ಇಂದು ಮನೆಯ ದಾರಿಯತ್ತ ಬರುತ್ತಿರಬೇಕಾದರೆ ಸಕತ್ತಲು ಆವರಿಸಿತ್ತು.ಒಂದೆಡೆ ವಾಹನಗಳು ಸಾಲು ನಿಂತಿದ್ದವು. ಅವುಗಳನ್ನು ದಾಟಿ ಮುಂದಕ್ಕೆ ಬಂದಾಗ ಅಲ್ಲೊಂದು ಬೈಕ್ ಮಗುಚಿ ಬಿದ್ದಿತ್ತು.. ಯುವಕನೊಬ್ಬ ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ. ಆಚೀಚೆ ನೋಡಿದಾಗ ಅಲ್ಲಿ ಯಾರೊಬ್ಬರೂ ಸುಳಿದಾಡುವುದು ಕಂಡುಬಂದಿರಲಿಲ್ಲ.ಪಕ್ಕದಲ್ಲಿ ಇನ್ನೊಬ್ಬ ಗಾಯಗಳೊಂದಿಗೆ ಸುಮ್ಮನೆ ನಿಂತಿದ್ದ .ವಾಹನಗಳ ಸಾಲು ಹೆಚ್ಚಿತು. ಒಬ್ಬೊಬ್ಬರೇ ಬಂದಿಳಿದು ನೋಡಿದಾಗ ಒಬ್ಬ ಅಂದ ಇವನ ನನಗೆ ಗುರುತಿದೆ.. ತಕ್ಷಣ ಆ ಯುವಕನ ಮೇಲೆತ್ತುವ ಪ್ರಯತ್ನ ನಡೆಯಿತು.ಮುಖ ತುಂಬಾ ಗಾಯಗಳಾಗಿತ್ತು. ಮತ್ತೆ ಮತ್ತೆ ವಿಚಾರಿಸಿದಾಗ ಆತ ಅಮಲು ಸೇವಿಸಿ ವಾಹನ ಚಲಾಯಿಸುತ್ತಿದ್ದ ವಿಷಯ ತಿಳಿಯಿತು.. ಹಾಗಾಗಿ ಒಬೊಬ್ಬರೇ ಹೊರಟರು.ಇನ್ನೊಬ್ಬರು ವಾಹನ ಗೊತ್ತು ಪಡಿಸಿ ಆಸ್ಪತ್ರೆಗೆ ಕೊಂಡೊಯ್ಯಲು ಹೋದರು. ನಿಜವಾಗೂ ಅವರು ಹೋಗಬೇಕಾದ ದಾರಿ ಅದಾಗಿರಲಿಲ್ಲ. ಕುಡಿತದ ಅಮಲಿನಲಿ ಅವರು ಈ ದಾರಿಯಾಗಿ ಬಂದಿದ್ದರು.
ಈ ಘಟನೆಯ ನಂತರ ದಾರಿಯಲ್ಲಿ ಬರುವಾಗ ನೆನಪಾದ ಒಂದು ಘಟನೆ ..
ಒಂದು ಕಡೆ ದಂಪತಿಗಳು ಕಾರ್ಯಕ್ರಮವೊಂದಕ್ಕೆ ಹೊರಟಿದ್ದರು. ಅವರ ವಾಹನ ಹೆದ್ದಾರಿ ತಲಪಿ ಅಲ್ಲಿಂದ ಮುಂದೆ ಸಾಗುತ್ತಿತ್ತು. ಈ ರಕ್ಕಸ ಲಾರಿಗಳಿಗೆ ಜೀವಗಳ ಬೆಲೆಗೊತ್ತಿಲ್ಲ ಅದರ ಚಾಲಕರೂ ಹಾಗೆ ಯಾವಾಗಲೂ ಕುಡಿಯುತ್ತಲೇ ವಾಹನ ಚಲಾಯಿಸುವುದು ಎನ್ನುವ ರೂಢಿಯೂ ಇದೆ.ಇಲ್ಲಿ ಅದೇ ಆಯಿತು. ವಾಹನಕ್ಕೆ ಲಾರಿ ಡಿಕ್ಕಿ ಹೊಡೆಯಿತು. ಅದರಲ್ಲಿದ್ದ ಇಬ್ಬರಿಗೂ ಗಾಯವಾಯಿತು.. ಹೆಂಡತಿ ವಾಹನದ ಅಡಿಯಲ್ಲಿ ಸಿಲುಕಿ ಚೀರಾಡುತ್ತಿದ್ದಾಳೆ.. ಗಂಡ ತೀವ್ರ ಗಾಯಗೊಂಡು ದೂರದಲ್ಲಿ ಬಿದ್ದಿದ್ದಾನೆ.. ಹೆಂಡತಿಯನ್ನು ರಕ್ಷಿಸಲಾಗದೆ ತೊಳಲಾಡುತ್ತಿದ್ದಾನೆ.. ಸಹಾಯಕ್ಕೆ ಕರೆದರೆ ಯಾರೊಬ್ಬರೂ ಬರುತ್ತಿಲ್ಲ.ಕಣ್ಣೆದುರೇ ಹೆಂಡತಿ ಸತ್ತು ಹೋದಳು..
