11 ಮೇ 2009

ಬದುಕೆಂಬ ಪ್ರಯೋಗ ಶಾಲೆಯಲ್ಲಿ. . .




ಮುಂಜಾನೆಯ ಫ್ರೆಶ್ ಮೂಡ್‌ನಲ್ಲಿರುವಾಗ ಸಂದೇಶವೊಂದು ಬಂದಿತು. ಅಲ್ಲಿ ಒಂದೇ ಕುಟುಂಬದ ೩ ಜನ ಆತ್ಮಹತ್ಯೆ ಮಾಡಿದ್ದಾರಂತೆ. ಎಂಬ 2 ನಿಮಷದ ದೂರವಾಣಿ ಕರೆ. ಅದೆಲ್ಲೋ ಶುಭ ಕಾರ್ಯಕ್ಕೆ ಹೊರಟು ಸಿದ್ದವಾಗಿದ್ದಾಗ ಅದೇ ಮೂಡ್‌ನಲ್ಲಿ ಸ್ಥಳಕ್ಕೆ ಹೋದಾಗ ಘಟನೆ ಮನಕಲಕುವಂತಿತ್ತು. ಒಂದು ವರ್ಷದ ಮಗು ಕೂಡಾ ಸತ್ತು ಬಿದ್ದಿತ್ತು. ಮನೆಯಲ್ಲೆಲ್ಲಾ ಹೊರಳಾಡಿದ ದೃಶ್ಯ ಕಾಣುತ್ತಿತ್ತು.ಹಾಗೆ ಸಾಯುವುದಕ್ಕಿಂತ ಮುನ್ನ ಆತ ಫೋಟೋ ಇರಿಸಿ ಪೂಜೆ ಮಾಡಿದ್ದ ಎನ್ನುವುದಕ್ಕೂ ಅಲ್ಲಿ ಪುರಾವೆ ಇತ್ತು. ಆ ಬಳಿಕ ದಂಪತಿಗಳು ಹಸುಳೆ ಸಹಿತ ಸತ್ತು ಕೊಂಡಿದ್ದಾರೆ ಎಂಬುದು ಎಫ್‌ಐ‌ಆರ್. ಇಲ್ಲಿ ದಂಪತಿಗಳು ತೀರ್ಮಾನಿಸಿಯೇ ಈ ನಿರ್ಧಾರ ಕೈಗೊಂಡಿದ್ದಾರಾ ಅಥವಾ ಪತ್ನಿಗೆ ಬಲಾತ್ಕಾರವಾಗಿ ವಿಷ ಉಣಿಸಿದ್ದಾನಾ ಅನ್ನುವದಕ್ಕೂ ಮುನ್ನ ಆತನ ನಿರ್ಧಾರ ಮೊದಲೇ ಆಗಿತ್ತು.ಏಕೆಂದರೆ ಆತ ದಿನಕ್ಕೂ ಮುನ್ನ ಆಸುಪಾಸಿನ ಮನೆಗಳಿಗೆ ಭೇಟಿ ನೀಡಿದ್ದ , ಸಂಬಧಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದ , ತನ್ನ ಸಹೋದರನ್ನು ಮರುದಿನ ಬೆಳಗ್ಗೆ ಬರಲೂ ಹೇಳಿದ್ದ. ಹಾಗಗಿ ಆತನದ್ದು ಪೂರ್ವಯೋಜಿತವೇ ಅಂತ ತಿಳಿಯುತ್ತದೆ. ಆದರೆ ಆ ಮುಗ್ದ ಮಗು..?. ಅದೃಷ್ಠವಶಾತ್ ಇನ್ನಿಬ್ಬರು ಮಕ್ಕಳು ಅಜ್ಜಿ ಮನೆಗೆ ಹೋದ ಕಾರಣ ಬದುಕುಳಿದಿದ್ದಾರೆ. ಇಂತಹ ಸಾವಿಗೆ ಕಾರಣ ಅನಾರೋಗ್ಯ..!!. ಅದು ಒಂದೇ ಕಾರಣ ಆಗಿರಲಾರದು ಬಹುಶ: ಆರ್ಥಿಕ ಮುಗ್ಗಟ್ಟು ಕೂಡಾ ಇರಬಹುದು ಅಂತ ಸ್ಥಳೀಯರು ಹೇಳಿಕೊಳ್ಳುತ್ತಾರೆ. ಆದರೆ ಆ 3 ಜೀವಗಳು ಇನ್ನಿಲ್ಲವಾಗಿದೆ. ಇದು ಒಂದು ಕುಟುಂಬದ ಆತ್ಮಹತ್ಯೆ ಪ್ರಕರಣ...

