲ್ಲಿ ಹಾರಾಡುತ್ತಾ ತನ್ನ ಪಯಣ ಮುಂದುವರಿಸಿತ್ತು.ಹಾಗೆ ಆ ಆಗಸದ ಹಕ್ಕಿ ತನ್ನ ಪಾಡಿಗೆ ಅದ್ಯಾರನ್ನೋ ಹೊತ್ತೊಯ್ಯುತ್ತಿದ್ದಾಗ ನಾವು ಹರಟಿಕೊಳ್ಳುವುದಿತ್ತು.ಆ ವಿಮಾನ ಇಲ್ಲೇ ಎಲ್ಲಾದ್ರೂ ಬಿದ್ರೆ . . ?. ಪರಿಸ್ಥಿತಿ ಹೇಗಿರ್ಬಹುದು . .?.ಜನ ಬದುಕ್ತಾರಾ . .? ಸಾಯ್ತಾರಾ. . ?. ಯಾರು ಬ್ರೇಕಿಂಗ್ ಮಾಡ್ಬಹುದು. . ?. ಹೀಗೆ ಹತ್ತಾರು ಯೋಚನೆ ನಡೀತಾ ಇತ್ತು ನಮ್ಮೊಳಗೆ.ಆದ್ರೆ ಇದೆಲ್ಲಾ ನಿಜವಾಗ್ಬೇಕು ಅಂತಲ್ಲ.ಸುಮ್ನೇ ಹಾಳು ಹರಟೆ.. . ಆದ್ರೆ ಅಂದು ಮುಂಜಾನೆ ಮಾತ್ರಾ ಅದು ನಿಜವಾಗೋಯ್ತು.ಕರಕಲು ದೇಹದ ನಡುವೆ 2 ದಿನ ಕಳೆಯುವ ಸನ್ನಿವೇಶ , ನುಚ್ಚು ನೂರಾದ ಲೋಹದ ಹಕ್ಕಿಯ ಅವಶೇಷಗಳನ್ನು ಸನಿಹದಿಂದ ನೋಡುವ ಮತ್ತು ಸುದ್ದಿ ಮಾಡುವ ಅಪರೂಪದ ಸನ್ನಿವೇಶ ಎದುರಾಗಿತ್ತು.ಈ ಘಟನೆಯನ್ನು ಲೈವ್ ಮಾಡೋದಿಕ್ಕೆ 19 ಒಬಿ ವ್ಯಾನ್ ; 40 ಕ್ಕೂ ಹೆಚ್ಚು ರಿಪೋರ್ಟ್‌ಸ್ ಸ್ಥಳದಲ್ಲಿದ್ದರು.

. . . . . . . . . . . . . . . . . . . . . . . . . . . . . . . . . . . . . . . .


ಇದು ಘಟನೆ . .




