19 ಸೆಪ್ಟೆಂಬರ್ 2008
ಟಾಪ್ ಸಿ ಎಂ...!!??
ಏನ್ರಿ ಕತೆಯಿದು.?.ಅತ್ತ ನಮ್ಮ ಸಿ ಎಂ , ಸರಕಾರ ವಿವಿಧ ಸಮಸ್ಯೆಯಲ್ಲಿದೆ. ಒಂದಿಲ್ಲೊಂದು ತೂಗುಕತ್ತಿ ಬರುತ್ತಿದೆ. ಒಂದರ್ಥದಲ್ಲಿ ಸರಕಾರಕ್ಕೆ , ಮುಖ್ಯಮಂತ್ರಿಗಳಿಗೆ "ಬಂಧನ". ನಾನು ಕಂಡದ್ದು ಅದನ್ನೇ. ಹಾಗೇ ಸುತ್ತಾಡುತ್ತಾಯಿದ್ದಾಗ ವಾಹನವೊಂದರ ಟಾಪ್ ಗೆ ಕಟ್ಟಿದ ಬ್ಯಾನರ್ ನಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿ ಕಾಣಿಸಿಕೊಂಡದ್ದು ಹೀಗೆ.
ಅಲ್ಲಾರೀ, ನಾವು ಹೇಗೆ ಬೇಕಾದರೂ ಯಡಿಯೂರಪ್ಪರನ್ನ ನೋಡಿಕೊಳ್ಳೋಣ. ಅದೆಲ್ಲವೂ ರಾಜಕೀಯವಾಗಿಯೇ ಇರಲಿ. ಆದರೆ ಮುಖ್ಯಮಂತ್ರಿ ಸ್ಥಾನಕ್ಕೆ ಗೌರವವಿದೆಯಲ್ಲಾ ಅದನ್ನು ಪ್ರಜೆಗಳು ಸ್ವಲ್ಪವಾದರೂ ಉಳಿಸಿಕೊಳ್ಳಬೇಡವೇ?.ಅವರು ಮುಖ್ಯಮಂತ್ರಿಯಾಗಿರುವಷ್ಟು ಕಾಲವಾದರೂ ಆ ಬ್ಯಾನರ್ ನ್ನು ಹಾಗೆ ಕಟ್ಟಬಾರದಾಗಿತ್ತು. ಆದರೆ ಅಣಕವೆಂಬಂತೆ ಇಂದು ಯಡಿಯೂರಪ್ಪನವರ ಸ್ಥಿತಿಯೂ ಹಾಗೆಯೇ ಇದೆ.ಅಧಿಕಾರ ವಹಿಸಿಕೊಂಡಾಗಿನಿಂದ ಗಲಾಟೆಗಳೇ ಗಲಾಟೆಗಳೂ. ಗೊಬ್ಬರ ಗಲಾಟೆಯಿಂದ ಆರಂಭಿಸಿ ನಿನ್ನೆಯವರೆಗೆ ನಡೆದ ಗಲಭೆಯವರೆಗೆ ಎಲ್ಲವೂ ಸಿ ಎಂ ಅವರನ್ನು ಬಂಧನದಲ್ಲಿರುವಂತೆ ಮಾಡಿದೆ.ಅದಕ್ಕೆ ಪರಿಗಾರವೇನು ಎಂಬುದರ ಬಗ್ಗೆ ಚಿಂತನೆ ನಡೆಸುವ ಹೊತ್ತಿಗೆ ಇಲ್ಲಿ ವಾಹನದಲ್ಲಿ ಕಾಣಿಸಿಕೊಂಡದ್ದು ಹೀಗೆ.