ಬದುಕು ಭಾರವಾದಾಗ ಹೀಗೂ ಅಂತ್ಯವಾಗಬಹುದು.... ಇಂತಹ ಬಹುತೇಕ ಪ್ರಕರಣಗಳಲ್ಲಿ ಅದೆಲ್ಲವೂ ಒಂದು ಕ್ಷಣದ ನಿರ್ಧಾರ. ಆದರೆ ಕೆಲವೊಮ್ಮೆ ಅದು ಪೂರ್ವಯೋಜಿತವೂ ಆಗಿರುತ್ತದೆ......... ಎಂದು ಅದೇ ಗುಂಗಿನಲ್ಲಿರುವಗ ಸುದ್ದಿಯೊಂದು ಬರುತ್ತಿತ್ತು. ಅದೆಲ್ಲೋ ನಗರದಲ್ಲಿ ದಯಾ ಮರಣಕ್ಕೆ ಅರ್ಜಿ ಹಾಕ್ತಿದ್ದಾರಂತೆ ಅದಕ್ಕಾಗಿ ಕೋರ್ಟ್‌ಗೂ ಹೋಗ್ತಾರಂತೆ. ಇದೂ ಒಂದರ್ಥದಲ್ಲಿ ಆತ್ಮಹತ್ಯೆ. ಇಲ್ಲೂ ಒಂದು ಕಾರಣವಿದೆ. “ಬದುಕು ಬೇಡ”ವೆನಿಸಿದೆ. ಕಾರಣ ವಯಸ್ಸಾಗಿದೆ..... ಯಾರಿಗೂ ಹೊರೆಯಾಗಬರದು ಎನ್ನುವುದು ಇವರ ನಿರ್ಧಾರ.. ಕೆಲ ಸಮಯದ ಹಿಂದೆ ಮತ್ತೊಂದು ಸುದ್ದಿಯಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ “ನನಗೂ ಸಾವು ಬೇಕು” ಅಂದಿದ್ದ ಆದರೆ ಆತನಿಗೂ ಇಚ್ಚಿಸಿದ ಸಾವುಸಿಕ್ಕಿಲ್ಲ.

ಈ ಜೀವ ಸಾವನ್ನು ಏಕೆ ಇಚ್ಚಿಸುತ್ತದೆ...?. “ಆತ್ಮ” ಏಕೆ “ಹತ್ಯೆ” ಮಾಡಿಕೊಳ್ಳಬೇಕು ಅಂತ ಯೋಚಿಸುತ್ತೆ. ಒಂದೋ ಸಮಾಜಕ್ಕೆ ಹೆದರಿ..... ಜೀವನಕ್ಕೆ ಹೆದರಿ.... ಸಮಸ್ಯೆಗೆ ಸೋತು..... ಇವೆಷ್ಟೇ ಕಾರಣ ಮೇಲ್ನೋಟಕ್ಕೆ ಕಾಣುತ್ತದೆ. ಇದು ನಾಳೆ ಯಾರ ಬದುಕಿನಲಿ ಬರೋದಿಲ್ಲ ಅನ್ನೋ ಗ್ಯಾರಂಟಿ ಏನು..?.ಯಾಕೆಂದ್ರೆ ಇಂದು ಅತ್ಯಂತ ಸಂತೋಷದಿಂದ ಸಮಾತನಾಡಿದ ವ್ಯಕ್ತಿ, ಧೈರ್ಯದಿಂದಿದ್ದ ವ್ಯಕ್ತಿ ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಬದುಕಿಗೆ ಅಂತ್ಯ ಹಾಡುತ್ತಾನೆ. ಅಂತಹ ಅದೆಷ್ಟೋ ಘಟನೆಗಳು ಇಲ್ಲಿ ನಡೆದಿದೆ.ಅದಕ್ಕೆಲ್ಲಾ ಕಾರಣ ಮೇಲಿನ ೩ ರಲ್ಲಿ ಯಾವುದಾರೊಂದು..!!