ರಾತ್ರಿ 1.15 ಕ್ಕೆ ಸರಿಯಾಗಿ ಆ ವಿಮಾನ ಆಗಸ್ಕಕೆ ನೆಗೆದಿತ್ತು.ಸರಿಸುಮಾರು 5 ಗಂಟೆಯ ಪ್ರಯಾಣದಲ್ಲಿ ಸಮುದ್ರದ ಮೇಲೂ ಹಾರುತ್ತಾ ಹಾರುತ್ತಾ ಮಂಗಳೂರು ತಲಪಿತ್ತು.ಇನ್ನೇನು ತಮ್ಮವರನ್ನು ನೋಡುವುದಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ಬಂಧುಗಳೆಲ್ಲಾ ನೋಡಿದ್ದು ಕರಕಲು ದೇಹವನ್ನು.ವಿಮಾನದಲ್ಲಿ ಬಂದವರಿಗೆ ತಮ್ಮವರನ್ನು ನೋಡುವ ಭಾಗ್ಯವೇ ಇದ್ದಿರಲಿಲ್ಲ.ಕೊನೆಯ ಕ್ಷಣದ ಆರ್ತನಾದ . . ಜೀವ ಉಳಿಸಿಕೊಳ್ಳಲು ನಡೆಸಿರುವ ಸಾಹಸ . . ಒಂದು ಕ್ಷಣ ಮೊಬೈಲ್‌ನಲ್ಲಾದರೂ ಮಾತನಾಡುವ ಆತುರ . . . . ಇದ್ಯಾವುದಕ್ಕೂ ಅಲ್ಲಿ ಅವಕಾಶವೇ ಇಲ್ಲ.ದೇವರಿಗೂ ಅರ್ಜೆಂಟ್ ಆದಹಾಗಿತ್ತೋ ಅಲ್ಲ ಆ 158 ಜನರಿಗೂ ಸಾವಿನ ಮನೆಗೆ ತುರ್ತಾಗಿ ಕರೆ ಬಂದಿತ್ತೋ. . .?.ಗೊತ್ತಿಲ್ಲ. ಅಂತೂ ಅಲ್ಲಿ ಆಟ ಮುಗಿದಿತ್ತು. ಸುಂದರಾಂಗರಾಗಿದ್ದವರೆಲ್ಲಾ ಆಗ ಕರಕಲಾಗಿ ಎಲ್ಲರೂ ಒಂದೇ ಆಗಿದ್ದರು.ಇದರಲ್ಲಿ ತಮ್ಮವರು ಯಾರು ಎಂಬ ಹುಡುಕಾಟ ನಡೆದರೂ ಕೊನೆಗೂ ಕೆಲವರಿಗೆ ತಮ್ಮವರ ಹುಡುಕಾಟ ನಡೆಸಲೇ ಆಗಿಲ್ಲ.ಅದರಲ್ಲೂ ಇವ ನಮ್ಮವ . .ಇವ ನಮ್ಮವ ಎಂಬ ಕಚ್ಚಾಟವೂ ಆರಂಭವಾಗಿತ್ತು.ಆಗಲೂ ಕೆಲವು ಜನ ಅಂತಿದ್ರು ಅದೇನು ಮಹಾ ಅಷ್ಟೂ ಹೆಣಗಳ ರಾಶಿ ನಡುವೆರ ಇಂದಿನ ಆಧುನಿಕ ಯುಗದಲ್ಲಿ ತಮ್ಮವರ ಹುಡುಕಾಟ ಕಷ್ಟವಾಗದು ಅಂತು ದೂರದಲ್ಲಿರುವವರು ಹೇಳ್ತಾನೇ ಇದ್ರು.ಆದ್ರೆ ಬಾಯಿಯಲ್ಲಿ ಅರಳು ಹುರಿದಂತೆ ಅಲ್ಲವಲ್ಲಾ. .?. ಅಲ್ಲಿ ಭಾವನಾತ್ಮಕವಾದ ವಿಷಯವೂ ಇರುವುದರಿಂದ ಯಾವುದೇ ಪರೀಕ್ಷೆಗೂ ಒಳಪಡದೆ ತಮ್ಮವರಿಗೆ ಸರಿಯಾದ ಮೋಕ್ಷ ಒದಗಿಸಬೆಕು ಎಂಬ ಭಾವವೂ ಇದೆಯಲ್ಲಾ.. .?.ಹಾಗಾಗಿ ಕರಕಲಾದ ಆ ದೇಹದ ಹುಡುಕಾಟದಲ್ಲಿ ನಮ್ಮದೇನು ಹುಡುಗಾಟ. . .!?. ಇಷ್ಟಲ್ಲಾ ಆಗ್ತಿದ್ರೂ ಅಲ್ಲಿಗೆ ಬಂದವರ ಆಟ ನಡೀತಾನೇ ಇತ್ತು.ಒಬ್ಬೊಬ್ಬ್ರು ಬಂದು ಒಂದೊಂದು ಲೋಗೋ ಹಿಡಿದು ಘಟನೆ ವಿವರಿಸ್ತಾ ಇದ್ರೂ. . ತಮ್ಮವರ ಹುಡುಕಾಟದಲ್ಲಿದ್ದಾಗ ಅವರಿಗೆ ಕುಟುಕ್ತಾನೇ ಇದ್ರೂ.ಕೆಲವರಂತೂ "ಗೆಟ್ ಔಟ್" ಹೇಳಿದ್ದೂ ಕಂಡಿದ್ದೇವೆ.ಇನ್ನು ಆಸ್ಪತ್ರೆಯಲ್ಲಿ ಬದುಕಿ ಉಳಿದರಿಗೆ ಬಂಧುಗಳೇ ರಕ್ಷಣಾ ಬೇಲಿ ಹಾಕಿದ್ರು.ಒಬ್ಬನಿಗೆ ಕಿರುಕುಳ ತಾಳಲಾರೆ ನಾನೂ ಸತ್ತೇ ಹೊಗಿದ್ರೆ ಒಳ್ಳೇದಿತ್ತು ಅಂತ ಅನ್ಸಿತ್ತಂತೆ.ಯಾಕೆಂದ್ರೆ ಆತ ಮಾತನಾಡಿ ಮಾತನಾಡಿ ಬಾಯಲ್ಲಿ ರಕ್ತ ಬರುವುದಕ್ಕೆ ಶುರುವಾಗಿತ್ತು.ಆತನ 2 ಕಿವಿಗೆ 2 ಫೋನು. ಲೈವ್ ಮಾತನಾಡುವುದಕ್ಕೆ . .!!. ಕೊನೆ ಕೊನೆಗೆ ಮನೆಯವರೇ ಸಾರಿ . . ಸಾರಿ ಅಂದ್ರು.ಆದ್ರೂ ರಿಕ್ವೆಸ್ಟ್ . .!!. ಈ ನಡುವೆ ಕೆಂಪು ಗೂಟದ ಕಾರುಗಳ ಸಾಲು ಸಾಲು . . ಅದ್ಕೆ ಒಂದಿಷ್ಟು ಪೊಲೀಸ್ರು. . ಕರಕಲಾದ ಶವಗಳಲ್ಲಿ ತಮ್ಮವರು ಸಿಕ್ಕರು ಎಂದಾಕ್ಷಣ ಕೆಂಪುಗೂಟದ ಅತಿಥಿ . . ಮತ್ತೆ ಹುಡುಕಾಟ. . .!!. ಹೀಗೆ ದಿನ ಕಳೆದು ದಿನಕಳೆದು ದಿನ ಕಳೆದರೂ ಕೆಲವರಿಗೆ ತಮ್ಮವರನ್ನು ಗುರುತು ಹಿಡಿಯಲಾಗಲೇ ಇಲ್ಲ.ಮನೆಯಲ್ಲಿ ಮುಗಿಯದ ರೋದನ.
॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒

ಇದೆಲ್ಲಾ ಇಲ್ಲಿ ನಡೀತಿರಬೇಕಾದ್ರೆ ಮಂಗಳೂರು ಏರ್ಪೋರ್ಟ್ ಸರಿ ಇಲ್ಲ ಎಂಬ ವಾದ ಬೇರೆ.ಅದ್ಯಾಕೆ ಒಂದು ವಿಮಾನ ದುರಂತವಾದಾಗ ಹಾಗೆ ಹೇಳ್ಬೇಕು. ಒಂದೋ ವಿಮಾದಲ್ಲಿ ತಾಂತ್ರಿಕ ದೋಷ ಇದ್ದರಬಹುದು , ಪೈಲಟ್ ದೋಷ ಇರ್ಬಹುದು , ಕಂಟ್ರೋಲ್ ರೂಂ ಮಾಹಿತಿ ತಪ್ಪಾಗಿರಬಹುದು. ಅದೆಲ್ಲಾ ಬಿಟ್ಟು ಇದೊಂದು ಟೇಬಲ್ ಟಾಪ್ ಅಂತ ಯಾಕೆ ಪ್ರಚಾರ. . ?. ದಿನದಲ್ಲಿ ಅದೆಷ್ಟೂ ಲೋಹದ ಹಕ್ಕಿ ಇಲ್ಲಿ ಇಳಿಯುತ್ತೆ . . ಹಾರಡುತ್ತೆ. ಆದ್ರೆ ಅದ್ಯಾವುದಕ್ಕೂ ತೊಂದರೆ ಇಲ್ಲ.ಇದಕ್ಕಿಂತಲೂ ಅಪಾಯಕಾರಿಯಾದ ಏರ್ಪೋರ್ಟ್ ವಿದೇಶದಲ್ಲಿ , ನಮ್ ದೇಶದಲ್ಲೂ ಇದೆ.



ಆದ್ರೂ ಯಾಕೆ ಮಂಗಳೂರಿಗೆ ಮಾತ್ರಾ ಅಪಾಯಕಾರಿ ಪಟ್ಟ . . .?.ಹಾಗಾಗಿ ಅಪಘಾತದ ಕಾರಣ ಸ್ಪಷ್ಠವಾಗುವವರೆಗೂ ಮೌನವಾಗಿರುವುದು ಮತ್ತು ನಾವೇ ಡಿಸಿಶನ್ ತೆಗೆದುಕೊಳ್ಳದಿರುವುದು ಒಳ್ಳೇದಲ್ವೇ . .?

2 ಕಾಮೆಂಟ್‌ಗಳು:

ಹರೀಶ ಮಾಂಬಾಡಿ ಹೇಳಿದರು...

nimma abhipraya ellaraddu

Govinda Nelyaru ಹೇಳಿದರು...

೧೯೯೮ ವರೆಗಿನ ಹಾಂಗ್ ಕಾಂಗ್ ವಿಮಾನ ನಿಲ್ದಾಣ ಸಮುದ್ರದ ನಡುವಿಗೆ ಹೊರ ಚಾಚಿದ ಜೋಡಿ ರಸ್ತೆಯಂತಿತ್ತು. ಗುರಿ ತಪ್ಪಿದರೆ ನೀರ ಪಾಲು.

ನಿಜವಾದ ಅಪಘಾತಕ್ಕೆ ಕಾರಣವಾದ ಸುಳಿವು ಹೊರಬಾರದೆಯೇ ಇರಬಹುದು ಅನಿಸುತ್ತಿದೆ.