ಇದು ಚುನಾವಣೆಯ ಸಂದರ್ಭದಲ್ಲಿ ಬಳಸಿಕೊಂಡ ಬ್ಯಾನರ್ ಈಗ ವಾಹನದ ಟಾಪ್ ಗೆ ಬಳಕೆಯಾಗಿದೆ ನಿಜ. ಆದರೆ ರಾಜ್ಯದ ಮುಖ್ಯಮಂತ್ರಿಯವರನ್ನು ಹೀಗೆ "ಬಂಧಿಸುವುದು" ಸರಿಯಲ್ಲ ಎಂಬುದು ನನ್ನ ಭಾವನೆ. ರಾಜಕೀಯವಾಗಿ ಎಷ್ಟೇ ಟೀಕೆಗಳು ಇರಲಿ. ದುರದೃಷ್ಟವಶಾತ್ ಅದೇ ಪಕ್ಷದ ಯಾರೊಬ್ಬರೂ ಮಾತನಾಡುತ್ತಿಲ್ಲ.
ಬಹುಶ: ನನಗೆ ಅನ್ನಿಸುವ ಹಾಗೆ ಸಿಂದು ಅಷ್ಟು ಬೇಗನೆ ಜನ ಮರೆತುಬಿಡುತ್ತಾರೆ. ಚುನಾವಣೆಯ ನಂತರ ಎಲ್ಲವನ್ನೂ ಮರೆತು ಅಲ್ಲಿ ಸಿಕ್ಕಿದ್ದನ್ನು ಬಳಸಿಕೊಂಡು ತಮ್ಮ ಪಾಡಿಗೆ ತಾವಿರುತ್ತಾರೆ. ಅಲ್ಲಿ ಜನಪ್ರತಿನಿಧಿಗಳು ಅಯ್ಯೋ "ಅವರಿಗೆ" ಅನ್ಯಾಯವಾಗಿದೆ , ಇವರಿಗೆ " ಅನ್ಯಾಯವಾಗಿದೆ" ಎಂದು ಕೂಗುತ್ತಾರ್‍ಎ. ಹಾಗಾಗಿ ಯಡಿಯೂರಪ್ಪನವರಿಗೂ ಈ ಅವಸ್ಥೆ ಬಂದಿದೆಯೋ ಗೊತ್ತಿಲ್ಲ. ಕಾರಣ ಕೇಳಲು ಆ ವಾಹನ ಚಾಲಕ ಸಿಕ್ಕಿಲ್ಲ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
2 ಕಾಮೆಂಟ್‌ಗಳು:
papa CM...
ನಮ್ಮ ಮುಖ್ಯ ಮಂತ್ರಿಗಳಿಗೆ ಈ ಗತಿ ಬಾರದಿತ್ತು. ಸಮ್ಮಿಶ್ರ ಸರ್ಕಾರದಲ್ಲೂ ಹೀಗೆ ಅಂದ್ರೆ ಈಗಲೂ ಈ ರೀತಿಯ ಬಂದನವೇ ಪಾಪ ಕಣ್ರೀ...! ನೀವು ಕಾದು ನೋಡಿ ತೆಗೆದ ಫೋಟೋ ಚೆನ್ನಾಗಿದೆ. good.
ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನನ್ನದು ಫೋಟೊಗ್ರಫಿ ಪ್ರಪಂಚ. ನೀವು ನನ್ನ ಬ್ಲಾಗಿನೊಳಗೆ ಕಾಲಿಟ್ಟರೇ ಅಲ್ಲಿ ನಿಮಗಿಷ್ಟವಾದ ಛಾಯಾಚಿತ್ರಗಳು ಅದರ ಕುರಿತಾದ ಲೇಖನಗಳು ಸಿಗಬಹುದು. ಬನ್ನಿ.
ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com/
ಹೊಸ ರೀತಿಯ ವಿಚಾರದ ಬರವಣಿಗೆಯ ನನ್ನ ಬ್ಲಾಗಿ ವಿಳಾಸ:
http://camerahindhe.blogspot.com/
ಕಾಮೆಂಟ್ ಪೋಸ್ಟ್ ಮಾಡಿ