27 ಜುಲೈ 2009
ಬಂದೇ ಬರುತಾನ ಅವ..
ಅಂದು ಸಂಜೆಯಿಂದ ಇಡೀ ಸಂಚಲನ... ಸಚಿನ್ ಬರ್ತಾರಾ.... ಸಚಿನ್ ತೆಂಡೂಲ್ಕರ್ ಬರ್ತಾರಾ..ಅಂತ ಫೋನಿನ ಮೇಲೆ ಫೋನು.. ನಂಗೂ ಅದೇ ಕೆಲ್ಸ ಅಲ್ಲಿ - ಇಲ್ಲಿ ಫೋನ್ ಮಾಡಿ ಮಾಹಿತಿ ಸಂಗ್ರಹಿಸುವುದೇ ಕೆಲಸವಾಗಿತ್ತು. ಅಂತೂ ರಾತ್ರಿ ೧೧ ರ ವರೆಗ ಅದೇ ಕೆಲಸ. ಏಕೆಂದರೆ ... ಅವರು.. ಇವರು.. ಆಗಲೇ ಸುಬ್ರಹ್ಮಣ್ಯ ತಲಪಿಯಾಗಿತ್ತು. ಆಧರೆ ಕೊನೆಯ ಮಾಹಿತಿಯೊಂದು ಸಿಕ್ಕಿತ್ತು. ಅದೆಲ್ಲಾ ಸುಳ್ಳೇ... ಸುಳ್ಳು ಅಂತ. ಆದರೂ ಒಂದು ಸಂಶಯ...
ಬೆಳಗ್ಗೆ 6 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊರಡಬೇಕು ಅಂದು ಕೊಂಡವನಿಗೆ ಎಚ್ಚರವಾದ್ದೇ 6 ಗಂಟೆಗೆ. ಏಕೆಂದರೆ ಮುಂಜಾನೆ 4 ಗಂಟೆಗೆ ಅದೇ ವಿಚಾರದಲ್ಲಿ ಬಂದ ಮಿತ್ರನ ಕರೆಯನ್ನು ಸ್ವೀಕರಿಸಿ ಮಲಗಿದ ಕಾರಣ ಎಚ್ಚರವಾಗುವಾಗ ತಡವಾಗಿತ್ತು. ಅಂತೂ 6.30 ಕ್ಕೆ ಕುಕ್ಕೆಗೆ ಹೊರಟು ವೇಗದಲ್ಲಿ ಸಾಗಿ 6.45 ಕ್ಕೆ ತಲಪಿಯಾಗಿತ್ತು. ಅಲ್ಲಿ ಅದಾಗಲೇ ಒಂದಷ್ಟು ಜನ ಮಿತ್ರರು ಸೇರಿದ್ದರು. ಕಾಯುತ್ತಾ ಕುಳಿತಿದ್ದರು. ಯಾರಿಗೆ ...? ಅದೇ ಸಚಿನ್‌ಗೆ..!!!. ಸರಿ ಎಲ್ಲರೂ ಅವರವರ ಕತೆ ಹೇಳುತ್ತಿದ್ದರು.. ಬೆಳಗ್ಗೆ 3 ಗಂಟೆಗೆ ಎದ್ದು ಹೊರಟವರಿದ್ದರು ಅಲ್ಲಿ...!!! . ಕಾಫಿ ತಿಂಡಿಯಾಗದವರೂ ಇದ್ದರು.. ಎಲ್ಲರೂ ದೇವಸ್ಥಾನದ ಗೋಪುರದ ಎದುರು ಕುಳಿತದ್ದೇ ಕುಳಿತದ್ದು... ಕುಕ್ಕೆಯಲ್ಲಿರುವ ಪರಿಚಯದವರೆಲ್ಲಾ ಏನು ಎಲ್ಲಾ ಇದ್ದೀರಿ ಅಂಥ ಸಣ್ಣಗೆ ಕೇಳುತ್ತಿದ್ದರು. ಹಾಗೆ 8 ಕಳೆಯಿತು... ಒಂದು ಕಾರು