ಬದುಕೆನ್ನುವುದು ಒಂದು ಪ್ರಯೋಗ ಶಾಲೆಯಂತೆ ಎಂದು ಹೇಳುತ್ತಿದ್ದರು ಹಿರಿಯರು.ಇಲ್ಲಿ ಎಲ್ಲ ಪ್ರಯೋಗಗಳು ನಡೆಯಬೇಕು. ಅಂತಹ ಪ್ರಯೋಗಗಳು ನಡೆಯುತ್ತಲೇ ಇರುವಾಗ ಕೆಲವೊಮ್ಮೆ “ನಮ್ಮ ಸತ್ಯ”ಗಳೂ ನಮಗೆ ಮುಳುವಾಗಬಹುದು , ವಿಶಾಲ, ತೆರೆದ ಹೃದಯವೂ ನಮ್ಮ ಹಿನ್ನಡೆಗೆ ಕಾರಣವಾಗಬಹುದು.. ಒಂದರ್ಥದಲ್ಲಿ ಶಸ್ತ್ರ ರಹಿತ ಯುದ್ದದಂತೆ..... ಆದರೆ ಈ ಪ್ರಯೋಗ ಶಾಲೆಯಲ್ಲಿ ನಡೆಯುವ ಒಂದೊಂದು ಪ್ರಯೋಗಗಳೂ ಹೊಸತೊಂದು “ರಿಸಲ್ಟ್ “ ಕೊಡುತ್ತವೆ. ಹಾಗಗಿ ಆ ರಿಸಲ್ಟ್‌ಗಳ ಆಧಾರದಲ್ಲಿ ಬದುಕನ್ನು ರೂಪಿಸುತ್ತಾ ಬೆಳೆಯಬೇಕು ಅಂತ ಎಲ್ಲೋ ಓದಿದ ಮತ್ತು ಇನ್ನೂ ಕೆಲವರ ಅನುವಭದ ಮಾತು. ಆದರೆ ಇಂದು ಈ ಪ್ರಯೋಗ ಶಾಲೆಯಲ್ಲಿ ಕ್ಷಣಿಕ ಸುಖದ ಬಗ್ಗೆ ಯೋಚಿಸುವ ಜನ ಹೆಚ್ಚಿದ್ದಾರೆ. ಹಾಗಾಗಿ ಯಾವುದೇ ಪ್ರಯೋಗಗಳಾದರೂ ಅದರ ರಿಸಲ್ಟ್ ಕೂಡಾ ಕ್ಷಣದಲ್ಲೇ ಸಿಗಬೇಕು ಮತ್ತು ಹೇಳಬೇಕು. ಮತ್ತು ಆ ರಿಸಲ್ಟ್ ಗೆಲುವೇ ಆಗಬೇಕು ಎನ್ನುವ ನಿರ್ಧಾರ ಮಾನಸಿಕವಾಗಿರುತ್ತದೆ. ಕೆಲವೊಮ್ಮೆ ಅಂತಹ ಯೋಚನೆಗಳೇ ನಮ್ಮನ್ನು ದಾರಿ ತಪ್ಪಿಸಿ ಬಿಡುತ್ತವೆ. ಆಗ ಯೋಚನೆಯ ದಾರಿಯೂ ತಪ್ಪಿಬಿಡುತ್ತದೆ. ಹಾಗಗಿ ಇಂದು ಪ್ರಯೋಗ ಶಾಲೆಯಲ್ಲಿ ಯಾವಗಲೂ ಗೆಲುವಾಗುತ್ತದೆ ಎನ್ನವ ಭ್ರಮೆಯಲ್ಲಿರದೆ ಸೋಲೂ ಇರುತ್ತದೆ ಎನ್ನುವ ವಾಸ್ತವವನ್ನು ಅರಿತು ಆ ಸೋಲೇ “ಸವಾಲಾದಾಗ” ಮುಂದೆ ಗೆಲುವು ಇದ್ದೇ ಇರುತ್ತದೆ ಎನ್ನುವ ಮನಸ್ಥಿತಿ ಬರಬೇಕು......

ಹಾಗಗಿ ಆತ್ಮಹತ್ಯೆ.. ಮತ್ತು ಸಾವಿಗಾಗಿ ಅರ್ಜಿ ಹಾಕುವುದು ಬಿಟ್ಟು ಸಾವು ಬರುವವರೆಗೆ ಸಾಧಿಸುವುದು ಒಳ್ಳೆಯದಲ್ವೇ.....?.

2 ಕಾಮೆಂಟ್‌ಗಳು:

Roopa ಹೇಳಿದರು...

ಆತ್ಮಹತ್ಯೆಯ ಯೋಚನೆಯೇ ಹಾಗೆ ಅದು ಕ್ಷಣಿಕ ಆಲೋಚನೆ. ಆ ಕ್ಷಣ ಕಳೆದು ಹೋದರೆ ನಾವೆಂಥಾ ಘೋರ ಕೆಲಸ ಮಾಡುತ್ತಿದ್ದೆವು ಎನ್ನುವ ಅರಿವು ಉಂಟಾಗುತ್ತೆ . ಆದರೆ ಆ ಕ್ಷಣವನ್ನು ಮೀರುವುದರಲ್ಲಿ ಬಹಳ ಜನ ಎಡವುತ್ತಾರೆ
ಆ ಮಜಲನ್ನೂ ನಾನು ದಾಟಿ ಬಂದಿರುವುದರಿಂದ ಈ ಅನುಭವದ ನುಡಿ.
ನಿಮ್ಮ ಬ್ಲಾಗ್‌ಗೆ ಇದು ನನ್ನ ಮೊದಲ ಪ್ರವೇಶ. ಓದಿದ ಮೊದಲ ಲೇಖನವೇ ಚಿಂತನೆಗೆ ಹಚ್ಚಿತು. ಇನ್ನು ಮುಂದಿನ ಲೇಖನಗಳನ್ನು ಓದುವುದಿದೆ.

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಥ್ಯಾಂಕ್ಯೂ "ರೂಪಾ"....,

ಬದುಕೆಂಬ ಪ್ರಯೋಗ ಶಾಲೆಯೇ ಹಾಗಲ್ವೇ..?. ಅಲ್ಲಿನ ಒಂದು ನೋವು ಕೂಡಾ ವಿವಿದ ಮಜಲಿಗೆ ತಲಪಿ ಬಿಡುತ್ತದೆ. ಆದರೆ ಅದೆಲ್ಲವನ್ನೂ ಮೀರಿ ಸವಾಲಾಗಿ ಸ್ವೀಕರಿಸುವುದೇ ಇರುವುದು... ಅಲ್ವಾ..??