ಇನ್ನೊಂದು ಘಟನೆ..
ಅವರು ತುರ್ತು ಕಾರ್ಯ ನಿಮಿತ್ತ ಬೆಂಗಳೂರಿಗೆ ರಾತ್ರಿ ತೆರಳಿದ್ದರು. ಒಂದೆಡೆ ವಾಹನದ ಚಾಲಕ ತೂಕಡಿಸಿದ ಕ್ಷಣಾರ್ಧದಲ್ಲಿ ವಾಹನ ಮರಕ್ಕೆ ಡಿಕ್ಕಿ ಹೊಡೆಯಿತು. ಅದರಲ್ಲಿದ್ದ ಒಂದಿಬ್ಬರಿಗೆ ತೀವ್ರ ಗಾಯವಾಯಿತು.ಅದು ರಾತ್ರಿ ವೇಳೆ ಬೇರೆ ಯಾವುದೇ ಒಂದು ವಾಹನ ನಿಲ್ಲಿಸಿಲ್ಲ. ವಾಹನದಲ್ಲಿದ್ದ ಸಣ್ಣ ಪುಟ್ಟ ಗಾಯಳುಗಳೂ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ನಿಲ್ಲಿಸಿ ಗಂಭೀರ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸುವುದಕ್ಕಾಗಿ ಹೆಣಗಾಡಿದರು.ಯಾವುದೊಂದು ವಾಹನವೂ ನಿಲ್ಲಿಸಿಲ್ಲ. ಹಾಗಾಗಿ ಸಕಾಲ ಚಿಕಿತ್ಸೆ ಕೊಡಿಸಲಾಗದೆ ಇಬ್ಬರು ಕಣ್ಣಮುಂದೆಯೇ ಸತ್ತು ಹೋದರು..
ಇವೆರಡು ಅಪಘಾತದ ಸ್ಯಾಂಪಲ್ಗಳು. ವಾಹನದಲ್ಲಿ ವೇಗವಾಗಿ ಹೋಗುವಾಗ ನಮಗೆ ಆನಂದವೋ ಆನಂದ .. ಆದರೆ ಅಲ್ಲೇನಾದರೂ ಆಕಸ್ಮಿಕ ನಡೆದರೆ ನಮ್ಮನ್ನು ನೋಡುವ ಜನರೇ ಇಲ್ಲ.ಎಲ್ಲಾದರೂ ನಮ್ಮ ಪರಿಚಿತರಿದ್ದರೆ ಬದುಕುಳಿಯ ಬಲ್ಲುದೋ ಏನೋ.. ಹಾಗಾಗಿ ಒಂದು ಅಪಘಾತದಲ್ಲಿ ಗಾಯಗೊಂಡವರಿದ್ದರೆ ಅವರಿಗೆ ಮಾನವೀಯ ನೆಲೆಯಲ್ಲಿ ನಾವು ಸಹಾಯ ಮಾಡಬೇಕು.. ನಾಳಿನ ನಮ್ಮ ಚಿಂತೆಯಲ್ಲಿ.. ಅದಕ್ಕೂ ಮುನ್ನ ಅಪಘಾತವಾಗದಂತೆ ಎಚ್ಚರ ವಹಿಸುವುದು ಸೂಕ್ತ ಅಲ್ವಾ..
3 ಕಾಮೆಂಟ್ಗಳು:
ಚಿಂತಿಸಲೇಬೇಕಾದ ವಿಷಯ
nalku dinada baduku alva
Supportಗೆ ಥ್ಯಾಂಕ್ಯೂ ಈ ಕನಸು ಮೀಡಿಯಾ ಮತ್ತು ಪ್ರವೀಣ ಚಂದ್ರ..
ಕಾಮೆಂಟ್ ಪೋಸ್ಟ್ ಮಾಡಿ