ಬಂದರೂ ಎಲ್ಲರ ಕ್ಯಾಮಾರ ರೆಡಿಯಾಗುತ್ತಿತ್ತು... ಎಲ್ಲರೂ ಎಲರ್ಟ್...!!. ಅಂತೂ ಗಂಟೆ 9 ಕಳೆಯಿತು... ಸುದ್ದಿಯಿಲ್ಲ.. ಸ್ಪಷ್ಟ ಮಾಹಿತಿಯೂ ಇಲ್ಲ..!! ಆದರೂ ಕುಳಿತಿತು... ಒಬ್ಬೊಬ್ಬರು ಒಂದೊಂದು ಅಭಿಪ್ರಾಯಕ್ಕೆ ಬರತೊಡಗಿದರು.. 9.15 ರ ನಂತರ ಇನ್ನು ಹೋಗೋಣ ಅಂತ ಮಾತನಾಡಲು ತೊಡಗಿದರು.. ಆಧ್ರೆ ಯಾರೂ ಕದಲುವುದಿಲ್ಲ.. ಏಕೆಂದರೆ ಎಲ್ಲಾದರೂ ಆತ ಬಂದರೆ...!!!.. ಸರಿ 9.30 ಕ್ಕೆ ದೇವಸ್ಥಾನದ ಒಳಗೆ ಹೋಗಿ ಪೂಜೆಯ ಚಿತ್ರ ತೆಗೆದು ಹೊರಬಂದು ಎಲ್ಲರೂ ಹಿಂತಿರುಗುವ ಯೋಚನೆ ಮಾಡಿದರು. ಮತ್ತೆ ಒಬ್ಬೊಬ್ಬರು ವಿಚಾರಣೆಗೆ ತೊಡಗಿದರು. ಆತ ನೇರವಾಗಿ ಮುಂಬೈಗೆ ಹೋಗ್ತಾನಂತೆ 11 ಗಂಟೆಗೆ ಫ್ಲೈಟಂತೆ.. ಹಾಗಾಗಿ ಸುಬ್ರಹ್ಮಣ್ಯಕ್ಕೆ ಬರುವುದಿಲ್ಲ ಎಂಬ ಮಾಹಿತಿ ಬಂತು.. ಎಲ್ಲರೂ ಅತ್ತಿತ್ತ ಹೋಗಿ ಮಾಯವಾದರು.
ಆದರೂ ಮತ್ತೆಮತ್ತೆ ಕರೆ ಬರುತ್ತಿತ್ತು.. ಇಲ್ಲ ಶೇ.99 ಅವರು ಬಂದೇ ಬರ್ತಾರೆ... ಮಾತ್ರಾ, ಗುಪ್ತವಾಗಿದೆ ಅಂತ..!! ಆದರೆ ಸಚಿನ್ ಅದಾಗಲೇ ಬಜ್ಪೆ ವಿಮಾನ ನಿಲ್ದಾಣದಲ್ಲಿದ್ದನ್ನು ಖಚಿತ ಪಡಿಸಿಕೊಂಡ ನಾವು ..ಸರಿ ಬಂದ್ರೆ ಹೇಳಿ ನಾವಿಲ್ಲೇ ಇದ್ದೇವೆ ಅಂತ ಹೇಳಿ ನಾವೂ ಮಾಯವಾದೆವು...
ಕೊನೆಗೂ ಸಚಿನ್ ಬರಲಿಲ್ಲ...!!.. ಇದೆಲ್ಲಾ ಗೊಂದಲ ಆದ್ದು ಯಾರಿಂದ ಸುದ್ದಿ ಮಾಡಿದ್ದು ಯಾರು.. ಎಂಬ ಕಣ್ಣ ಎದುರಿನ ಪ್ರಶ್ನೆಗೆ ಉತ್ತರ ಅಲ್ಲೇ ಇತ್ತು....!!!..
ನಮಗೆ ಮಾತ್ರಾ ಅಲ್ಲಿ ಕಾದದ್ದು ಒಂದು ಅನುಭವವಾಗಿತ್ತು..
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