“ನಾವು ಸಾಲ ಕೊಡುವುದಿಲ್ಲ ಆಗ ನಿಮಗೆ ಹುಚ್ಚು ಹಿಡಿಯುತ್ತದೆ ; ನಾವು ಸಾಲ ಕೊಟ್ಟೆವೆನ್ನಿ ನೀವು ಹಿಂದಿರುಗಿಸುವುದಿಲ್ಲ ಆಗ ನಮಗೆ ಹುಚ್ಚು ಹಿಡಿಯುತ್ತದೆ ; ಹಾಗಾಗಿ ಯಾರಿಗೂ ಹುಚ್ಚು ಹಿಡಿಯುವುದು ಬೇಡ...”
ಇದು ಅಂಗಡಿಯೊಂದರಲ್ಲಿ ಕಂಡು ಬಂದ “ನುಡಿ ಮುತ್ತು”. ಅಂಗಡಿಯಾತ ಈ ವಾಕ್ಯವನ್ನು ಎದುಗಡೆಯಲ್ಲಿ ದೊಡ್ಡದಾಗಿ ಹಾಕಿದ್ದಾನೆ. ಎಲ್ಲರೂ ನೋಡುತ್ತಾರೆ. ಮತ್ತೆ ಆ ಕಡೆ ಈ ಕಡೆ ನೋಡಿ ಸರ್, 1 ಸಾವಿರ ಕಡಿಮೆ ಇದೆ ನಾಳೆ ಕೊಡುತ್ತೇನೆ ಎಂದಾಗ ಅಂಗಡಿಯಾತ ಕಸಿವಿಸಿ ಮಾಡಿ ಸರಿ ಅಂತಾನೆ..
ಇಂತಹ ಅದೆಷ್ಟೋ ವಾಕ್ಯಗಳು ಅಲ್ಲಲ್ಲಿ ರಾರಾಜಿಸುತ್ತಿರುತ್ತದೆ. ಸರಕಾರಿ ಬಸ್ಸುಗಳಲ್ಲಂತೂ ಇಂತಹ ವಾಕ್ಯಗಳು ಬಸ್ಸಿನಲ್ಲಿಡೀ ಕಾಣಿಸುತ್ತದೆ. “ ಸತ್ಯ ಮೇವ ಜಯತೆ “ ಅಂತ ಒಂದೆಡೆ ಇದ್ದರೆ , ಟಿಕೆಟ್ ಕೇಳಿ ಪಡೆಯಿರಿ ಅಂತ ಇನ್ನೊಂದು ಕಡೆ ಇರುತ್ತದೆ. ಇಷ್ಟೆಲ್ಲಾ ಇದ್ದರೂ ಬಸ್ಸಿನಿಂದ ಇಳಿಯುವಾಗ ಕಂಡಕ್ಟರ್ ಚಿಲ್ಲರೆ ಕೊಟ್ಟಿಲ್ಲ ಅಂತ ಜಗಳ ಮಾಡಿಯೇ ಇಳಿಯ ಬೇಕಾಗುತ್ತದೆ. ಮಹಿಳಾ ಪ್ರಯಾಣಿಕರಿಗಾಗಿ ಪ್ರತ್ಯೇಕ ಆಸನ ಇರುತ್ತದೆ, ಅಂಗವಿಕಲರಿಗಾಗಿ, ಹಿರಿಯ ನಾಗರಿಕರಾಗಿ ಅಂತೆಲ್ಲ ಬೋರ್ಡ್‌ಗಳು ಆದರೆ ಕಂಡಕ್ಟರ್ ಬಂದು ಸರ್ ಆ ಬೋರ್ಡ್ ನೋಡಿ, ಅಂತ ನಮಗೆ ಹೇಳಬೇಕಾಗುತ್ತದೆ.
ತಪ್ಪಲ್ಲ ಇಂದಿನ ವ್ಯವಸ್ಥೆಯೇ ಹಾಗೆ.ನಾವು ಹೇಳುವ ಮಾತು, ವಿಚಾರಗಳು ನಮಗಲ್ಲ , ಅದು ಅವನಿಗೆ.ಅವನು ಅನುಸರಿಸಿದರೆ ಸರಿ, ಇಲ್ಲಾಂದ್ರೆ ನಮ್ಮಂತೆ ಅವನು ಕೂಡಾ. ಇತ್ತೀಚೆಗೆ ಒಬ್ರು ಹೇಳಿದ್ರು. ನಾವು ಎಲ್ಲವನ್ನೂ ಅವನಿಗಾಗಿ ಬಿಟ್ಟರೆ , ಬಸ್ಸಲ್ಲಿ ಸೀಟೇ ಸಿಗಲ್ಲ, ಮಾತ್ರವಲ್ಲ ಯಾರು ಕೂಡಾ ಬಸ್ಸೇರಲು ಸಾಧ್ಯವೇ ಇಲ್ಲ.ಬಸ್ಸು ಬಂದಾಕ್ಷಣ ಮೇಲೇರಲೆ ಬೇಕು...ರಷ್ ಮಾಡಲ್ ಬೇಕು. . ಸೀಟು ಸಿಗಲೇಬೇಕು.ಸಿಕ್ಕಿಲ್ಲಾಂದ್ರೆ ಇನ್ನೊಂದು ಬಸ್ಸಿನವರೆಗೆ ಕಾಯಬೇಕು.ಹಾಗಾಗಿ ಇಂತಹ "ನ್ಯಾಯ ಬದ್ದ "ಸಲಹೆಗಳು ಮೊದಲು ಅವನಿಗೆ, ಆಮೇಲೆ ನನಗೆ... ಅನ್ನುವುದೇ ಜಗದ ನಿಯಮ.ಏಕೆಂದ್ರೆ ಇದು ಹಣದಿಂದಲೇ ಅಳೆಯುವ ಸಮಾಜ ಸ್ವಾಮಿ. ನಿಮ್ಮಲ್ಲಿ ದುಡ್ಡಿದ್ರೆ ನೀವು ದೊಡ್ಡಪ್ಪ ಇಲ್ಲಾಂದ್ರೆ ಚಿಕ್ಕಪ್ಪ...!!??
ಆ ಒಂದು ವಾಕ್ಯ ಇಷ್ಟು ದೂರಕ್ಕೆ ಕರೆತಂದಿತು.
ಸತ್ಯ ಹೌದಲ್ವಾ..???
3 ಕಾಮೆಂಟ್‌ಗಳು:
olle tamsheyagide!
satya satya!
Namasthe mahesh, nimma blog nodi kushi aithu. ee tarahada barahagalu innu aneka ide. thumba tamasheya board saha ive. baraha atmeeyavagide.
ಕಾಮೆಂಟ್ ಪೋಸ್ಟ್ ಮಾಡಿ