05 ಫೆಬ್ರವರಿ 2009

ಕೃಷಿ - ಋಷಿ

ಮೊನ್ನೆ ಒಂದು ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ಸ್ವಾಮಿಜಿಯೊಬ್ಬರು ಹೇಳಿದರು ಇಂದು ಕೃಷಿ ಹಾಗೂ ಋಷಿಯನ್ನು ಅವಗಣನೆ ಮಾಡಿದ್ದೇ ದೇಶ ಅಧ:ಪತನಕ್ಕೆ ಹೋಗಲು ಕಾರಣ ಎಂದರು.

ಆ ನಂತರ ಇದೇ ಮಾತನ್ನು ರಾಜಕಾರಣಿಗಳು ಪುನರಾವರ್ತನೆ ಮಾಡುತ್ತಾ ಎಳೆದು ಎಳೆದು ಸಾಗಿದರು.

ನನ್ನೊಳಗೆ ಹುಟ್ಟಿದ ಪ್ರಶ್ನೆ‌ಈ ದೇಶ ಅದ:ಪತನಕ್ಕೆ ಹೋಗಲು ಕಾರಣ ಯಾರು..? ರಾಜಕಾರಣಿಗಳಾ ... ಮಠಗಳಾ... ಧಾರ್ಮಿಕ ಕೇಂದ್ರಗಳಾ... ಮರೆವೇ.....?????

ಆದರೆ ಪಕ್ಕನೆ ಕಾಣುವುದು ರಾಜಕಾರಣಿಗಳು.ಇಲ್ಲಿ ಕೃಷಿಕರಿಗೆ ಪ್ರಯೋಜನವಾಗುವ ಯಾವುದಾದರೂ ಯೋಜನೆಗಳನ್ನು ಹಮ್ಮಿಕೊಂಡಿದ್ದಾರಾ?. ಇಂದು ಅಕ್ಕಿಯ ಬೆಲೆ ಗಗನಕ್ಕೇರುತ್ತಿದೆ. ಆದರೆ ಅಕ್ಕಿಯ ಉತ್ಪಾದನೆಗೆ ಬೇಕಾದ ಯೋಜನೆಗಳನ್ನು, ಆ ರೈತರಿಗೆ ಬೇಕಾಗುವ ಸವಲತ್ತುಗಳನ್ನು ಏನು ನೀಡಿದ್ದಾರೆ?. ರೈತರಿಗೆ ಟ್ರ್ಯಾಕ್ಡರಿಗೆ ಹಣ ನೀಡಿ ಅದಕ್ಕೆ ನಂತರ 2 ಪಟ್ಟು ಬಡ್ಡಿ ತೆಗೆಯುವ ಪ್ರಯತ್ನ ಸರಕಾರ ಮಾಡುತ್ತಿದೆ.ಮತ್ತೆ ಹೇಗೆ ಕೃಷಿ ಬೆಳೆಯಲು ಸಾಧ್ಯ.?

ಇನ್ನು ಋಷಿಯ ಅವಗಣನೆ ಬಹುಶ: ಆಗಿಲ್ಲ. ಏಕೆಂದರೆ ಇಂದು ನಾಯಿ ಕೊಡೆಗಳಂತೆ ಮಠಗಳು ಹುಟ್ಟಿಕೊಳ್ಳುತ್ತಿವೆ. ಅದೇ ಪ್ರಮಾಣದಲ್ಲಿ ಸ್ವಾಮೀಜಿಗಳು ಕಾಣಿಸಿಕೊಳ್ಳುತ್ತಿದ್ದಾರೆ , ಅಲ್ಲಲ್ಲಿ ಹೊಸಹೊಸ ಪೀಠಗಳು ಕಾಣಿಸುತ್ತಿವೆ.ಅಲ್ಲೆಲ್ಲಾ ಜನ ಸಾಗರವೇ ಬರುತ್ತಿದೆ.ಹಾಗಾಗಿ ಅಲ್ಲಿ ಹಣದ ಹೊಳೆಯೇ ಹರಿದು ಬರುತ್ತಿದೆ. ಆದರೆ ಅದೇ ಸ್ವಾಮೀಜಿಗಳು ,ಮಠಗಳು ರೈತರಿಗೆ ಅಗತ್ಯವಾದ ಹೋರಾಟಗಳಲ್ಲಿ, ಅಥವಾ ಅನುಕೂಲವಾಗುವ ಯೋಜನೆಗಳನ್ನು ಹಮ್ಮಿಕೊಳ್ಳುವುದಿಲ್ಲ ಸರಕಾರವನ್ನು ಎಚ್ಚರಿಸುವುದೂ ಇಲ್ಲ.ಹಾಗಾದರೆ ದೇಶ ಅಧ:ಪತನಕ್ಕೆ ಹೋದುದು ಹೇಗೆ ? ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತಾ ಇಲ್ಲಿಯವರೆಗೆ ಬಂದಿದ್ದೇನೆ ಮುಂದೆ ನೋಡಬೇಕು....

2 ಕಾಮೆಂಟ್‌ಗಳು:

shivu.k ಹೇಳಿದರು...

ಮಹೇಶಣ್ಣ,

ನಿಮ್ಮ ಮಾತು ನಿಜ....

ಚಿತ್ರಾ ಸಂತೋಷ್ ಹೇಳಿದರು...

ಕೃಷಿ ಮತ್ತು ಋಷಿಯ ಬಗ್ಗೆ ಮಾತನಾಡುವವರು ದೇಶಕ್ಕೆ ಬಿಡಿ..ತಮ್ಮ ನೆರೆಯ ಜನರಿಗೆ ಏನು ಕೊಟ್ಟಿದ್ದಾರರಂತೆ ಕೇಳಬೇಕಿತ್ತು. ತಮಗೆ ಪಾದಪೂಜೆ ಮಾಡುವಾಗ..ಪೂಜೆ ಮಾಡಿ, ಕಾಲಿಗೆ ಬಿದ್ದು, 500 ನೀಡಿದ್ರೆನೇ 'ತಥಾಸ್ತು' ಅನ್ನೋ ಸ್ವಾಮೀಜಿಗಳು ಎಷ್ಟು ಜನ ಬೇಕು? ಒಂದು ಕಾಲದಲ್ಲಿ ಮಠ-ಮಂದಿರಗಳು ತಪೋಭೂಮಿಗಳಾಗಿದ್ದವು..ಜನರಿಗೆ ಒಳ್ಳೇ ಭಾವನೆ ಇತ್ತು. ಆದರೆ ಈವಾಗ ಜನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಮಠಗಳಿಗೆ ಸರ್ಕಾರದಿಂದ ಪಡೆಯಕೆ ಮಾತ್ರ ಗೊತ್ತು, ಜನಪರ ಯೋಜನೆಗಳನ್ನು ಎಷ್ಟು ಮಠಗಳು ಕೈಗೊಳ್ಳುತ್ತವೆ? ಅಲ್ಲವೇ? ಇರಲಿ..ನಿಮ್ ಮಾತಿಗೆ ನನ್ನದೂ ಸಾಥ್...
-ಚಿತ್ರಾ