ಸಂಬಂಧಗಳು,
ಅದೊಂದು ಅದ್ಭುತ ಸೃಷ್ಠಿ. ಒಮ್ಮೆ ಅದರ ಜನನವಾದರೆ ಮುಗಿಯಿತು. ಅದಕ್ಕೆ ಮತ್ತೆ ಸಾವು ಎಂಬುದಿಲ್ಲ. ಆ ಸಂಬಂದಗಳು ಹಾಗೇ ಉಳಿದಕೊಂಡು ಬಿಡುತ್ತದೆ. ಅದಕ್ಕೆ ಎಷ್ಟೇ ಸರ್ಜರಿಗಳು ಮಾಡಿದರೂ ಮೊದಲಿನ ಸಂಬಂಧಗಳಿಂದ ಹೊಕ್ಕುಳ ಬಳ್ಳಿ ಬಿಡಿಸಿಕೊಳ್ಳುವುದೇ ಇಲ್ಲ. ಎಂತಹ ಒಂದು ಒಳ್ಳೆಯ ಲೋಕ ಇದು ಅಂತ ಅನಿಸಿಬಿಡುತ್ತದೆ ನನಗೆ.
ಒಂದು ಮಗು ಹುಟ್ಟಿಕೊಂಡಿತು ಅಂದಾಕ್ಷಣ ಅಲೊಬ್ಬಳು ಅಮ್ಮನೂ ಹುಟ್ಟಿಕೊಳ್ಳುತ್ತಾಳೆ. ಅಪ್ಪನೂ ಜನನವಾಗುತ್ತಾನೆ. ಆಗಲೇ ಹೊಸ ಅಜ್ಜ , ಅಜ್ಜಿ , ಸೋದರ ಅತ್ತೆ , ಭಾವ , ಸೋದರಮಾವ , ಅಣ್ಣ , ತಮ್ಮ , ತಂಗಿ , ಅಕ್ಕ, ಚಿಕ್ಕಪ್ಪ , ಚಿಕ್ಕಮ್ಮ , ಮತ್ತಾತ , ಮತ್ತಜ್ಜಿ . . . . . . ಅಬ್ಬಾ ಎಷ್ಟೆಲ್ಲಾ ಸಂಬಂಧಗಳ ಹುಟ್ಟು ಇಲ್ಲಿ ಆಗಿಬಿಡುತ್ತದೆ. ಎಷ್ಟು ಜನರಿಗೆ ಸಂಭ್ರಮ. ನಾನು ಅಮ್ಮನಾದೆ ಎನ್ನವುಷ್ಟೇ ಖುಷಿ ಈ ಎಲ್ಲಾ ಸಂಬಂಧಗಳಲ್ಲೂ ಕಾಣುತ್ತದೆ.ಇಲ್ಲಿ ಆ ಸಂಬಂಧಗಳಿಗಿಂತ ದೊಡ್ಡದು ಯಾವುದೂ ಅಲ್ಲ. ಎಲ್ಲರಿಗೂ ಈ ಸಂಬಂಧಗಳ ನಡುವೆ ಬದುಕಬೇಕು ಅನ್ನೋ ಹಂಬಲ ಇದ್ದೇ ಇರುತ್ತದೆ. ಆತ ಎಷ್ಟೇ ದೊಡ್ಡ ವ್ಯಕ್ತಿಯಾಗಿರಲಿ ಈ ಸಂಬಂಧಗಳಲ್ಲಿ ಅನವಿಗೆ ಪ್ರೀತಿ , ಮಮತೆ ಇದ್ದೇ ಇರುತ್ತದೆ. ಎಲ್ಲಾದರು ಒಂದು ಹೊಕ್ಕುಳ ಬಳ್ಳಿಯ ಸಂಬಂಧ ಸೃಷ್ಠಿಯಾಗಿಲ್ಲ ಎಂದಾದರೆ ಎಂತಹ ಕೊರಗು ಇರುತ್ತದೆ ಅನ್ನೋದು ಅನುಭವಿಸಿದವರಿಗೆ ಮಾತ್ರಾ ತಿಳಿಯುವುದು.
ಈ ಸಂಬಂಧಗಳಿಗೆ ನಮ್ಮ ಪುಣ್ಯ ಭೂಮಿಯಲ್ಲಿ ಇರುವಷ್ಟು ಮಹತ್ವ ಬೇರೆ ಕಡೆ ಕಾಣಿಸದು. ಇಂದು ಇವನ ಹೆಂಡತಿಯಾದರೆ , ನಾಳೆ ಅವನ ಹೆಂಡತಿಯಾಗಿ ಬಿಡುವುದು ಸುಲಭ ಮತ್ತು ಅದು ಸಾಮಾನ್ಯ ಕೂಡಾ. ಆದರೆ ಈ ಸಂಬಂಧವನ್ನು ಹೊರತುಪಡಿಸಿ ಉಳಿದ ಎಲ್ಲವೂ ಕೂಡಾ ಅಳಿಸಲು ಸಾಧ್ಯವೇ ಇಲ್ಲ.
ಒಂದು ವೇಳೆ ವ್ಯಕ್ತಿ ಇಲ್ಲವಾದರೂ ಆ ಸಂಬಂಧಗಳು ಹಾಗೇ ಉಳಿದುಕೊಳ್ಳುತ್ತವೆ. ಈಗ ಇಲ್ಲವಾದ ಅವರು ನನಗೆ ಮಾವನ , ಅಣ್ಣನೋ , ಭಾವನೋ ಆಗಿದ್ದ ಎನ್ನುವುದು ಉಳಿದುಕೊಳ್ಳುತ್ತದೆ. ಹಾಗಾಗಿ ಈ ಸಂಬಂಧಗಳಿಗೆ ಸಾವಿಲ್ಲ.
ನಿಜಕ್ಕೂ ಈ ಸಂಬಂಧಗಳ ನಡುವೆ ಪಯಣಿಸೋದೇ ಒಂದು ಖುಷಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